SUDDILIVE || SHIVAMOGGA
ಬಹುಮಹಡಿ ಕಟ್ಟಡದ ಎದುರಿನ ಜಾಗ ಒತ್ತುವರಿ ತೆರವು-Clearance of encroachment on land in front of multi-storey building
ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರದಿಂದ ಶಿವಪ್ಪ ನಾಯಕ ವೃತ್ತದ ರಸ್ತೆಯಲ್ಲಿದ್ದ(ಬಹುಮಹಡಿ ಕಟ್ಟಡದ ಎದುರಿನ ರಸ್ತೆ) ಹೂವಿನ ಅಂಗಡಿಯನ್ನ ಸಂಚಾರಿ ಪೊಲೀಸ್ ಠಾಣೆಯ ಸಿಪಿಐ ದೇವರಾಜ್ ಹಾಗೂ ಮಹಾನಗರ ಪಾಲಿಕೆ ನೆತೃತ್ವದಲ್ಲಿ ತೆರವುಗೊಳಿಸಲಾಗಿದೆ.
ಅನೇಕ ರಾಜಕಾರಣದ ಒತ್ತಡದ ನಡುವೆಯೂ ಈ ರಸ್ತೆ ತೆರವುಗೊಳಿಸಿರುವುದು ಸಾರ್ವಜನಿಕರ ಮೆಚ್ಚಿಗೆಗೆ ಕಾರಣವಾಗಿದೆ. 6-7 ತಿಂಗಳ ಹಿಂದೆ ರಸ್ತೆಯ ಮೇಲಿರುವ ಹೂವಿನ ಅಂಗಡಿಯನ್ನ ಇಟ್ಟುಕೊಂಡಿದ್ದ ವ್ಯಾಪಾರಿಗಳಿಗೆ ತೆರವಿಗೆ ಸೂಚಿಸಿದರೂ ಸಹ ತೆರವುಗೊಳಿಸಲು ಆಗಿರಲಿಲ್ಲ.
ಆದರೆ ಇಂದು ಜೆಸಿಬಿ ತಂದು ಎಲ್ಲಾ ಅಂಗಡಿಗಳನ್ನ ತೆರವುಗೊಳಿಸಲಾಗಿದೆ. ಹಲವು ಕಾರಣದಿಂದ ಈ ರಸ್ತೆಯನ್ನ ಬೀದಿ ಮೇಲೆ ವ್ಯಾಪಾರ ಮಾಡುವ ಹೂವಿನ ವ್ಯಾಪಾರಿಗಳಿಗೆ ಬಸ್ ನಿಲ್ದಾಣದ ಎದುರು ಜಾಗ ನೀಡಿದರೂ ಕೆಲವರು ಇಲ್ಲೇ ಉಳಿದಿಕೊಂಡಿದ್ದರು. ಅವರಿಂದ ರಸ್ತೆ ಒತ್ತುವರಿ ಮಾಡಲಾಗಿತ್ತು. ಈಗ ತೆರವುಗೊಳಿಸಿ ಸಿಪಿಐ ಸಾರ್ವಜನಿಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Clearance of encroachment on land in front of multi-storey building



