ಎಗ್ಗಿಲ್ಲದೆ ನಡೆಯುತ್ತಿರುವ ಮಣ್ಣು ದಂಧೆ- ಶಿವಮೊಗ್ಗದಲ್ಲಿ ನಿಷ್ಕ್ರಿಯಗೊಂಡುವ ಗಣಿ ಮತ್ತು ಭೂವಿಜ್ಞಾನ ಇಲಾಖೆ-Soil scam going on without a hitch

 SUDDILIVE || SHIVAMOGGA

ಎಗ್ಗಿಲ್ಲದೆ ನಡೆಯುತ್ತಿರುವ ಮಣ್ಣು ದಂಧೆ- ಶಿವಮೊಗ್ಗದಲ್ಲಿ ನಿಷ್ಕ್ರಿಯಗೊಂಡುವ ಗಣಿ ಮತ್ತು ಭೂವಿಜ್ಞಾನ ಇಲಾಖೆ-Soil scam going on without a hitch - Defunct Mines and Geology Department in Shivamogga

Soil, scam

ನಗರದ ಹೊರಭಾಗದಲ್ಲಿ ಮಣ್ಣು ದಂಧೆ ಎಗ್ಗಿಲ್ಲದೆ ನಡೀತಿದೆ. ಒಂದು ಕಡೆ ಅಕ್ರಮ ಮರಳುಗಾರಿಕೆಗೆ ಎಸಿ ಸತ್ಯನಾರಾಯಣ ಅವರು ಸಿಂಹಸ್ವಪ್ನವಾಗಿ ಕಾಡುತ್ತಿದ್ದರೆ. ನಿಜ ಆದರೆ ಮತ್ತೊಂದೆಡೆ ಮಣ್ಣುದಂಧೆ ಶಿವಮೊಗ್ಗದ ಗ್ರಾಮಾಂತರ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಎತ್ತಿ ಸಾಗಿಸಲಾಗುತ್ತಿದೆ. ಇವನ್ನೆಲ್ಲ ನಿಯಂತ್ರಿಸಬೇಕಿದ್ದ ಗಣಿ ಮತ್ಗು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಜಾಣ ಕುರುಡಾಗಿರುವುದು ಚರ್ಚೆಗೆ ಗ್ರಾಸವಾಗಿದೆ. 

ರಾತ್ರಿ ಹಗಲು ಅನ್ನದೆ ಸರ್ಕಾರಕ್ಕೆ ಯಾವುದೇ ರಾಯಲ್ಟಿ ಕಟ್ಟದೆ ರಾಜ ರೋಷವಾಗಿ ಮಣ್ಣು ದಂದೆ ನಡೆಯುತ್ತಿದೆ. ಮಣ್ಣುದಂದೆಗೆ ಖನಿಜ ಸಂಪತ್ತುಗಳು ಲೂಟಿಯಾದರೆ ತಡೆಯ ಬೇಕಿದ್ದ ಇಲಾಖ ಅಧಿಕಾರಿಗಳು ಯಾವುದೇ ಕ್ರಮ ವಹಿಸದೆ ಬೇರೆಯೇ ಕಸಬಿನಲ್ಲಿ ಬ್ಯೂಸಿ ಆಗಿದ್ದಾರೆ. 


ಈ ಮಣ್ಣಕೋರರಿಗೆ ಅಧಿಕಾರಿಗಳ ಯಾವುದೇ ಭಯವಿಲ್ಲದೆ ರಾಜ ರೋಷವಾಗಿ ಮಣ್ಣು ದಂದೇ ನಡೆಯುತ್ತಿದೆ. ಕೆರೆಯ ಒಡಲನ್ನು ಬಗೆಯಲಾಗುತ್ತಿದೆ.  ಸೋಗನೆ ಗ್ರಾಮ ಪಂಚಾಯಿತಿ ಪಿಡಿಒಗೆ ಈ ಬಗ್ಗೆ ಮಾಹಿತಿ ಇದ್ದರೂ ಮೌನ ವಾಗಿರುವುದು ಇವರ ಕರ್ತವ್ಯದ ಬಗ್ಗೆ ಅನುಮಾನ ಹುಟ್ಟಿಸಿದೆ. ಇವರು ಅಕ್ರಮ ಮರಳುಗಾರಿಕೆ ತಡೆಯ ಸಮಿತಿ ಸದಸ್ಯರಾಗಿರುತ್ತಾರೆ. ಇವರ ಕಣ್ಣಿಗೂ ಬೀಳದಂತೆ ದಂದೆ ಹೇಗೆ ನಡೆಯುತ್ತದೆ ಎಂಬುದು ಸಹ ಕುತೂಹಲವಾಗಿದೆ. 

