SUDDILIVE || SHIVAMOGGA
ಗಾಂಧಿ ಬಜಾರ್ ನ ಚಿನ್ನ ಬೆಳ್ಳಿ ವ್ಯಾಪರಸ್ಥರ ವ್ಯಾಪಾರ ಕಸಿದುಕೊಂಡ ಬಿಜೆಪಿ ಸಂಸದರು, ಶಾಸಕರು ಮೌನ ಮುರಿಯಲಿ-ಯೋಗೇಶ್-BJP MPs and MLAs who stole the business of gold and silver traders in Gandhi Bazaar should break their silence - Yogesh
ನೀಟ್ ಪರೀಕ್ಷೆ ರದ್ದು, ಚಿನ್ನ ಖರೀದಿಸದಂತೆ ಪ್ರಧಾನಿ ಹೇಳಿಕೆ, ಪೆಟ್ರೋಲ್ ಡಿಸೇಲ್ ಹಾಗೂ ಗ್ಯಾಸ್ ದರ ಏರಿಕೆ ಖಂಡಿಸಿ ಮಂಗಳವಾರ ಶಿವಮೊಗ್ಗ ಉತ್ತರ ಬ್ಲಾಕ್ ವತಿಯಿಂದ ನಗರದ ಶಿವಪ್ಪ ನಾಯಕನ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಖಾಲಿ ಸಿಲಿಂಡರ್ ನ್ನ ತಂದು ಅದಕ್ಕೆ ಕಾಙಗ್ರೆಸ್ ಬಾವುಟ ಕಟ್ಟಿ ಪ್ರತಿಭಟಿಸಲಾಗಿದೆ. ಪ್ರತಿಭಟಬೆಯಲ್ಲಿ ಕೇಂದ್ರ ಹಾಗೂ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಲಾಗಿದೆ. 108 ಪೆಟ್ರೋಲ್ ನಾಲ್ಕು ಸಾವಿರ ಗ್ಯಾಸ್ 96 ರೂ ಡಿಸೇಲ್ ದರ ಏರಿಕೆಯ ವಿರುದ್ಧ ಕಾಙಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ನ ಮುಖಂಡ ಹೆಚ್ ಸಿ ಯೋಗೀಶ್ ಮಾತನಾಡಿ, ರಾಜ್ಯದಲ್ಲಿ 108 ರೂ ಪೆಟ್ರೋಲ್ ರೇಟ್ ಆಗಿದೆ. 15 ವರ್ಷದ ಹಿಂದೆ ಕಾಂಗ್ರೆಸ್ ವಿರುದ್ಧ ಇಂಧನ ದರ ಏರಿಕೆ ಖಂಡಿಸಿ ಪ್ರತಿಭಟಿಸಿದ್ದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ದೊಡ್ಡ ದೊಡ್ಡ ಭಾಷಣ ಬಿಗಿದ ಮೋದಿ ಪ್ರಧಾನಿಯಾದರು, ಈಗ 75 ರೂ. ವಿದ್ದ ಪೆಟ್ರೋಲ್ ದರವನ್ನ ಇಂದು 108 ರೂ.ಗೆ ಸಿಗುವಂತೆ ಮಾಡಿ ವಿದೇಶ ಪ್ರಯಾ ಬೆಳೆಸಿದ್ದಾರೆ. ಸ್ಥಳೀಯ ಸಂಸದರು ಮತ್ತು ಶಾಸಕರು ಈಗ ಎಲ್ಲಿ ಹೋದರು. ಯಾಜೆ ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರು ಮತ್ತು ಸಂಸದರಿಗೆ ಗಾಂಧಿ ಬಜಾರ್ ನ ಚಿನ್ನದ ಅಂಗಡಿಯವರು ಗೆದ್ದು ಬರುವಲ್ಲಿ ಪಾತ್ರವಹಿಸಿದ್ದರು. ಇಂದು ಅವರಿಗೆಲ್ಲ ವ್ಯಾಪಾರನೇ ಇಲ್ಲದಂತಾಗಿದೆ. ಈಗ ಎಲ್ಲಿ ಹೋದರು ಈ ಸಂಸದರು ಮತ್ತು ಶಾಸಕರು ಮೌನ ಮುರಿಯಬೇಕೆಂದರು. Neet ಪರೀಕ್ಷೆ 22 ಲಕ್ಷ ವಿದ್ಯಾರ್ಥಿಗಳ ಜೊತೆ ಚೆಲ್ಲಾವಾಡಿದ ಕೇಂದ್ರ ಸರ್ಕಾರದ ತೀರ್ಮಾನದಿಂದ ಆತ್ಮಹತ್ತೆಗಳಾಗಿವೆ. ಆತ್ಮಹತ್ಯೆಯಲ್ಲಿ ಹಿಂದೂಗಳೇ ಹೆಚ್ಚು. ಹಿಂದೂಗಳು ಹಿಂದುತ್ವ ಎಂದ ಬಿಜೆಪಿ ನಾಯಕರು ಈಗ ಎಲ್ಲಿ ಹೋದರು. ನಾಲ್ಕನೇ ಕ್ಲಾಸ್ ಪಾಸ್ ಆಗದ ಪ್ರಧಾನಿ ಪರೀಕ್ಷ ಚರ್ಚಾ ಮಾಡ್ತಾರೆ. ಹಿಂದೂಗಳಿಗೆ ಬಿಜೆಪಿ ಮೋಸ ಮಾಡಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ನ ಎನ್ ರಮೇಶ್, ಬ್ಲಾಕ್ ಅಧ್ಯಕ್ಷ ಶಿವಕುಮಾರ್, ಪಾಲಿಕೆ ಮಾಜಿ ಸದಸ್ಯೆ ಯಮುನಾ ರಂಗೇಗೌಡ, ಮಾರ್ಟಿನ್, ಪಾಲಿಕೆ ಮಾಜಿ ಅಧ್ಯಕ್ಷ ನಾಗರಾಜ್ ಕಂಕಾರಿ, ಮಾಜಿ ಉಪಾಧ್ಯಕ್ಷ ಪಾಲಾಕ್ಷಿ ಮೊದಲಾದವರು ಭಾಗಿಯಾಗಿದ್ದರು.
BJP MPs and MLAs who stole the business of gold and silver traders in Gandhi Bazaar should break their silence - Yogesh


