ಬೇಸೂರು ಅಣುಸ್ಥಾವರ ಆಗಲು ಬಿಡಲ್ಲ- ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ನಿರ್ಣಯ - Besuru will not be allowed to become a nuclear power plant - Resolution to establish a High Court mobile bench in Shivamogga

SUDDILIVE || SHIVAMOGGA

ಬೇಸೂರು ಅಣುಸ್ಥಾವರ ಆಗಲು ಬಿಡಲ್ಲ- ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ನಿರ್ಣಯ - Besuru will not be allowed to become a nuclear power plant - Resolution to establish a High Court mobile bench in Shivamogga      

Hight, court

ಜಿಲ್ಲೆಯ ಸಾಗರ ತಾಲ್ಲೂಕಿನ‌ ಬೇಸೂರು ಗ್ರಾಮದಲ್ಲಿ ಅಣುಸ್ಥಾವರ ಆಗಲು ನಾವು ಬಿಡುವುದಿಲ್ಲ ಹಾಗೂ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಮಾಡಲಿ  ಸರ್ವಾನುಮತದಿಂದ ನಿರ್ಣಯ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು.

ಶುಕ್ರವಾರದಂದು ಜಿ.ಪಂ. ಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಸಕರಾದ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಮಲೆನಾಡು ಡ್ಯಾಂ ಸೂಕ್ಷ್ಮ ಪ್ರದೇಶದಲ್ಲಿ ಮುಳುಗಡೆಯಾಗಿ ಎರಡು ಬಾರಿ ಜನರುವನಿರಾಶ್ರಿತರಾಗಿ ಈಗಾಗಲೇ ಬೇಸತ್ತಿದ್ದು ಇದೀಗ ಬೇಸೂರು ಅಣುಸ್ಥಾವರ ಪ್ರಸ್ತಾಪದ ಬಗ್ಗೆ ರೈತರು ಬಹಳ ಭಯದಲ್ಲಿದ್ದಾರೆ. ಬೇಸೂರು ಅಣು ಸ್ಥಾವರ ಮಾಡಲು ಸಚಿವರು, ಶಾಸಕರು ಬಿಡುವುದಿಲ್ಲ ಎಂದರು.

ಶಾಸಕರು ಮಾತನಾಡಿ, ಇಲ್ಲಿ ೯೦ ಲಕ್ಷ ಪ್ರಕರಣ ಬಾಕಿ ಇದ್ದು, ಶಿವಮೊಗ್ಗ ದಲ್ಲಿ ಪೀಠ ಸ್ಥಾಪನೆಯಿಂದ ಮಧ್ಯ ಕರ್ನಾಟಕ ಭಾಗಕ್ಕೆ ಅನುಕೂಲವಾಗಲಿದ್ದು ಸರ್ವಾನುಮತದಿಂದ ಪೀಠ ಸ್ಥಾಪನೆಗೆ  ಒತ್ತಾಯಿಸುತ್ತೇವೆಂದರು. ಸಚಿವರು ಪ್ರತಿಕ್ರಿಯಿಸಿ ಇಂದು ಕೆಡಿಪಿ ಸಭೆಯಲ್ಕಿ‌ಎರಡು ಮುಖ್ಯ ನಿರ್ಣಯ ಕೈಗೊಳ್ಳಲಾಗುತ್ತಿದ್ದು, ಬೇಸೂರು ಅಣುಸ್ಥಾವರ ಆಗಲು ನಾವು ಬಿಡುವುದಿಲ್ಲ ಎಂದು ಸರ್ವಾನುಮತದಿಂದ ನಿರ್ಣಯ ಮಾಡಲಾಗಿದೆ.

