SUDDILIVE || SHIVAMOGGA
ಶಿವಮೊಗ-ಮಧ್ಯರಾತ್ರಿ ಸುರಿದ ಮಳೆಯ ಅವಾಂತರ- Shivamogga-Midnight rain causes havoc
ಶಿವಮೊಗ್ಗ ನಗರದಲ್ಲಿ ಮಧ್ಯರಾತ್ರಿಯಲ್ಲಿ ಹೊಡೆದ ಮಳೆ ಶರಾವತಿ ನಗರದ ನಿವಾಸಿಗಳ ನಿದ್ದೆ ಕಡೆಸಿದೆ. ರಾಜಾಕಾಲುವೆ ಸ್ವಚ್ಛಗೊಳಿಸದ ಹಿನ್ಬಲೆಯಲ್ಲಿ 10-15 ಮನೆಗಳಿಗೆ ಗಲೀಜು ನೀರು ನುಗ್ಗಿದೆ.
ಅದರಂತೆ ಸಾಗರ ರಸ್ತೆಯಲ್ಲಿರುವ ಎಸ್ ಎಸ್ ಇಂಡ್ರಸ್ತೀಯಲ್ ಗೆ ಮಳೆ ನೀರು ನುಗ್ಗಿದೆ. ಎಫ್ ಸಿ ಐ ಕಾಂಪೌಂಡ್ ಸಹ ಕುಸಿದು ಬಿದ್ದಿದೆ. ಗೋಡೆ ಬಿದ್ದ ರಭಸಕ್ಕೆ ವಿದ್ಯುತ್ ಕಂಬ ಉರುಳಿಬಿದ್ದಿದೆ. ಟಾಟಾ ಏಸ್ ಜಖಂಗೊಂಡಿದೆ. ಮಧ್ಯರಾತ್ರಿ ಗುಡುಗು ಮಿಂಚು ಸಮೇತ ಹೊಡೆದ ಮಳೆ ಅಕ್ಷರಶಃ ಸಾರ್ವಜನಿಕರನ್ನ ಹೈರಾಣು ಮಾಡಿದೆ.
ಶರಾವತಿ ನಗರದ 7 ತಿರುವಿನಲ್ಲಿದ್ದ ಗೌರಮ್ಮ, ಮಂಜುನಾಥ್, ಪದ್ಮಮ್ಮ, ಮಾದಯ್ಯ, ಲಿಲ್ಲಿ ಎಂಬುವರ ಮನೆಗೆ ಎದೆ ಅಗಲದ ನೀರು ನುಗ್ಗಿದ ಕಾರಣ ಮನೆಗಳ, ಫ್ರಿಡ್ಜು, ಟಿವಿ, ವಾಷಿಂಗ್ ಮಿಷನ್ ಮೊದಲಾದ ಯಂತ್ರೋಪಕರಣಗಳು ಹಾಳಾಗಿವೆ. ಇಲ್ಲಿನ ಮನೆಗಳು ತಗ್ಗಿನ ಪ್ರದೇಶದಲ್ಲಿರುವುದರಿಂದ ಮಳೆ ನೀರು ಸಲೀಸಾಗಿ ನುಗ್ಗುಲಿದೆ.
ಇನ್ನು ಸಾಗರ ರಸ್ತೆಯಲ್ಲಿರುವ SS Industriesಗೆ ನಿನ್ನೆ ಸುರಿದ ಅಧಿಕ ಮಳೆಯಿಂದ ಇಂಡಸ್ಟ್ರಿಯಲ್ಲಿ ನೀರು ಒಳಗೆ ನುಗ್ಗಿದೆ. ಮುಳ್ಳು ತಂತಿ ಮತ್ತು ಚೈನ್ ಲಿಂಕ್ ಮೆಶ್ ತಯಾರಿಸುವ ಇಂಡಸ್ಟ್ರೀಸ್ ನಲ್ಲಿ ತಯಾರಿಸಲಾಗಿದ್ದ ಲಕ್ಷಾಂತರ ರೂ ಮೌಲ್ಯದ ತಂತಿಗಳು ಮತ್ತು ಇತರೆ ವಸ್ತುಗಳಿಗೆ ಮಳೆ ನೀರು ನುಗ್ಗಿ ಹಾನಿಗೊಳಗಾಗಿದೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳು ನೀರನ್ನು ಫ್ಲೋಟಿಂಗ್ ಪಂಪ್ ಸಹಾಯದಿಂದ ಹೊರಕ್ಕೆಹಾಕಿದ್ದಾರೆ. ಈ ಕಾರ್ಯಚರಣೆಯಲ್ಲಿ ಅಧಿಕಾರಿ ಸಿಬ್ಬಂದಿ I/cFSTO ಹುಸೇನ್ ASO ನೂರುಲ್ಲಾ LF ಸುನಿಲ್ FD ಸತೀಶ್FM ಅಭಿಷೇಕ್ ಭಾಗಿಯಾಗಿದ್ದರು.
ಆಲ್ಕೊಳ ವೃತ್ತದಿಂದ ವಿಕಾಸ ಶಾಲೆಗೆ ಹೋಗುವ ರಸ್ತೆಯಲ್ಲಿ ಎಫ್ಸಿ ಐ ಕಾಂಪೌಂಡ್ ಕುಸಿದಿದೆ. ಎಸ್ಫ ಸಿಐ ಕಾಂಪೌಂಡ್ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಟಾಟಾ ಏಸ್ ಮೇಲೆ ಕಂಪೌಂಡ್ ಉರುಳಿದೆ.ವಾಹನ ಜಖಂ ಆಗಿದೆ. ಅದರ ಜೊತೆಗೆ ಗೋಡೆ ಬಿದ್ದ ರಭಸಕ್ಕೆ ಲೈಟ್ ಕಂಬ ಸಹ ಉರುಳಿದೆ.
Shivamogga-Midnight rain causes havoc




