SUDDILIVE || SHIVAMOGGA
ಚಾಕು ತಿವಿದ ಪ್ರಕರಣ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು- Verdict on the punishment of the accused in the stabbing case
![]() |
| ಲಕ್ಷ್ಮೀ ಬಾಯಿ, ರವಿ ನಾಯ್ಕ |
ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ದಿನಾಂಕ:03-06-2021 ರಂದು ರಾತ್ರಿ ಭದ್ರಾವತಿಯ ಕೊಮರನಹಳ್ಳಿ ತಾಂಡದ ವಾಸಿಗಳಾದ ಎ1 ರವಿ ನಾಯ್ಕ್ (32 ವರ್ಷ), ಎ2 ರಾಜ ನಾಯ್ಕ್ (58 ವರ್ಷ) (ಮೃತ), ಎ3 ಲಕ್ಷಿ ಬಾಯಿ (40 ವರ್ಷ) ರವರು ಆಸ್ತಿಯ ಭಾಗದ ವಿಚಾರವಾಗಿ ಶರತ್ (24 ವರ್ಷ), ಸುರೇಂದ್ರ (45 ವರ್ಷ), ವಿನಯ್ ಕುಮಾರ್ (21 ವರ್ಷ), ಜಯಬಾಯಿ (55 ವರ್ಷ). ಸರೋಜಾ ಬಾಯಿ (41 ವರ್ಷ) ರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಶರತ್ ರವರ ಹೊಟ್ಟೆಗೆ 2-3 ಬಾರಿ ಇರಿದು ತೀವ್ರ ಸ್ವರೂಪದ ಗಾಯಪಡಿಸಿದ ಘಟನೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಕೆ.ಕೆ ತ್ಯಾಗರಾಜ್ ಎಎಸ್ಐ (ನಿವೃತ್ತ) ರವರು ಪ್ರಕರಣದ ತನಿಖೆ ಪೂರೈಸಿ, ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ. ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ಎ1 ಆರೋಪಿತನಿಗೆ ಕಲಂ 307 ಐಪಿಸಿ ರಿತ್ಯಾ 8 ವರ್ಷ ಕಠಿಣ ಕಾರಾಗೃಹ ವಾಸ ಮತ್ತು 2,00,000/- ರೂ ದಂಡವನ್ನು ವಿಧಿಸಿದ್ದು, ಎ1 & ಎ3 ಆರೋಪಿತರಿಗೆ 504 ಐಪಿಸಿ ಕಾಯಿದೆಗೆ 2 ವರ್ಷ ಕಠಿಣ ಕಾರಾವಾಸ ಮತ್ತು ತಲಾ 20,000/- ರೂ ದಂಡವನ್ನು ವಿಧಿಸಿದ್ದು, ನೊಂದವರಾದ ಶರತ್ ಕುಮಾರ್ ರವರಿಗೆ 2,00,000/- ರೂ ಪರಿಹಾರ ಕೊಡಲು ಆದೇಶಿಸಿರುತ್ತದೆ.
![]() |
| ಶರತ್, ವಿನಯ್ ಮತ್ತು ಸರೋಜಬಾಯಿ |
ಇದೇ ಪ್ರಕರಣದಲ್ಲಿ ರವಿ ನಾಯ್ಕ ನ ಮೇಲೆ ಚಾಕುವಿನಿಂದ ಸರೀಜಬಾಯಿ, ವಿನಯ್ ಕುಮಾರ್, ಶರತ್ ಎಂಬುವರು ಎರಡು ಬಾರಿ ಚಾಕುವಿನಿಂದ ಹಲ್ಲೆ ನಡೆಸಿದ್ದರು. ಅವರ ವಿರುದ್ಧವೂ ಪ್ರಕರಣ ದಾಖಲಾಗಿತ್ತು. 4 ನೇ ಹೆಛಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶರತ್ ಗೆ 8 ವರ್ಷ ಶಿಕ್ಷೆ, 2,31,000/- ರೂ ದಂಡ ವಿಧಿಸಿದರೆ, ವಿನಯ್ ಮತ್ತು ಸರೋಜಬಾಯಿಗೆ ಮೂರು ವರ್ಷ ಶಿಕ್ಷೆ 62 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
Verdict on the punishment of the accused in the stabbing case