ಹಾಗೂ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಆಗಬೇಕೆಂದು ವಕೀಲರ ಸಂಘ ಸೇರಿದಂತೆ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹೋರಾಟ ಮಾಡುತ್ತಿದ್ದು ಪಕ್ಷಾತೀತವಾಗಿ ಈ‌ ನಿರ್ಣಯ ಕುರಿತಾದ ಸಹಿ ಹೊಂದಿದ ಪ್ರತಿಯನ್ನು ಕೇಂದ್ರ ಸರ್ಕಾರಕ್ಕೆ ಸಹ ಸಲ್ಲಿಸಿ ಒತ್ತಡ ತರೋಣ ವೆಂದರು. 

ಮರಕಠಾವ್ ಗೆ ಅನುಮತಿ ಕೊಡಿ

ಎಂಎಡಿಬಿ ಅಧ್ಯಕ್ಷರಾದ ಮಂಜುನಾಥ ಗೌಡ ಮಾತನಾಡಿ ಎಸ್ ಟಿ ಜನಾಂಗದವರ ಗಿಡಗಳನ್ನು ಕಿತ್ತು ಹಾಕಿದ್ದಾರೆ. ಗಾರ್ಡ್ ಗಳೇ ಕ್ರಮ‌ ಕೈಗೊಳ್ಳುತ್ತಿದ್ದಾರೆ. ಅರಣ್ಯ ಭೂಮಿ ಅಲ್ಲವೆಂದರೂ ಕಂದಾಯ ಇಲಾಖೆ ಕ್ಲಿಯರೆನ್ಸ್ ನೀಡುತ್ತಿಲ್ಲವೆಂದರು. 

ಶಾರದಾ ಪೂರ್ಯಾನಾಯ್ಕ ಗ್ರಾಮ ಠಾಣಾ ವ್ಯಾಪ್ತಿಯ ತುಪ್ಪೂರು ಅಂಬೇಡ್ಕರ್ ಶಾಲೆಯಲ್ಲಿನ ಮರಗಳು ಕಟಾವಾಗಿ ಹಾಗೇ ಬಿದ್ದಿವೆ.  ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದರು.

ಶಾಸಕರು, ಮಳೆ ಗಾಳಿಗೆ ಬಿದ್ದ ಸಾಗುವಾನಿ‌ ಮರಗಳನ್ನು  ಅರಣ್ಯ ಇಲಾಖೆಯವರು ರೈತರಿಗೆ ತೊಂದರೆ ಕೊಡದೇ, ವಹಿಸಬೇಕಾದ ಕ್ರಮದ ಬಗ್ಗೆ ತಿಳಿಸಬೇಕೆಂದು ಆಗ್ರಹಿಸಿದರು.

ಶಾಸಕರಾದ ಚನ್ನಬಸಪ್ಪ ಮಳೆಗಾಲಕ್ಕೂ ಮುನ್ನ ಆತಂಕದ ಮರಗಳನ್ನು ತೆಗೆದು ಹಾಕಬೇಕು. ಈಗಾಗಲೇ ಸಾಕಷ್ಟು ಪ್ರಾಣ ಹಾನಿ‌ ಆಗಿದೆ. ತಂಡ ರಚನೆ ಮಾಡಬೇಕು  

ಸಚಿವರು ಪ್ರತಿಕ್ರಿಯಿಸಿ ಶಾಲಾ ಆವರಣದಲ್ಲಿ ಕಟಾವು ಮಾಡಿದ ಮರಗಳನ್ನು ವಿಲೇ ಮಾಡಲು ಡಿಎಫ್ ಓ ರವರು ಕಾನೂನಾತ್ಮಕವಾಗಿ, ತ್ವರಿತವಾಗಿ ಕೆಲಸ ಆಗಬೇಕು. ಯಾವುದೇ ನೆಪ ಹೇಳಬಾರದು. ಸ್ವಚ್ಛಗೊಳಿಸುವುದಕ್ಕೂ ಶಾಸಕರು ಹೇಳಬೇಕಾ?  ಡಿಸಿ ಯವರು ಸೂಕ್ತ ಕ್ರಮ‌ವಹಿಸಬೇಕೆಂದು ತಾಕೀತು‌‌ ಮಾಡಿದರು. ಹಾಗೂ ಆತಂಕದ ಮರಗಳು, ಮೆಸ್ಕಾಂ ಲೈನ್ ಗಳು, ತಂತಿಗಳ ಬಗ್ಗೆ ಎಚ್ಚರಿಕೆ ವಹಿಸಿ ತ್ವರಿತವಾಗಿ ತೆಗೆಸಿ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಗ್ರಾಮೀಣ ಕುಡಿಯುವ ನೀರು

