SUDDILIVE || BHADRAVATHI
ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಐದು ತಿಂಗಳ ಬಳಿಕ ಸಾವು- Biker injured in accident dies five months later
ಡಿಸೆಂಬರ್ 2025ರಲ್ಲಿ ಭದ್ರಾವತಿಯ ಸಂಜಯ್ ಕಾಲೋನಿಯ ಗಣಪತಿ ದೇವಸ್ಥಾನದ ಎದುರು ನಡೆದ ಎರಡು ಬೈಕುಗಳ ನಡುವಿನ ಡಿಕ್ಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕ ಇಂದು ಬೆಳಗ್ಗಿನ ಜಾವ ಸಾವು ಕಂಡಿದ್ದಾನೆ.
ಭದ್ರಾವತಿಯ ಕೃಷ್ಣಪ್ಪ ಸರ್ಕಲ್ ಕಡೆಯಿಂದ ಸಂಜಯ್ ಕಾಲೋನಿ ಗಣಪತಿ ದೇವಸ್ಥಾನದ ಎದುರು ಜ್ಞಾನವೇಲು ಎಂಬ 35 ವರ್ಷದ ಯುವಕ ಕೆಎ 14 ಈಎನ್ 4725 ಕ್ರಮ ಸಂಖ್ಯೆಯ ಹೊಂಡ ಬೈಕ್ ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಏತರ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಡಿಕ್ಕಿ ಹೊಡೆದಿದೆ. ಎರಡೂ ಬೈಕ್ ನ ಇಬ್ಬರೂ ಸವಾರರು ನೆಲಕ್ಕೆ ಉರುಳಿ ಬಿದ್ದಿದ್ದರು.
ಜ್ಞಾನವೇಲು ತೀವ್ರವಾಗಿ ಗಾಯಗೊಂಡಿದ್ದನು ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ಞಾನವೇಲುಗೆ ತಲೆಗೆ ಮುಖಕ್ಕೆ ತೀವ್ರವಾಗಿ ಗಾಯವಾಗಿದ್ದು, ಮಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಹಾಸಿಗೆ ಹಿಡಿದಿದ್ದ ಜ್ಞಾನವೇಲು ಐದು ತಿಂಗಳ ಬಳಿಕ ಸಾವು ಕಂಡಿದ್ದಾನೆ. ಇಂದು ಬೆಳಗ್ಗಿನ ಜಾವ ಅಸುನೀಗಿದ್ದಾನೆ. ಆತನ ಮೃತದೇಹ ಮೆಗ್ಗಾನ್ ಮರಣೋತ್ತರ ಕೇಂದ್ರದಲ್ಲಿರಿಸಲಾಗಿದೆ. ಪ್ರಕರಣ ಭದ್ರಾವತಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
Biker injured in accident dies five months later

