ಶಿವಮೊಗ್ಗದಲ್ಲಿ ಮೇ.24, 26 ಹಾಗೂ 27 ರಂದು ಹಲವೆಡೆ ವಿದ್ಯುತ್ ವ್ಯತ್ಯಯ- Power outages in many places in Shivamogga on May 24, 26 and 27

SUDDILIVE || SHIVAMOGGA

ಶಿವಮೊಗ್ಗದಲ್ಲಿ ಮೇ.24, 26 ಹಾಗೂ 27 ರಂದು ಹಲವೆಡೆ ವಿದ್ಯುತ್ ವ್ಯತ್ಯಯ-  Power outages in many places in Shivamogga on May 24, 26 and 27  

Power, Outage


ಶಿವಮೊಗ್ಗದಲ್ಲಿ ಮೇ.24, 26 ಹಾಗೂ 27 ರಂದು ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ಮೇ 24 ರಂದು ಬೆಳಿಗ್ಗೆ 10.00 ರಿಂದ ಮದ್ಯಾಹ್ನ 2.00 ಘಂಟೆವರೆಗೆ ವಿದ್ಯುತ್ ಕಂಬ ತೆರುವುಗೊಳಿಸುವ ಕಾಮಗಾರಿ ಇರುವುದರಿಂದ ಈ ಕೆಳಕಂಡ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 

ದುರ್ಗಿಗುಡಿ ರಸ್ತೆ, ಪಾರ್ಕ್ ಬಡಾವಣೆ, ಸೀತಾರಾಮ ಕಲ್ಯಾಣ ಮಂದಿರ ಅಡ್ಡ ರಸ್ತೆ, ರಾಘವೇಂದ್ರ ಸ್ವಾಮಿ ಮಠ ರಸ್ತೆ, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಶನಿ ಮಹಾತ್ಮ ದೇವಸ್ಥಾನ ರಸ್ತೆ ಮತ್ತು ವಿದ್ಯುತ್ ಪರಿವೀಕ್ಷಕರ ಕಛೇರಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. 

ಮೇ 26 ಮತ್ತು 27 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ ನಗರ ಉಪವಿಭಾಗ-1 ಘಟಕ-2ರ ವ್ಯಾಪ್ತಿಯಲ್ಲಿ ಮೇ 26 ಮತ್ತು 27 ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ ವಿದ್ಯುತ್ ಕಂಬ ತೆರವುಗೊಳಿಸುವ ಕಾಮಗಾರಿ ಇರುವುದರಿಂದ ಎ.ಎನ್.ಕೆ ಮುಖ್ಯ ರಸ್ತೆ, ಜೈಲ್ ರಸ್ತೆ, ಚನ್ನಪ್ಪ ಲೇಔಟ್, ಅಚ್ಯುತ್‌ರಾವ್ ಲೇಔಟ್, ವೆಂಕಟೇಶ ನಗರ, ಗಾಂಧಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Power outages in many places in Shivamogga on May 24, 26 and 27

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close