ಬಿಎಸ್ ವೈ ಗೆ ಕೃತಜ್ಞತಾ ಸಲ್ಲಿಸುವ ಕಾರ್ಯಕ್ರಮ-ಆರಗ- A program to express gratitude to BSY - Araga

 SUDDILIVE || SHIVAMOGGA

ಬಿಎಸ್ ವೈ ಗೆ ಕೃತಜ್ಞತಾ ಸಲ್ಲಿಸುವ ಕಾರ್ಯಕ್ರಮ-ಆರಗ- A program to express gratitude to BSY - Araga    

Bsy, gratitute


ಚಿತ್ರದುರ್ಗದಲ್ಲಿ ಮೇ.9 ರಂದು ನಡೆಯುತ್ತಿರುವ ಬಿ.ಎಸ್ ಯಡಿಯೂರಪ್ಪನವರ ಅಭಿಮಾನೋತ್ಸವದ ಅಂಗವಾಗಿ ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸಂಸದರು ಮತ್ತು ಶಾಸಕರ ಸುದ್ದಿಗೋಷ್ಠಿ ನಡೆದಿದೆ. 

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಉದ್ದೇಶ, ಬಿಎಸ್ ವೈ ಯುವಕರಿಗೆ ಹೇಗೆ ಮಾರ್ಗದರ್ಶಕರು ಹಾಗೂ ರಾಜಕೀಯ ವ್ಯಕ್ತಿಗಳಿಗೆ  ಹಾಗೂ ಹೋರಾಟಗಾರರಿಗೆ ಹೇಗೆ ಆದರ್ಶಕರಾಗಿದ್ದಾರೆ ಎಂಬುದನ್ನ ಶಾಸಕ ಆರಗ ಜ್ಞಾನೇಂದ್ರ ಮತ್ತು ಸಂಸದ ರಾಘವೇಂದ್ರ ಬಿಚ್ಚಿಟ್ಟಿದ್ದಾರೆ. 

ಮೊದಲಿಗೆ ಮಾತನಾಡಿದ ಸಂಸದ ರಾಘವೇಂದ್ರ ಚಿತ್ರದುರ್ಗದಲ್ಲಿಯೇ  ಬಿಎಸ್ ವೈ ಅಭಿಮಾನೋತ್ಸವ ಯಾಕೆ ಎಂಬುದನ್ನ ವಿವರಿಸಿದರು.  ಚಿತ್ರದುರ್ಗ ನಾರಿಶಕ್ತಿಗೆ ಬೆಂಬಲಿಸಿದ ನಾಡಾಗಿದೆ. ಒನಕೆ ಓಬವ್ವ ತನ್ನ ಊರಿಗೆ ಮುತ್ತಿಗೆ ಹಾಕಲು ಬಂದ ಶತೃಗಳನ್ನ ಓಡಿಸಿದ ಜಾಗವಾಗಿದೆ. ಹಾಗಾಗಿ ಚಿತ್ರದುರ್ಗವನ್ನ ಬಿಎಸ್ ವೈ ಅಭಿಮಾನೋತ್ಸವ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ. ಗೃಹಸಚಿವ ಅಮಿತ್ ಶಾ ಮೇ.9 ರಂದು 3 ಗಂಟೆಗೆ ಬರಲಿದ್ದಾರೆ. ಮಧ್ಯಾಹ್ನ 12 ಯಿಂದ ವಿವಿಧ ಸ್ವಾಮೀಜಿಗಳ ಸಭೆ ಜರುಗಲಿದೆ ಎಂದರು. 

ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ನಮ್ಮ ಮನೆ ಕಾರ್ಯಕ್ರಮದಂತೆ ನಡೆಯಲಿದೆ. 10 ಲಕ್ಷ ಜನ ಸೇರುವ ನಿರೀಕ್ಷೆಯಿದೆ. 2-3 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಒಂದು ಸಾವಿರ ಸ್ವಾಮೀಜಿಗಳು ಭಾಗಿಯಾಗುವ ನಿರೀಕ್ಷೆಯಿದೆ. ಮೇ.8 ರಂದು ಅಭಿಮಾನೋತ್ಸವದ ಪುರಪ್ರವೇಶವಾಗಲಿದೆ. ಮಾದರ ಚೆನ್ನಯ್ಯ ಗುರುಪೀಠದ ಪಕ್ಕದಲ್ಲಿರುವ 500 ಎಕರೆ ಜಾಗದಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. 