ಒಂದಿಷ್ಟು ರಾಜಕಾರಣಿಗಳು ಈ ದಂದೆಗೆ ಕೈಜೋಡಿಸಿರುವ ಆರೋಪವಿದೆ. ಸಾರ್ವಜನಿಕರು ಅಕ್ರಮ ಮಣ್ಣು ತೆಗೆಯುವ ಬಗ್ಗೆ ಇಲಾಖಾ ಅಧಿಕಾರಿ ಪ್ರಿಯಾ ಅವರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸದೆ ಇರುವುದು ಸಹ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಕ್ರಮ ಮಣ್ಣು ತೆಗೆಯುವುದು ನಡೆದಾಗ ಅಧಿಕಾರಿಗಳ ಗಮನಕ್ಕೆ ತರಲು ಕರೆ ಮಾಡಿದಾಗ ಕರೆ ಸ್ವೀಕರಿಸದ ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಬೇಕಿದೆ.  ಇದು ನೇರವಾಗಿ ದಂದೆ ಕೊರರಿಗೆ ಸಹಕಾರ ನೀಡುವಂತಾಗಿದೆ. ಹಿರಿಯ ಭೂ ವಿಜ್ಞಾನ ಜಿಲ್ಲೆಯಲ್ಲಿ ನಿಷ್ಕ್ರಿಯರಾಗಿದ್ದಾರೆ ಎಂದರೆ ತಪ್ಪಾಗಲಾಗದು.  


ಮರಳು ದಂಧೆ ಕೋರರಿಗೆ ಬ್ರೇಕ್ ಹಾಕುತ್ತಿರುವ ಉಪ ವಿಭಾಗಾಧಿಕಾರಿ ಸತ್ಯನಾರಾಯಣ್ ರವರು ಈ ಕಡೆ ಗಮನ ಹರಿಸಿ ಒಂದಿಷ್ಟು ದಾಳಿ ನಡೆದರೆ ಇದಕ್ಕೆ ಬ್ರೇಕ್ ಬೀಳಬಹುದು ಎಂಬುದು ಸಾರ್ವಜನಿಕರಲ್ಲಿ ನಂಬಿಕೆ ಹುಟ್ಟಿದೆ. ಇದೇ ರೀತಿ ಎಸಿ ನೇತೃತ್ವದಲ್ಲಿ ದಾಳಿ ನಡೆದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಇರುವುದು ಏನಕ್ಕೆ ಎಂಬುದು ಸಹ ಸಹಜವಾಗಿಯೇ ಹುಟ್ಟುವ ಪ್ರಶ್ನೆಯಾಗಿದೆ.  

ಪೊಲೀಸ್ ಇಲಾಖೆ ಹಾಗೂ ಮೈನ್ಸ್ ಇಲಾಖೆಗಳ ಭಯವಿಲ್ಲದೆ ಹೆಗ್ಗಿಲ್ಲದೆ ಸರ್ಕಾರಕ್ಕೆ ರಾಜಧಾನ ಕಟ್ಟದೆ ಸಾಗುತಿದೆ ಅಕ್ರಮ ಮಣ್ಣು ದಂಧೆ.. ಓತಿಗಟ್ಟ. ಸರ್ವೆ ನಂಬರ್ 120ರಲ್ಲಿರುವ ಕೆರೆ ಜಾಗ ಮತ್ತು ನಾಲ್ಕು ಎಕರೆ 20 ಗುಂಟೆ ಜಾಗದಲ್ಲಿ ಸಾಗುತ್ತಿದೆ. 

ಇದರ ಜೊತೆಗೆ, ಸಿದ್ದರಗುಡಿ.. ದುಮ್ಮಳ್ಳಿ.. ವಿಮಾನ ನಿಲ್ದಾಣ ಸುತ್ತಮುತ್ತ ಅಕ್ರಮ ಮಣ್ಣು ದಂಧೆ ನಡೆಯುತ್ತಿದೆ. ಒಂದಿಷ್ಟು ಗ್ರಾಮದ ಮುಖಂಡರಿಗೆ ದೇವಸ್ಥಾನಕ್ಕೆ ಹಣ ನೀಡಿ ಮಣ್ಣು ದಂದೇ ನಡೀತಿದೆ. ನಿಯಂತ್ರಿಸ ಬೇಕಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖ ಅಧಿಕಾರಿಗಳು ಕಣ್ಣಿದ್ದರೂ ಕುರುಡತನ ಪ್ರದರ್ಶಿಸುತ್ತಿದೆ. ಸಾರ್ವಜನಿಕರ ಕರೆಯನ್ನೇ ಸ್ವೀಕರಿಸದ ಅಧಿಕಾರಿಗಳು ಇದ್ದರೆಷ್ಟು ಹೋದರೆಷ್ಟು. ಇದಕ್ಕಿಂತ ಸಾರ್ವಜನಿಕರು ಇನ್ನೇನು ನಿರೀಕ್ಷಿಸ ಬಹುದು ಎಂಬುದೇ ಕಟ್ಟಕಡೆಯದಾಗಿ ಕಾಡುವ ಪ್ರಶ್ನೆಯಾಗಿದೆ. 

Soil scam going on without a hitch

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close