ಎರಡನೇ ದಿನಕ್ಕೆ ಕಾಲಿಟ್ಟ ಶಿವಮೊಗ್ಗದಲ್ಲೇ ಹೈಕೋರ್ಟ್ ಪೀಠ ಬೇಕೆಂಬ ಹೋರಾಟ- The struggle to establish a High Court bench in Shivamogga entered its second day.

 SUDDILIVE || SHIVAMOGGA

ಎರಡನೇ ದಿನಕ್ಕೆ ಕಾಲಿಟ್ಟ ಶಿವಮೊಗ್ಗದಲ್ಲೇ ಹೈಕೋರ್ಟ್ ಪೀಠ ಬೇಕೆಂಬ ಹೋರಾಟ- The struggle to establish a High Court bench in Shivamogga entered its second day.   

High, court

ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ರಚನೆಯಾಗಬೇಕು ಎಂದು ಕೋರ್ಟ್ ನ ಆವರಣದಲ್ಲಿ ನಡೆಯುತ್ತಿರುವ ವಕೀಲರ ಸಂಘದ ಪ್ರತಿಭಟನೆಯಲ್ಲಿ ಶಾಸಕ ಚೆನ್ನಬಸಪ್ಪ,  ನಾಗರೀಕರ ಹಿತರಕ್ಷಣ ವೇದಿಕೆ ಹಾಗೂ ವಿವಿಧ‌ ಸಂಘಟನೆಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ನಾಗರೀಕ ಹಿತರಕ್ಷಣ ವೇದಿಕೆ ಇದು ಕೇವಲ ವಕೀಲರ ಹೋರಾಟವಲ್ಲ ಬದಲಿಗೆ ನಾಗರೀಕರ  ಹೋರಾಟ ಹಾಗಾಗಿ ಎಲ್ಲರೂ ಬೆಂಬಲಿಸಬೇಕು ಹಾಗೂ ಅಲ್ಗೊಳ್ಳಬೇಕು. ಒಂದು ವೇಳೆ ಶಿವಮೊಗ್ಗವನ್ನ‌ ಮಂಗಳೂರಿನ ಒಳಗೆ ಉಫಿದುಕೊಂಡರೆ ಇಲ್ಲಿನ ಜನರಿಗೆ ಆಗುವ ತೊಂದರೆಗಳ ಬಗ್ಗೆ ವಿವರಿಸಿ ನಂತರ ಪತ್ರಿಕಾ ಭವನದಿಂದ ಕೋರ್ಟ್ ಆವರಣದ ವರೆಗೆ ಪ್ರತಿಭಟನ ಮೆರವಣಿಗೆ ನಡೆಸಿ ಭಾಗಿಯಾಗಿದ್ದು ವಿಶೇಷವಾಗಿತ್ತು. 


ಶಾಸಕ ಚೆನ್ನಬಸಪ್ಪ ಮಾತನಾಡಿ, ಮಂಗಳೂರಿನವರು ನಮಗೆ ಪೀಠ ಬೇಕೆಂದು ಹೋರಾಡುತ್ತಿದ್ದಾರೆ. ಶಿವಮೊಗ್ಗದ ನಾಗರೀಕರಿಗೆ ಮಂಗಳೂರಿಗೆ ಪೀಠ ಹೋಗಿರುವುದರಿಂದ ತೊಂದರೆಯಾಗುತ್ತಿದೆ ಎಂದು ಹೋರಾಡುತ್ತಿದ್ದಾರೆ. ಈ ಬಗ್ಗೆ ವಕೀಲರ ಸಂಘ ಏನೇ ಪ್ರತಿಭಟನೆ ಮಾಡಿದರೂ ನನ್ನ ಬೆಂಬಲವಿದೆ. ಶಿವಮೊಗ್ಗದಲ್ಲಿಯೇ ಪೀಠ ರಚನೆ ಆಗಬೇಕು ಇಲ್ಲ ಬೆಂಗಳೂರಿಗೆ ವರ್ಗವಾಗಬೇಕೆಂಬ ವಾದ ನ್ಯಾಯಸಮ್ಮತವಾಗಿದೆ. ಯಾವಾಗ ಕರೆದರೂ ನಾನು ಸಂಘದ ಜೊತೆ ಬರಲು ಸಿದ್ದ ಎಂದು ಘೋಷಿಸಿದ್ದಾರೆ. 

ಇದರಿಂದ ಪೀಠ ಬೇಕೆಂದು ನಡೆಯುತ್ತಿರುವ ವಕೀಲರ ಸಂಘದ ಹೋರಾಟ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ನಾಳೆ ನಿಯೋಗ ಸಿಎಂರನ್ನ ಭೇಟಿಯಾಗಲಿದೆ. ವಿಧಾನ ಸಭೆ ಸಭಾಧ್ಯಕ್ಷರನ್ನ, ಹೈಕೋರ್ಟ್ ನ್ಯಾಯಧೀಶರನ್ನ ನಾಳೆ ಭೇಟಿಯಾಗಲಿದೆ. ಹೋರಾಟದಲ್ಲಿ ಡಿಎಸ್ ಎಸ್ ನ ಗುರುಮೀರ್ತಿ, ಅಂಬೇಡ್ಕರ್ ವಾದದ ಹಾಲೇಶಪ್ಪ, ರೈತ ಸಂಘದ ಬಸವರಾಜಪ್ಪ, ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಮೊದಲಾದವರು ಪಕ್ಷಾತೀತವಾಗಿ ಪಾಲ್ಗೊಂಡಿರುವುದು ವಿಶೇಷವಾಗಿದೆ.  

The struggle to establish a High Court bench in Shivamogga entered its second day

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close