SHIVAMOGGA || SHIVAMOGGA
ಮುಸ್ಲೀಂ ಗೂಂಡಗಳದ್ದೇ ಕೆಲಸವಿದು-ಈಶ್ವರಪ್ಪ- This is the work of Muslim goons - Eshwarappa
ಶಿವಮೊಗ್ಗದ ಸೂಳೆಬೈಲಿನಲ್ಲಿ ಗುಡ್ಡೇಮರಡಿ ದೇವಸ್ಥಾನದ ಬಳಿಯಲ್ಲಿರುವ ಸಂಕೇತ್ ಸಮಾದಿ ಒಡೆದಿರುವ ಬಗ್ಗೆ ಮಾಜಿ ಡಿಸಿಎಂ ಈಶ್ವರಪ್ಪ ಎಸ್ಪಿ ನಿಖಿಲ್.ಬಿ ಅವರ ಗಮನಕ್ಕೆ ತಂದಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಬಗ್ಗೆ ಡಿಸಿಯವರೊಂದಿಗೆ ಮಾತನಾಡಿದ ಮಾಧ್ಯಮಗಳಿಗೆ ಶರಾವತಿ ಪಂಪ್ಡ್ ಸ್ಟೋರೇಜ್ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದ ವೇಳೆ ಪತ್ರಕರ್ತರು ಈಶ್ವರಪ್ಪನವರ ಗಮನಕ್ಕೆ ಸಂಕೇತ್ ಸಮಾದಿ ಒಡೆದಿರುವನ್ನ ತಂದಾಗ ಎಸ್ಪಿಯವರಿಗೆ ಪತ್ರಕರ್ತರ ಮೊಬೈಲ್ ನಲ್ಲಿದ್ದ ಸಂಕೇತ್ ಸಮಾದಿ ಹಾನಿಪಡಿಸಿದ ಫೊಟೊ ತೋರಿಸಿ ಕ್ರಮಕ್ಕೆ ಆಗ್ರಹಿಸಿದರು.
ಮಾಜಿ ಡಿಸಿಎಂ ಅವರ ಮನವಿಯನ್ನ ಆಲಿಸಿದ ಎಸ್ಪಿ ನಿಖಿಲ್ ಈ ಬಗ್ಗೆ ಈಗಾಗಲೇ ಎರಡು ತಂಡವನ್ನ ರಚಿಸಿದ್ದೇವೆ. ಅದರಲ್ಲೂ ತುಂಗ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ನ್ನೂ ಸಹ ದಾಖಲಿಸಲಾಗಿದೆ. ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ನಂತರ ಎಸ್ಪಪಿ ಅವರಿಗೆ ದುಷ್ಕೃತ್ಯ ನಡೆಸಿದವರು ಯಾರೇ ಆದರೂ ಬಿಡಬಾರದು. ಸಂಕೇತ್ ಸತ್ತಾಗಲೂ ಇದೇ ಆಯಿತು. ಸತ್ತ ನಂತರವೂ ನೆಮ್ಮದಿಯಿಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದ ಈಶ್ವರಪ್ಪ, ಇಷ್ಟೊಂದು ಹಿಂದುಗಳ ತಾಳ್ಮೆ ಪರೀಕ್ಷಿಸಬಾರದು. ಇದು ಮುಸ್ಲೀಂ ಗೂಂಡಗಳದ್ದೇ ಕೆಲಸವಿದು. ಶಿವಮೊಗ್ಗಕ್ಕೆ ಎಸ್ಪಿ ಆಗಿ ಬಂದ ಮೇಲೆ ನೀವು ಒಳ್ಳೆ ಕೆಲಸ ಮಾಡುತ್ತಿದ್ದೀರಿ. ಆದರೆ ಇಷ್ಟೊಂದು ನೋವಾಗುವಂತೆ ಕೆಲಸ ಯಾರೂ ಮಾಡಬಾರದು ಆರೋಪಿಗಳನ್ನ ಆದಷ್ಟು ಬೇಗ ಬಂಧಿಸಿ ಕ್ರಮ ಜರುಗಿಸುವಂತೆ ಕೋರಿದರು.
This is the work of Muslim goons - Eshwarappa