ಬಿಎಸ್ ವೈ ಹೋರಾಟಗಾರರಾಗಿ ಮನೆ ಯಜಮಾನರಾಗಿ ಇತರರನ್ನೂ ಯಜಮಾನರನ್ನಾಗಿ ಮಾಡಿದವರು. ಪಕ್ಷವನ್ನ ಶೂನ್ಯದಿಂದ ಅಧಿಕಾರಕ್ಕೆ ತೆಗೆದುಕೊಂಡು ಹೋದ ಕೀರ್ತಿ ಬಿಎಸ್ ವೈಗೆ ಸಲ್ಲುತ್ತದೆ. ಹಾಗಾಗಿ ಅವರಿಗೆ ಈ ಸಂಧರ್ಭದಲ್ಲಿ ಕೃತಜ್ಞತೆಯನ್ನ ಸಲ್ಲಿಸುವ ಕಾರ್ಯಕ್ರಮವಾಗಿದೆ ಎಂದರು. 


ಆರಗ ಜ್ಞಾನೇಂದ್ರ


ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಬಿಎಸ್ ವೈ ಅಭಿಮಾನೋತ್ಸವ ಮೇ9ವರಂದು ನಡೆಯುತ್ತಿದ್ದು ಬೇರೆಯವರಿಗೆ ಅವರ ಜೀವನದ ದಾರಿ ಪಾಠವಾಗಲಿದೆ. ಚಿತ್ರದುರ್ಗದಲ್ಲಿ ವಿಶೇಷ ಕಾರ್ಯಕ್ರಮ‌ನಡೆಯುತ್ತಿದೆ. 1975 ರಲ್ಲಿ ಬಿಎಸ್ ವೈ ಜೊತೆಗೆ ನನ್ನ ರಾಜಕೀಯ ಪ್ರಯಾಣವಾಗಿದೆ ಎಂದರು. 


ರಾಜಕೀಯಕ್ಕೆ ಬರುವವರು ಶಾರ್ಟ್ ಕಟ್ ಅನುಸರಿಸುತ್ತಿದ್ದಾರೆ. ಹೋರಾಟ, ಸಿದ್ಧಾಂತ ಮೂಲಕ ಬರುವವರಿಗೆ ಅಧಿಕಾರ ಹಿಡಿಯಲು ಸಮಯ ಹಿಡಿದರೆ ಶಾರ್ಟ್ ಕಟ್  ನಲ್ಲಿ ಈ ಅಧಿಕಾರವನ್ನ ಹಿಡಿಯಲು ಕೆಲವರು ಯತ್ನಿಸುತ್ತಿದ್ದಾರೆ. ಮೊದಲು ಮೇಲ್ವರ್ಗದ ಹಾಗೂ ವ್ಯಾಪಾರಿಗಳ ಪಕ್ಷವೆಂದು ಬಿಜೆಪಿಗೆ ಕರೆಯುತ್ತಿದ್ದರು. ಇದಕ್ಕೆ ಟ್ವಿಸ್ಟ್ ಕೊಟ್ಟವರು ಬಿಎಸ್ ವೈ ಎಂದರು. 


ಜೀತದಾಳದ ವಿರುದ್ಧದ ಹೋರಾಟ, ರೈತರ ಹೋರಾಟ ದಲಿತರನ್ನ ಮತ್ತು ರೈತರನ್ನ ತಲುಪಿಸುವಂತೆ ಮಾಡಿದ್ದು ಬಿಎಸ್ ವೈ ಎಂದರು. ಅಧಿಕಾರಕ್ಕಾಗಿ ಶಾರ್ಟ್ ಕಟ್ ಅನುಸರಿಸಲೇ ಇಲ್ಲ. ಹೋರಾಟದ ಮೂಲಕ ರಾಜ್ಯದ ಮೂಲೆ ಮೂಲೆಗೆ ತೆಗೆದುಕೊಂಡು ಹೋಗಿದ್ದಾರೆ ಎಂದರು. 


