ನಾಯಿಯನ್ನು ತಪ್ಪಿಸಲು ಹೋಗಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರಿಗೆ ಡಿಕ್ಕಿ ಪ್ರಕರಣ -ಯುವಕ ಸಾವು-A young man died after being hit from behind by a car while trying to avoid a dog in a lorry that was stopped

 SUDDILIVE || SHIVAMOGGA

ನಾಯಿಯನ್ನು ತಪ್ಪಿಸಲು ಹೋಗಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರಿಗೆ ಡಿಕ್ಕಿ ಪ್ರಕರಣ -ಯುವಕ ಸಾವು-A young man died after being hit from behind by a car while trying to avoid a dog in a lorry that was stopped    

Apmc, car

ನಗರದ ಸಾಗರ ರಸ್ತೆಯ APMC ಬಳಿ ನಿಂತಿದ್ದ ಲಾರಿಗೆ ಕಾರು ಅಪಘಾತವಾಗಿ ತೀವ್ರವಾಗಿ ಗಾಯಗೊಂಡಿದ್ದ ಭದ್ರಾವತಿ ಮೂಲದ ಯುವಕ ಸೃಜನ್‌ (19) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಒಂದು ವಾರದ ಹಿಂದೆ ಶನಿವಾರ ಬೆಳಗಿನ ಜಾವ ಈ ದುರ್ಘಟನೆ ಸಂಭವಿಸಿದೆ.

ಮೃತ ಸೃಜನ್ ಭದ್ರಾವತಿಯ ಹಳೇನಗರದ ನಿವಾಸಿಯಾಗಿದ್ದು, ಡೆಕೋರೇಶನ್ ಕೆಲಸ ಮಾಡಿಕೊಂಡಿದ್ದನು. ಶುಕ್ರವಾರ ಕೆಲಸದ ನಿಮಿತ್ತ ತನ್ನ ಗೆಳೆಯ ಸಂಜಯ್ ಎಂಬುವವರ ಕಾರಿನಲ್ಲಿ ಸಾಗರಕ್ಕೆ ಹೋಗಿದ್ದ ಸೃಜನ್, ಕೆಲಸ ಮುಗಿಸಿ ವಾಪಸ್ ಊರಿಗೆ ಮರಳುತ್ತಿದ್ದರು. ಈ ಸಂದರ್ಭ ಅಪಘಾತ ಸಂಭವಿಸಿದೆ. ಕಾರನ್ನು ಸಂಜಯ್ ಚಾಲನೆ ಮಾಡುತ್ತಿದ್ದು, ಪಕ್ಕದ ಸೀಟಿನಲ್ಲಿ ಸೃಜನ್ ಕುಳಿತಿದ್ದನು.

ಶನಿವಾರ ನಡುರಾತ್ರಿ 1:30ರ ಹೊತ್ತಿಗೆ ಕಾರು ಸಾಗರ ರಸ್ತೆಯ ಆರ್‌ಎಂಸಿ ಸಮೀಪದ ಬರುತ್ತಿದ್ದಾಗ ನಾಯಿ ಅಡ್ಡ ಬಂದಿದೆ. ನಾಯಿಗೆ ಡಿಕ್ಕಿ ತಪ್ಪಿಸಲು ಹೋದಾಗ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಯಾವುದೇ ಪಾರ್ಕಿಂಗ್ ಲೈಟ್ ಹಾಕದೆ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುವಂತೆ ಲಾರಿಯನ್ನು ನಿಲ್ಲಿಸಿದ್ದೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

A young man died after being hit from behind by a car while trying to avoid a dog in a lorry that was stopped

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close