SUDDILIVE || SHIVAMOGGA
ಸೆನ್-ವರ್ಕ್ ಫ್ರಂ ಹೋಮ್ ಕೆಲಸವನ್ನ ಹುಡುಕುತ್ತಿದ್ದ ಯುವತಿಗೆ ಆನ್ ಲೈನ್ ನಲ್ಲಿ ವಂಚನೆಯಾಗಿದ್ದು ಬರೋಬ್ಬರಿ 2,12,340 ರೂ.-CEN-A young woman looking for a work-from-home job was scammed online and swindled out of Rs 2,12,340
ಶಿವಮೊಗ್ಗದ ಯುವತಿಗೆ ವರ್ಕ್ ಫ್ರಂ ಹೋಮ್ ಕೆಲಸವೆಂದು ಟಾಸ್ಕ್ ಗಳ ನ್ನೀಡಿ 2,12,340 ರೂ. ಹಣವನ್ನ ಆನ್ ಲೈನ್ ನಲ್ಲಿ ವಂಚಿಸಿರುವ ಘಟನೆ ನಡೆದಿದ್ದು ಘಟನೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಾಡಿಕೊಪ್ಪದ ಯುವತಿಯೊಬ್ಬರು ವಿದ್ಯಾಭ್ಯಾಸ ಮಾಡಿಕೊಂಡಿದ್ದು ಜೊತೆಗೆ ವರ್ಕ್ ಫ್ರಂ ಹೋಂ ಕೆಲಸವನ್ನ ಇನ್ ಸ್ಟಾ ಗ್ರಾಂ ನಲ್ಲಿ ಹುಡುಕುತ್ತಿದ್ದು, ಇನ್ ಸ್ಟಾಗ್ರಾಂ ನಲ್ಲಿ God pinkoship ಎಂಬ ವರ್ಕ್ ಫ್ರಂ ಹೋಮ್ ನ ಲಿಂಕ್ ಸಿಕ್ಕಿದ್ದನ್ನ ಒತ್ತಿದ್ದಾರೆ.
Radha chawhan ಎಂಬುವರು ಯಾವರೀತಿ ಕೆಲಸ ಬಯಸುತ್ತೀರಿ ಎಂದು ಟೆಲಿಗ್ರಾಂನಲ್ಲಿ ಕೇಳಿ ರಿವ್ಯೂವ್ ಟಾಸ್ಕ್ ನೀಡಿದ್ದಾರೆ. ರಿವ್ಯೂವ್ ಟಾಸ್ ನಲ್ಲಿ ಮೊದಲಿಗೆ ಹಣಹಾಕಲಾಗಿದೆ. ನಂತರ 800 ರೂ ಹಣಹಾಕಿಸಿಕೊಂಡು ನಂತರ ಟಾಸ್ಕ್ ನೀಡಿ ಅದಕ್ಕೆ 1040 ರೂ ನೀಡಲಾಗಿತ್ತು.
ಇದಾದ ನಂತರ ವಿವಿಧ ಟಾಸ್ಕ್ ನೀಡಿ ಹೆಚ್ಚಿನ ಲಾಂಭಾಂಶ ನೀಡುವುದಾಗಿ ನಂಬಿಸಿ ಯುವತಿಯ ಬ್ಯಾಂಕ್ ಅಕೌಂಟ್ ನಿಂದ 2,12,340 ರೂ. ಹಣವನ್ನ ವರ್ಗಾಯಿಸಿಕೊಂಡಿದ್ದಾರೆ. ಕಳೆದುಕೊಂಡ ಹಣವನ್ನ ಕೊಡಿಸಬೇಕೆಂದು ಸೆನ್ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾರೆ.
A young woman looking for a work-from-home job was scammed online and swindled out of Rs 2,12,340
