ಆಕ್ರಮಣಕಾರಿ ಮರಳುಗಾರಿಕೆ ಹಾಗೂ ನಿಷ್ಕ್ರಿಯ ಹೊಸನಗರ ತಾಲೂಕು ಆಡಳಿತ-Aggressive sand mining and dysfunctional Hosanagara taluk administration

 SUDDILIVE || HOSANAGARA

ಆಕ್ರಮಣಕಾರಿ ಮರಳುಗಾರಿಕೆ ಹಾಗೂ ನಿಷ್ಕ್ರಿಯ ಹೊಸನಗರ ತಾಲೂಕು ಆಡಳಿತ-Aggressive sand mining and dysfunctional Hosanagara taluk administration    

Aggressive, Sand


ಶಿವಮೊಗ್ಗದಲ್ಲಿ ಅಕ್ರಮ ಮರಳುಗಾರಿಕೆ ಒಂದು ಲೆಕ್ಕದಲ್ಲಿದೆ. ಆದರೆ ಹೊಸನಗರದಲ್ಲಿ ಮರಳುಗಾರಿಕೆ ರೌಡಿಸಂ ಆಗಿ ಬೆಳೆದಿದೆಯಾ ಎಂಬ ಅನುಮಾನಗಳನ್ನ ಹುಟ್ಟಿಹಾಕಿದೆ. ಇದಕ್ಕೆಲ್ಲಾ  ಅಲ್ಲಿನ ತಾಲೂಕು ಆಡಳಿತ ನಿಷ್ಕ್ರಿಯತೆಯೇ ಕಾರಣವೆಂಬ ಶಂಕೆ ವ್ಯಕ್ತವಾಗುತ್ತಿದೆ. 

ಶಿವಮೊಗ್ಗದಲ್ಲಿ ಅಕ್ರಮ ಮರಳುಗಾರಿಕೆಯು ಇಲ್ಲಿನ ಗ್ರಾಮಸ್ಥರನ್ನೇ ಎದುರು ಹಾಕಿಕೊಂಡು ನಡೆಯುವ ಕಾರಣ ಈ ಅಕ್ರಮ ಮರಳುಗಾರಿಕೆ ವಿರುದ್ಧ ಯಾರೂ ಗ್ರಾಮಸ್ಥರು ಬೆಂಬಲಿಸೊಲ್ಲ. ಆದರೆ ಗ್ರಾಮಗಳಿಂದ ದೂರದಲ್ಲಿ ನಡೆಯುವ ಹೊಸನಗರ ಭಾಗದಲ್ಲಿ ಗ್ರಾಮಸ್ಥರಿಗೂ ಮರಳುಗಾರಿಕೆ ನಡೆಯುವ ಜಾಗಕ್ಕೆ ಸಂಬಂಧವಿಲ್ಲದಂತೆ ಇರುವುದರಿಂದ ಇಲ್ಲಿನ ಅಕ್ರಮ ಮರಳುಗಾರಿಕೆ ತನ್ನ ಆಕ್ರಮಣಶೀಲಕಾರಿಯಾಗಿ ಬೆಳೆಯುತ್ತಿದೆ. 




ಬಿಲ್ಲುಸಾಗರ, ಸುತ್ತ, ಮುಡುಗೊಪ್ಪ ಮೊದಲಾದ ಕಡೆ ಯಾರಾದರೂ ತಡೆಯಲು ಹೋದರೆ ಸಾಕು ಇಲ್ಲಿನ ಅಕ್ರಮ‌ ಮರಳುಗಾರಿಕೆ ನಡೆಸುವ ಗುಂಪು ಮುಗಿದು ಬೀಳುತ್ತದೆ. ತಹಶೀಲ್ದಾರ್, ಗಣಿ ಮತ್ತು ಭೂವಿಜ್ಞಾನದವರಿಗೆ ಕರೆ ಮಾಡಿದರೆ ಯಾರೂ ಕರೆ ಸ್ವೀಕರಿಸುವ ಗೋಜಿಗೆ ಹೋಗಿಲ್ಲ. ಇನ್ನು ಪೊಲೀಸರಿಗೆ ಕರೆ ಮಾಡಿದರೆ ಈಗ ಪಿಎಸ್ಐನ್ನ ಕಳುಹಿಸುತ್ತೀವಿ ಎಂದು ಈ ಅಕ್ರಮ ಚಟುವಟಿಕೆಗಳನ್ನ ನಡೆಸುವ ಗುಂಪಿಗೆ ಸಹಾಯ ಮಾಡುವ ಷಡ್ಯಂತರವೂ ನಡೆದಿದೆ. 

ಸುದ್ದಿಲೈವ್ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಜಾಗದಲ್ಲಿ ಇರುವಷ್ಟು ಹೊತ್ತು ಯಾವ ಅಕ್ರಮ ಮರಳುಗಾರಿಕೆ ತಡೆಯುವ ಸಮಿತಿಯವರು ಜಾಗಕ್ಕೆ ಬಾರದೆ ಅಕ್ರಮ‌ ಮರಳುಗಾರಿಕೆ ನಡೆಸುವವರಿಗೆ ಸಹಾಯ ಮಾಡಿರುವ ಶಂಕೆ ಹೊರಬಿದ್ದಿದೆ. ಕಾರಣ ಅಕ್ರಮ ಮರಳುಗಾರಿಕೆಯ ಗುಂಪು ಸುದ್ದಿಲೈವ್ ಇರುವ ಜಾಗವನ್ನೇ ಹುಡುಕಿಕೊಂಡು ಬಂದು ಮಾತುಕತೆಯ ನೆಪದಲ್ಲಿ ಆಕ್ರಮಕಾರಿ ಶೀಲತೆಯನ್ನ ಪ್ರದರ್ಶಿಸಿದೆ. 

ಮೊದಲಿಗೆ ಈ ಮರಳುಗಾರಿಕೆಗೆ ಜನಪ್ರತಿನಿಧಿಗಳ ಬೆಂಬಲವಿದೆ ಎಂದು ಹೇಳುವ ಗುಂಪು ನಂತರ ಫೊಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಹುನ್ನಾರವನ್ನೂ ನಡೆಸಿದೆ. ಇದಕ್ಕೆಲ್ಲಾ ಕಾರಣ ತಾಲೂಕು ಆಡಳಿತ. ತಾಲೂಕು ಆಡಳಿತದಿಂದ ನಿರಂತರವಾಗಿ ನಡೆಯದ ದಾಳಿಯಿಂದ ಅಕ್ರಮ ಮರಳುಗಾರಿಕೆ ತನ್ನ ರಾಕ್ಷಸೀಯ ಮುಖಗಳಗನ್ನ ಹೊರಹಾಕಲು ನೋಡುತ್ತಿದೆ. 

Aggressive sand mining and dysfunctional Hosanagara taluk administration 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close