SUDDILIVE || BHADRAVATHI
ಪ್ರಿಯಕರನಿಗಾಗಿ ಗಂಡನ ಕೊಲೆ ಪ್ರಕರಣ-ಆರೋಪಿಗೆ ಶಿಕ್ಷೆ-Accused sentenced for murdering husband for lover
ಪ್ರಿಯಕರನಿಗಾಗಿ ಗಂಡನನ್ನೇ ವಿಷ ಹಾಕಿ ಕೊಲೆ ಮಾಡಿದ ಪ್ರಕರಣದಲ್ಲಿ ಇಬ್ವರು ಆರೋಪಿಗಳಿಗೆ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿ ತೀರ್ಪು ಪ್ರಕಟಿಸಿ ಆದೇಶಿಸಿದೆ.
ದಿನಾಂಕಃ 15-01-2020 ರಂದು ಭದ್ರಾವತಿ ಪೇಪರ್ ಟೌನ್ ಪೊಲಿಸ್ ಠಾಣಾ ವ್ಯಾಪ್ತಿಯ ಸುರಗಿತೋಪಿನ ವಾಸಿಯಾದ ಫ್ಲೋರಾ ನ್ಯಾನ್ಸಿ ಎಂಬ ಮಹಿಳೆಯು ರಾಜಶೇಖರಯ್ಯ ಎಂಬುವವನ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡು, ಆಕೆಯ ಗಂಡನಾದ ಪ್ರಕಾಶ್ ಬಾಬು ಇವರಿಬ್ಬರ ಸಂಬಂಧಕ್ಕೆ ಅಡ್ಡಿ ಬರುತ್ತಾನೆ ಎಂದು ಆರೋಪಿತರಿಬ್ಬರು ಸೇರಿ ಪ್ರಕಾಶ್ ಬಾಬುವಿಗೆ ಮತ್ತು ಬರುವ ಔಷದಿಯನ್ನು ಹಾಕಿ ನಂತರ ಉಸಿರುಗಟ್ಟಿಸಿ ಕೊಲೆ ಮಾಡಿದ್ದು, ಈ ಬಗ್ಗೆ ಗುನ್ನೆ ಸಂಖ್ಯೆ 50/2020 ಕಲಂ 302, 201 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಮಂಜುನಾಥ್ ಈ. ಓ. ಪೊಲೀಸ್ ನಿರೀಕ್ಷಕರವರು ಪ್ರಕರಣದ ತನಿಖೆ ಪೂರೈಸಿ , ಘನ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
ಶ್ರೀಮತಿ ರತ್ನಮ್ಮ ಪಿ. ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿಯಲ್ಲಿ ವಿಚಾರಣೆ ನಡೆಸಿದ್ದು, ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ಆರೋಪಿತರಿಗೆ ಗಲ್ಲು ಶಿಕ್ಷೆ ಹಾಗೂ 14,00,000/- ದಂಡ ವಿಧಿಸಿದ್ದು, ಪಿರ್ಯಾದಿಗೆ ಪರಿಹಾರವಾಗಿ 5,00,000/- ರೂ ನೀಡಲು ಆದೇಶಿಸಿರುತ್ತಾರೆ.
Accused sentenced for murdering husband for lover
