SUDDILIVE || SHIVAMOGGA
ಹೈಕೋರ್ಟ್ ಪೀಠ ಶಿವಮೊಗ್ಗದಲ್ಲಯೇ ಬೇಕು-ನಾಗರೀಕರ ಹಿತರಕ್ಷಣೆ ವೇದಿಕೆ ಆಗ್ರಹ-High Court bench should be in Shivamogga itself - Citizens' Interest Protection Forum demands
ಚೀಫ್ ಜಸ್ಟೀಸ್ ಹೈಕೋರ್ಟ್ರವರು ಶಿವಮೊಗ್ಗದಲ್ಲಿ ಯಾರನ್ನೂ ಸಂಪರ್ಕಿಸದೆ ಮಂಗಳೂರಿನ ಶಾಶ್ವತ ಹೈಕೋರ್ಟ್ ಪೀಠಕ್ಕೆ ಸೇರಿಸಿರುವುದನ್ನ ನಾಗರೀಕ ಹಿತರಕ್ಷಣ ವೇದಿಕೆ ಖಂಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿಗಿಂತ ಬೆಂಗಳೂರಿಗೆ ಸಂಪರ್ಕ ಸಾಧನೆಗೆ ಚೆನ್ನಾಗಿದೆ. ಹೈಕೋರ್ಟ್ ಪೀಠ ಮಂಗಳೂರು ಆದರೆ ನ್ಯಾಯ ಕೇಳಲು ಸಾಮಾನ್ಯನಿಗೆ ದುಬಾರಿಯಾಗಿದೆ. ಮಂಗಳೂರಿನ ವಾತಾವರಣ ಶಿವಮೊಗ್ಗದವರಿಗೆ ಒಪ್ಪಲ್ಲ ಒಂದೋ ಶಿವಮೊಗ್ಗದಲ್ಲಿಯೇ ಪೀಠ ರಚಿಸಿ ಇಲ್ಲ ಬೆಂಗಳೂರಿಗೆ ವರ್ಗಾಯಿಸಿ. ಶಿವಮೊಗ್ಗದ ಪ್ರಕರಣಗಳನ್ನಮಂಗಳೂರಿಗೆ ವರ್ಗಾಯಿಸಬಾರದು. ಇದನ್ನ ಕಾನೂನು ಇಲಾಖೆ ತಡೆಹಿಡಿಯಬೇಕು ಎಂದು ಆಗ್ರಹಿಸಿದರು.
ಸಂಸದರು, ಶಾಸಕರು ಜಿಲ್ಲಾ ಉಸ್ತುವರಿ ಸಚಿವರು ಈ ಹೋರಾಟಕ್ಕೆ ಬೆಂಬಲಿಸಬೇಕು. ಶಿವಮೊಗ್ಗ ಬಿಟ್ಟು ಬೇರೆಡೆ ಪೀಠ ಬೇಡ, ಜನಪ್ರತಿನಿಧಿಗಳು ತಮ್ಮ ಅಭಿಪ್ರಾಯವನ್ನ ಹೇಳಬೇಕು ನಂತರ ಚೀಫ್ ಜಸ್ಟಿಸ್ ನ್ನ ಒತ್ತಾಯಿಸಬೇಕು. ಇದು ವಕೀಲರ ಹೋರಾಟವಲ್ಲ. ಇದು ನಾಗರೀಕರ ಹೋರಾಟವಾಗಿದೆ ಎಂದರು.
ಸತೀಶ್ ಶೆಟ್ಟಿ ಮಾತನಾಡಿ, ಪೀಠ ರಚನೆಗೆ ಸರ್ವೆ ಆಗಿಲ್ಲ. ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠದ ಹೋರಾಟ ನಾಗರೀಕರ ಹೋರಾಟ ಆಗಬೇಕು. ನಾಳೆ ಕಕ್ಷಿದಾರರೆ ಹೈಕೋರ್ಟ್ ಗೆ ಓಡಾಡಬೇಕು. ಅವರಿಗೆ ಕಷ್ಟವಾಗಲಿದೆ. ಮಂಗಳೂರಿನಲ್ಲಿ ವಾಸ್ತವ್ಯದ ವ್ಯವಸ್ಥೆ ನೋಡಿದರೂ, ರಸ್ತೆ ಸಂಪರ್ಕದ ವ್ಯವಸ್ಥೆಯಲ್ಲೂ ಕೊರತೆಯಿದೆ. ಪೀಠ ರಚನೆಗೆ ಪಬ್ಲಿಕ್ ಹೀಯರಿಂಗ್ ಆಗಬೇಕಿತ್ತು, ಮಾಡಿಲ್ಲ. ನ್ಯಾಯಾಲಯ ಅನೇಕ ಪ್ರಕರಣದಲ್ಲಿ ಪಬ್ಲಿಕ್ ಹಿಯರಿಂಗ್ ಮಾಡುತ್ತದೆ. ಇಲ್ಲಿಯಾಕೆ ಮಾಡಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಸರ್ವೆ ಮಾಡದೆ ಶಿವಮೊಗ್ಗದ ನ್ಯಾಯಾಲಯವನ್ನ ಮಂಗಳೂರಿಗೆ ಶಿಫ್ಟ್ ಮಾಡಬಾರದು, ಒಂದೋ ಶಿವಮೊಗ್ಗದಲ್ಲಿಯೇ ಪೀಠ ರಚನೆಯಾಗಲಿ, ಇಲ್ಲ ಬೆಂಗಳೂರಿನಲ್ಲಿಯೇ ಉಳಿಸಬೇಕೆಂದು ಆಗ್ರಹಿಸಿದರು. ನಂತರ ಶಿವಮೊಗ್ಗ ನ್ಯಾಯಾಲಯದ ಆವರಣದಲ್ಲಿ ಬಾರ್ ಅಸೋಸಿಯೇಷನ್ ನಡೆಸುತ್ತಿರಯವ ಪ್ರತಿಭಟನೆಯಲ್ಲಿ ವೇದಿಕೆ ಸದಸ್ಯರು ಸೇರ್ಪಡೆಗೊಂಡರು.
High Court bench should be in Shivamogga itself - Citizens' Interest Protection Forum demands