ಆರಗ ಜ್ಞಾನೇಂದ್ರ ಮಾತನಾಡಿ, ಅಧಿಕಾರಿಗಳು ಜೆಜೆಎಂ ಯೋಜನೆ ಬಹಳ ಉತ್ತಮ‌ ಯೋಜನೆ. ಆದರೆ ಸಂಪೂರ್ಣ ವಿಫಲಗೊಳಿಸಿದ್ದಾರೆ. 

ಜಿ.ಪಂ. ಸಿಇಓ ಪ್ರತಿಕ್ರಿಯಿಸಿ, ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ ಅಂದಾಜು‌ ಮೊತ್ತ ಸಾಕಾಗದೇ ಕೆಲವು ಮನೆಗಳಿಗೆ ಸಂಪರ್ಕ ಸಾಧ್ಯವಾಗಿಲ್ಲ. ಇದೀಗ

ಯೋಜನೆಯು ೨೦೨೮ ವರೆಗೆ ವಿಸ್ತರಣೆಯಾಗಿದ್ದು,  ೪೬೪ ಸಂಪರ್ಕಕ್ಕೆ ಹೊಸದಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. 

ಶಾಸಕರಾದ ಗೋಪಾಲಕೃಷ್ಣ ಬೇಳೂರು , ಜೆಜೆಎಂ ಯೋಜನೆಯಡಿ ಪೈಪ್ ಲೈನ್ , ಟ್ಯಾಂಕ್ ಕಾಮಗಾರಿ‌ ಪೂರ್ಣಗೊಳ್ಳಬೇಕು ಎಂದರು.

ಗ್ರಾಮಾಂತರು ಶಾಸಕರು, ಅರಣ್ಯ ಭಾಗದ ಟ್ಯಾಂಕರ್ ನ್ನು ಕೆಡವಲು ಅನುಮತಿ ನೀಡಬೇಕು. ದಾಖಲಾತಿ ಇಲ್ಲವೆಂದು ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ ಎಂದರು.

ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಕೂಡ್ಲಿಗೆರೆ ಕೆರೆಯಿಂದ ನೀರು ನೀಡಿರೆಂದು ಭದ್ರಾ ಮನವಿ ಮಾಡಿದರು. ಭದ್ರಾವತಿ ಶಾಸಕರು ಪ್ರತಿಕ್ರಿಯಿಸಿ, ಸಿಇಓ ಜೊತೆ ಭೇಟಿ ಮಾಡಿ ಪರಿಶೀಲಿಸುವುದಾಗಿ ತಿಳಿಸಿದರು.

ಸಿಇಓ ಉತ್ತರಿಸಿ, ಪಿಡಿಓರವರಿಂದ ೧೯೮೦ ಕ್ಕಿಂತ ಮೊದಲಿನ ಟ್ಯಾಂಕರ್ ಎಂದು ದೃಢೀಕರಣ ಹಾಗೂ ದಾಖಲಾತಿ‌ ಪಡೆದು   ಕೆಡವಲು ಅನುಮತಿ ನೀಡಲಾಗುವುದು ಎಂದರು.

