SUDDILIVE || SHIVAMOGGA
ಜನಿವಾರ ವಿವಾದ-ಏಕಾಂಗಿಯಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿಗೆ ಮುಂದಾದ ಗಣೇಶ್-Janiwara controversy - Ganesh begins a solo overnight sit-in in front of the District Collector's office
ಬೆಂಗಳೂರಿನಲ್ಲಿ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಅಖಿಲ ಕರ್ನಾಟಕ ಸ್ಮಾರ್ಥ ಬ್ರಾಹ್ಮಣ ಸಂಘ ಗಂಭೀರವಾಗಿ ಪರಿಗಣಿಸಿದೆ. ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಹೇಳಿದಂತೆ ಇಂದು ಸಂಜೆ ಸಂಘದ ಅಧ್ಯಕ್ಷರು ಏಕಾಂಗಿಯಾಗಿ ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.
ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ಅಧ್ಯಕ್ಷ ರಘುರಾಮ್ ನೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಖಿಲ ಕರ್ನಾಟಕ ಸ್ಮಾರ್ಥ ಬ್ರಾಹ್ಮಣ ಸಂಘದ ಅಧ್ಯಕ್ಷ ಗಣೇಶ್ ಜಿಲ್ಲಾಧಿಕಚೇರಿ ಎದುರು ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.
ಮೊನ್ನೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಕೃಪ ನಿಧಿ ಕಾಲೇಜು ಬೆಂಗಳೂರಿನಲ್ಲಿ ವಿದ್ಯಾರ್ಥಿಗೆ ಜನಿವಾರ ತೆಗೆಸಲಾಗಿದೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಾಗಿದೆ. ಮತ್ತೊಮ್ಮೆ ಜನಿವಾರಕ್ಕೆ ಕೈಹಾಕಿದರೆ ತಕ್ಕಪಾಠ ಕಲಿಸಲಾಗುವುದು. ಸರ್ಕಾರ ಪರೀಕ್ಷೆ ನಡೆಸುವ ಮೊದಲು ನಿಯಮಾವಳಿಗಳನ್ನ ಮಾಧ್ಯಮಗಳಲ್ಲಿ ಬಹಿರಂಗಗೊಳಿಸಲಿ ಎಂದು ಆಗ್ರಹಿಸಿರುವ ಗಣೇಶ ಇದಕ್ಕೂ ಸರ್ಕಾರ ಸ್ಪಷ್ಟನೆ ನೀಡದಿದ್ದರೆ ಮೇ.15 ರಿಂದ ಉಗ್ರ ರೂಪಿಯ ಹೋರಾಟಕ್ಕೆ ಸಂಘ ಮುಂದಾಗಲಿದೆ ಎಂದರು.
ನಾವು ಶಾಂತಿಗೂ ಸಿದ್ದ ಕ್ರಾಂತಿಗೂ ಬದ್ದ, ಸಮಾಜ, ದೇಶ ಎಂದು ಬಂದಾಗ ಹೋರಾಟ ಮಾಡಿತ್ತೇವೆ ಸಮುದಾಯಕ್ಕೆ ಧಕ್ಕೆ ಆದಾಗ ಸುಮ್ಮನಿರಲು ಸಾಧ್ಯವಿಲ್ಲ. ಸಣ್ಣ ಜನಿವಾರ ಸರ್ಕಾರಕ್ಕಾಗಲಿ, ಪರೀಕ್ಷೆಗಾಗಲಿ ಏನು ಸಮಸ್ಯೆಯಾಗಿದೆ ಎಂದು ಪ್ರಶ್ನಿಸಿದರು.
ಸರ್ಕಾರ ತೆಗೆಸಿದ್ದು ವೈಯಕ್ತವೋ, ಶಿಕ್ಷಣ ಇಲಾಖೆಯ ನಿಯಮವೋ ಅಥವಾ ಸರ್ಕಾರದ ನಿಯಮವೋ ಎಂಬುದನ್ನ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಸ್ಪಷ್ಠಡಿಸಬೇಕು.ಭಾರತೀಯ ಮಹಿಳೆಗೆ ಕುಂಕುಮ ಬೊಟ್ಟು, ಬಳೆ ತೆಗೆಸಿರುವುದು ಸರಿಯಾದ ಕ್ರಮವಲ್ಲ ಎಂದರು.
Janiwara controversy - Ganesh begins a solo overnight sit-in in front of the District Collector's office
