SUDDILIVE || SHIVAMOGGA
ಕುವೆಂಪು ವಿವಿಯ ಕುಲಸಚಿವರಾಗಿ ಜಿಪಂ ಸಿಇಒ ನೇಮಕ-ZP CEO appointed as Kuvempu University Registrar
ಇಲ್ಲಿನ ಕುವೆಂಪು ವಿಶ್ವವಿದ್ಯಾನಿಲಯದ ರಿಜಿಸ್ಡ್ರಾರ್ ಆಗಿ ಜಿಲ್ಲಾ ಪಂಚಾಯತ್ ಸಿಇಒ ಹೇಮಂತ್ ಕುಮಾರ್ ಅವರಿಗೆ ಜವಬ್ದಾರಿ ವಹಿಸಿ ಸರ್ಕಾರ ಆದೇಶಿಸಿದೆ. ಈ ಸ್ಥಾನದಲ್ಲಿದ್ದ ಮಂಜುನಾಥ್ ಅವರಿಗೆ ಯಾವುದೇ ಜಾಗ ತೋರಿಸದೆ ವರ್ಗಗೊಳಿಸಿರುವುದು ಅಚ್ಚರಿ ಮೂಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವತಿಯಿಂದಲೇ ಕುವೆಂಪು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಆಗಿ ನೇಮಕಗೊಂಡಿದ್ದ ಮಂಜುನಾಥ್ ಅವರಿಗೆ ಜಾಗ ತೋರಿಸದೆ ವರ್ಗವಾಗಿದೆ. ಸಿಬ್ಬಂದಿಗಳಿಗೆ ಕಿರುಕುಳು, ಭ್ರಷ್ಠಾಚಾರದ ಆರೋಪಗಳು ಇವರ ವಿರುದ್ಧ ಕೇಳಿ ಬಂದಿದ್ದವು.
ಇವರ ಆರೋಪಗಳ ವಿರುದ್ಧ ಮಾಧ್ಯಮಗಳು ಸುದ್ದಿ ಮಾಡಿದ್ದವು. ಎಬಿವಿಪಿ ವಿದ್ಯಾರ್ಥಿ ಸಂಘಟನೆ 2024 ರಲ್ಲೇ ದೂರ ಶಿಕ್ಷಣ ಇಲಾಖೆಯಲ್ಲಿ ಪ್ರವೇಶಾತಿಗೆ ಮತ್ತು ಇನ್ನಿತರೆ ನಿರ್ವಹಣೆಗೆ ಎಲ್ ಎಂಎಸ್ ಸಾಫ್ಟ್ ವೇರ್ ಅಳವಡಿಕೆಯಲ್ಲಿ ಭ್ರಷ್ಠಾಚಾರ, ಅಂಕಪಟ್ಟಿ ಮುದ್ರಣದಲ್ಲಿ ಸರ್ಕಾರದ ನಿಯಮಗಳನ್ನ ಬದಿಗೊತ್ತಿ ಖಾಸಗಿಯವರಿಗೆ ಗುತ್ತಿಗೆ ನೀಡಿರುವ ಕುಲಪತಿ, ಕುಲಸಚಿವರು ಮತ್ತು ಪರೀಕ್ಷಾಂಗ ಕುಲಸಚಿವರ ವಿರುದ್ಧ ದೂರು ದಾಖಲಾಗಿದ್ದು ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿತ್ತು.
ಈಗ ಕುಲಸಚಿವರಾದ ಮಂಜುನಾಥ್ ಅವರನ್ನ ವರ್ಗಾಯಿಸಿ ಇವರ ಸ್ಥಾನಕ್ಕೆ ಜಿಲ್ಲಾ ಪಂಚಾಯತ್ ಸಿಇಒ ಹೇಮಂತ್ ಕುಮಾರ್ ಅವರಿಗೆ ಪ್ರಭಾರ ಜವಬ್ದಾರಿ ನೀಡಿ ಆದೇಶಿಸಿದೆ.
ZP CEO appointed as Kuvempu University Registrar