ಶಾಸಕರಾದ ಆರಗ ಜ್ಞಾನೇಂದ್ರ ಸೇರಿದಂತೆ ಶಾಸಕರು, ಮಾತನಾಡಿ ಮದ್ಯ ಮಾರಾಟ ಅವ್ಯಾಹತವಾಗಿದೆ. 24 ಗಂಟೆ ಸಾರಾಯಿ ಮಾರಾಟ ಮಾಡುವ ಕೆಲಸ ಆಗುತ್ತಿದೆ.ಇದರಿಂದಾಗಿ ದುಡಿಯುವ ಕೈಗಳು ಬಹು ಬೇಗ ಜೀವ ಕಳೆದುಕೊಳ್ಳುತ್ತಿವೆ. ಇಂತಹ ಸಾರಾಯಿ ಅಂಗಡಿಗಳ ಮೇಲೆ ಪ್ರಕರಣ ದಾಖಲಿಸಬೇಕು. 

ಅಬಕಾರಿ ಅಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ೮೧೧ ಅಬಕಾರಿ ಪ್ರಕರಣ ದಾಖಲಾಗಿದ್ದು ರೂ. ೧೧೮೪೦ ಲಕ್ಷ ದಂಡ ವಸೂಲಾತಿ ಆಗಿದೆ ಎಂದ ಅವರು ಕಾನೂನು ಉಲ್ಲಂಘನೆ ಮಾಡಿದ ಅಂಗಡಿಗಳ ಪರವಾನಗಿ ರದ್ದು ಪಡಿಸಿ‌ ಕ್ರಮ‌ ವಹಿಸಲಾಗುವುದು ಎಂದರು.

ಕೃಷಿ ಜಂಟಿ ನಿರ್ದೇಶಕರಾದ ಕಿರಣ್ ಕುಮಾರ್ ಮಾತನಾಡಿ, ಮುಂಗಾರು ಬೆಳೆಗೆ ಸಾಕಾಗುವಷ್ಟು ರಾಸಾಯನಿಕ ಗೊಬ್ಬರ ದಾಸ್ತಾನಿದೆ. ೪೫ ಸಾವಿರ ಮೆ. ಟನ್  ದಾಸ್ತಾನಿದೆ. ಜೂನ್ ಅಂತ್ಯ ದವರೆಗೆ ಆಗುವಷ್ಟು ಯೂರಿಯಾ ಡಿಐಪಿ ದಾಸ್ತಾನುನಿದೆ ಎಂದರು.

ಸಚಿವರು, ಪ್ರಥಮ ದರ್ಜೆ ಕಾಲೇಜು ನಿರ್ಮಾಣಕ್ಕೆ ನಗರದ ಮೈನ್ ಮಿಡ್ಲ್ ಸ್ಕೂಲ್ ಆವರಣದಲ್ಲಿ ೦.೨೭ ಗುಂಟೆ ಜಾಗ ಗುರುತಿಸಲಾಗಿದ್ದು,  ಶೀಘ್ರದಲ್ಲೇ ಆದೇಶ ಆಗಲಿದೆ ಎಂದರು. 

ಮೈನ್ ಮಿಡ್ಲ್ ಸ್ಕೂಲ್ ಆವರಣದಲ್ಲಿರುವ ತಮಿಳು ಶಾಲೆಯನ್ನು ಬೇರೆಡೆ ವರ್ಗಾವಣೆ ಮಾಡಿ,  ಮಕ್ಕಳ ಹಿತದೃಷ್ಟಿಯಿಂದ ಸಿಎಸ್ ಆರ್ ನಿಧಿಯಲ್ಲಿ ಶಾಲೆಯನ್ನು ಉನ್ನತೀಕರಿಸಲಾಗುವುದು ಎಂದರು.

ಹುದ್ದೆ ಭರ್ತಿ ಮಾಡಿ

ಶಾಸಕರಾದ ಚನ್ನಬಸಪ್ಪ, ೪೫ ಬಿಲ್ ಕಲೆಕ್ಡರ್ ಇರುವೆಡೆ ಒಬ್ಬರೇ ಮಾಡುತ್ತಿದ್ದಾರೆ ಹಾಗೂ ೧೬೧೦ ಹುದ್ದೆ ಖಾಲಿ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆಯಿಂದ ಒಂದು ಕ್ವಾರಿಯಿಂದ ಅಂದಾಜು ರೂ. ೧.೨೦ ಕೋಟಿ ಯಂತೆ ಸುಮಾರು  ರೂ. 25 ಕೋಟಿ ನಷ್ಟ ಆಗುತ್ತಿದೆ. ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದರು. 