ತಾಯಿಯ ಹೃದಯ


ಭಾಗ್ಯಲಕ್ಷ್ಮಿ,  ಸೈಕಲ್ ನೀಡುವ ಯೋಜನೆ ಸಣ್ಣದಾದರೂ ಪರಿಣಾಮ ಬಹಳ ದೊಡ್ಡದಾಗಿದೆ. ಮಾನವೀಯ ಮೌಲ್ಯ ಹೊಂದಿದ್ದ ಬಿಎಸ್ ವೈ ತಾಯಿಯ ಹೃದಯ ಉಳ್ಳವರು ಎಂದು ಉದಾಹರಣೆ ಸಮೇತ ವಿವರಿಸಿದರು. ಕೃಷಿ ಕಾಲೇಜು, ಮೆಗ್ಗಾನ್ ಗೆ ಆಧ್ಯತೆ, ಮೆಟನರ್ರಿ ವಿಶ್ವವಿದ್ಯಾಲಯ, ಪತ್ರಿಕಾ ಭವನ ಸೇರಿದಂತೆ ಬಿಎಸ್ ವೈ ಕೊಡುಗೆಯಾಗಿದೆ. ತೀರ್ಥಹಳ್ಳಿಯ ಬಿದರಗೋಡಿನಲ್ಲಿ ನಕ್ಸಲ್ ದಾಳಿಯಾಗಿತ್ತು. ಐದು ಕುಟುಂಬಗಳ ದಾಳಿಯಾಗಿತ್ತು. 

ಮಾಂಗಲ್ಯಸರ ಸೇರಿದಂತೆ ಹಲವು ವಸ್ತುಗಳನ್ನ ದೋಚಿಹೋಗಿದ್ದರು. ಪೊಲೀಸ್ ಕಂಪ್ಲೇಂಟ್ ನೀಡಿದರೆ ಸಾಯಿಸುವ ಧಮಕಿಹಾಕಲಾಗಿತ್ತು. ಪೊಲೀಸರ ನಿಷ್ಕ್ರಿಯತೆಯಿಂದ ನಕ್ಸಲ್ ಅಟ್ಟಹಾಸವಾಗಿತ್ತು. ಐದು ಕುಟುಂಬಕ್ಕೆ ತಲಾ ಒಂದೊಂದು ಲಕ್ಷ ರೂ.ವನ್ನ ತನ್ನ ಜೇಬಿನಿಂದ. ಬಿಎಸ್ ವೈ ನನ್ನ ಮೂಲಕ ಕೊಡಿಸಿದ್ದರು. ಅವರು ನೀಡಿದ ಧೈರ್ಯದಿಂದ ಈ ಕಾರ್ಯಸದ್ಯವಾಗಿತ್ತು. ನಂತರ ಈ ದರೋಡೆ ಪ್ರಕರಣ ಬೇರೆ ರೀತಿಯ ತಿರುವು ಪಡೆದಿತ್ತು ಎಂದರು. 

ಕಾರ್ಯಕ್ರಮದ ಪರಿಣಾಮಗೊತ್ತಿಲ್ಲ

ಜಿಲ್ಲೆಯಿಂದ 60 ಸಾವಿರ ಜನ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ ಬಿಎಸ್ ವೈಗೆ ಕೃತಜ್ಞತೆ ಸಲ್ಲಿಸುವ ಕ್ಷಣವಾಗಿದೆ. ಬಿಎಸವೈ ತರಹ ಬೇರೆಯವರು ಯಾಕೆ ಬರಲಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಆರಗ ಹಾಗೇನು ಇಲ್ಲ. ನಾವು ಪ್ರತಿಪಕ್ಷಗಳಂತೆ ಕೆಲಸ ಮಾಡುತ್ತಿದ್ದೇವೆ ಎಂದರು. 

ಬಿಎಸ್ ವೈ ಕಾರ್ಯಕ್ರಮವನ್ನ  ಊರಗೋಲಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೂ ಉತ್ತರಿಸಿದ ಶಾಸಕರು, ಕಾರ್ಯಕ್ರಮದ ನಂತರದ ಪರಿಣಾಮ ನಮಗೆ ಗೊತ್ತಿಲ್ಲ. ಆದರೆ ಬಿಎಸ್ ವೈ ಅವರ ಸಾಧನೆಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಎಂದು ಮಾತ್ರ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಎಂಎಲ್ ಸಿಗಳಾದ ಡಾ ಧನಂಜಯ ಸರ್ಜಿ, ಡಿಎಸ್ ಅರುಣ್, ಮಾಜಿ ಶಾಸಕರಾದ ರುದ್ರೇಗೌಡ, ಅಶೋಕ್ ನಾಯ್ಕ್, ಆರ್ ಸಿದ್ದರಾಮಣ್ಣ, ದತ್ತಾತ್ರಿ, ಮಂಗೋಟೆ ರುದ್ರೇಶ್, ಬಿಜೆಪಿ ಮಾಧ್ಯಮ ಪ್ರಮುಖ್ ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.‌

A program to express gratitude to BSY - Araga  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close