ಆರಗ ಜ್ಞಾನನೇಂದ್ರ ಅಧಿಕಾರಿಗಳೇ ದಂಧೆಯಲ್ಲಿ ಶಾಮೀಲಾಗಿದ್ದು ಕೊಳ್ಳುವವರಿಗೂ ಮರಳಿಲ್ಲ, ಸರ್ಕಾರಕ್ಕೂ ಆದಾಯ ಸಿಗುತ್ತಿಲ್ಲ. ಏನೆಜ್ಸಿಯವರ ಜಿಎಸ್ ಟಿ ರಿಜಿಸ್ಟ್ರಷನ್ನೇ ಇಲ್ಲ. ಬೇಕಾದಷ್ಟು ಮರುಳಿದ್ದರೂ, ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎಂದು ದೂರಿದರು. 

ಸಚಿವರು, ಅಕ್ರಮ ಮರಳು ಸಾಗಾಣಿಕೆ ತಡೆದು

ಕಾನೂನಾತ್ಮಕವಾಗಿ ಕ್ರಮ ವಹಿಸಬೇಕು. ಈ ವಿಷಯದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ. ಜಿಲ್ಲಾಧಿಕಾರಿಗಳು ಅಂತಹ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಕೆ ನೀಡಿದರು. 

 ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ೨೦ ಮರಳು ಕ್ವಾರಿಗಳಿಗೆ ಎನ್ ಓ ಸಿ ಆಗಿ ಕ್ಲಿಯರ್ ಆಗಿದ್ದು ರಾಜ್ಯ ಸಮಿತಿಗೆ ಅನುಮೋದನೆಗೆ ಇಡಲಾಗಿದೆ. ಸರ್ಕಾರದ  ೮ ಬ್ಲಾಕ್ ಇದ್ದು, ೧ ಜೆಜೆಎಂ ಮತ್ತು ೧ ಕೆಆರ್ ಐಡಿ ಎಲ್ ಕಾಮಗಾರಿಗೆ ನೀಡಲಾಗಿದೆ ಎಂದರು.

 ಚೆಕ್ ವಿತರಣೆ 

ಹುಲಿಕಲ್ ಘಾಟ್ ರಸ್ತೆ ನಿರ್ಮಾಣ ವೇಳೆ ಮರಣ ಹೊಂದಿದ ಸಂಬಂಧಿಕರಿಗೆ ತಲಾ ರೂ. 5 ಲಕ್ಷ ಪರಿಹಾರದ ಚೆಕ್ ನ್ನು ಸಚಿವರು ಇದೇ ವೇಳೆ ವಿತರಣೆ ಮಾಡಿದರು.

ಸಭೆಯಲ್ಲಿ ಎಂಎಡಿಬಿ ಅಧ್ಯಕ್ಷರಾದ ಆರ್ ಎಂ‌ ಮಂಜುನಾಥ್ ಗೌಡ, ನಾಮ ನಿರ್ದೇಶಿತ ಸದಸ್ಯರು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ್, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾ.ಮಟ್ಟದ ಅಧಿಕಾರಿಗಳು,

ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ‌ ಸಿಇಓ‌ ಹೇಮಂತ್ ಎನ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಎಎಸ್ ಪಿ ಕಾರಿಯಪ್ಪ, ಜಿ.ಪಂ ಉಪ ಕಾರ್ಯದರ್ಶಿಗಳು, ಸಿಪಿಓ, ಇತರೆ ಅಧಿಕಾರಿಗಳು ಹಾಜರಿದ್ದರು.

Besuru will not be allowed to become a nuclear power plant - Resolution to establish a High Court mobile bench in Shivamogga

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close