SUDDILIVE || SHIVAMOGGA
ಮೆಗ್ಗಾನ್ ಕುಂದು ಕೊರತೆ ಕುರಿತು 15 ದಿನಗಳಲ್ಲಿ ಸಮಿತಿ ರಚನೆ-ಸಚಿವ ಮಧು ಬಂಗಾರಪ್ಪ- Committee to be formed within 15 days to address Meggan Kundu shortage - Minister Madhu Bangarappa
ಪಿಹೆಚ್ ಸಿ ಗಳಲ್ಲಿ ವೈದ್ಯರ ಅಲಭ್ಯತೆ, ಮೆಗ್ಗಾನ್ ಆಸ್ಪತ್ರೆಯಲ್ಲಿ ಎರಡು ಕೋಟಿಗಳ ಕಾಮಗಾರಿ, ಸಮಿತಿ ರಚನೆ ಕುರಿತು, ಮೆಗ್ಗಾನ್ ಅವ್ಯವಸ್ಥೆ, ಅರಣ್ಯ ಇಲಾಖೆಯ ಸರ್ವೆ ಕುರಿತು ಇಂದು ಜಿಲ್ಲಾ ಪಂಚಾಯಿತಿಯಲ್ಲಿ ಸಚಿವ ಮಧು ಬಂಗಾರಪ್ಪನವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಸಭೆ ನಡೆದಿದೆ.
ಮೊದಲಿಗೆ ಡಿಹೆಚ್ ಒ ನಾಗರಾಜ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ 9ಪಿಹೆಚ್ ಸಿಯಲ್ಲಿ ಡಾಕ್ಟರ್ ಗಳ ಖಾಲಿಯಾದ್ದರು. ಈಗ ಅವರೆಲ್ಲ ನೀಟ್ ಪರೀಕ್ಷೆ ಬರೆಯಲು ಹೋಗಿದ್ದರಿಂದ ಜಿಲ್ಲೆಯಲ್ಲಿ ಒಟ್ಟು 18 ಪಿಹೆಚ್ ಸಿ ಡಾಕ್ಟರ್ ಖಾಲಿಯಾಗಿದೆ ಎಂದು ಸಭೆಗೆ ತಿಳಿಸಿದ್ದಾರೆ.
MBBS ಓದಿದವರನ್ನ ಪಿಹೆಚ್ ಸಿಗಳಲ್ಲಿ ನೇಮಿಸಿಕೊಳ್ಳುವಂತೆ ಹಾಗೂ ಪಿಜಿ ಓದಿದವರನ್ನೂ ತೆಗೆದುಕೊಳ್ಳುವಂತೆ ಎಂಎಲ್ ಸಿ ಡಾ. ಧನಂಜಯ ಸರ್ಜಿ ಹೇಳಿದರು. ಡಿಹೆಚ್ ಒ ಮಾತನಾಡಿ, ನೀಟ್ ಪರೀಕ್ಷೆ ಮುಗಿಯುವರೆಗೆ ಯಾರೂ ಬರುತ್ತಿಲ್ಲ ಎಂದಿದದ್ದಾರೆ. ಎಂಎಲ್ ಸಿ ಬಲ್ಕಿಸ್ ಭಾನು ಮಾತನಾಡಿ, ಎರಡು ಮೆಡಿಕಲ್ ಕಾಲೇಜಿದೆ ಅಲ್ಲಿ ನೋಟೀಸ್ ಬೋರ್ಡ್ಗೆ ಹುದ್ದೆಗಳ ಬಗ್ಗೆ ನೋಟೀಸ್ ಅಂಟಿಸಿ ಎಂದರು.
ಜಿಪಂ ಸಿಇಒ ಮಾತನಾಡಿ ಬರುವವರು ಬರ್ತಿದ್ದಾರೆ. ಆದರೆ ತಮಗೆ ಬೇಕಾದ ಜಾಗ ಸಿಗಲಿಲ್ಲ ಎಂದು ವೈದ್ಯರು ಮತ್ತೆ ಬಿಟ್ಟು ಹೋಗುತ್ತಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ನಮ್ಮ ಕ್ಷೇತ್ರದಲ್ಲಿ ಮೊನ್ನೆ ಐದು ಅಪಘಾತ ನಡೆದಿದೆ ಡಾಕ್ಟರ್ ಇಲ್ಲದಂತಾಗಿದೆ ಎಂದರು.
ಗ್ರಾಮಾಂತರ ಸೇವೆಗೆ ಪಿಜಿಗಳನ್ನ ನೇಮಿಸಿ. ಇವರು ಮಾಡದಿದ್ದರೆ ದಂಡವಿದೆ ಎಂದು ಡಾ.ಸರ್ಜಿ ಹೇಳಿದರು. ಸಚಿವರು ಮಾತನಾಡಿ ಇದನ್ನ ಸರ್ಕಾರದ ಮಟ್ಟದಲ್ಲಿ ಸರಿ ಮಾಡಬೇಕಿದೆ ಬೆಂಗಳೂರಿನಲ್ಲಿ ನಾವಿಬ್ಬರು ಒಟ್ಟಿದೆ ಆರೋಗ್ಯ ಸಚಿವರನ್ನ ಭೇಟಿಯಾಗ ಆಗೋಣ ಎಂದರು.
ಶಾಸಕ ಚೆನ್ನಿ ಮಾತನಾಡಿ, ಕೆಡಿಪಿ ಮೂರು ತಿಂಗಳಿಗೆಒಮ್ಮೆ ನಡೆಸಬೇಕಿತ್ತು 6 ತಿಂಗಳಿಗೊಮ್ಮೆ ಆಗಿದೆ. ಕೆಡಿಪಿಯಲ್ಲಿ ನಾವು ಮಾತನಾಡಿರುವ ಬಗ್ಗೆ ಗೊತ್ತಾಗುತ್ತಿಲ್ಲ. ಮೆಗ್ಗಾನ್ ನಲ್ಲಿ ಸಮಿತಿ ರಚನೆ ಮಾಡಲು ಆಗುತ್ತಿಲ್ಲ. ಕಮಿಟಿಯಲ್ಲಿ ಯಾರನ್ನಾದರೂ ಮಾಡಿ ಕುಂದುಕೊರತೆಗೆ ಸಮಿತಿ ಆಗಿಲ್ಲ ಎಂದರು.
ಶಾಸಕ ಆರಗ ಮಾತನಾಡಿ, ಮೆಗ್ಗಾನ್ ನಲ್ಲಿ ನಿಮ್ಮನೇತೃತ್ವದಲ್ಲಿ ಒಂದು ಸಭೆ ನಡೆದಿಲ್ಲ. ರಾತ್ರಿ ಸೀನಿಯರ್ ವೈದ್ಯರೆ ಮೆಗ್ಗಾನ್ ನಲ್ಪಿ ಇರಲ್ಲ ಎಲ್ಲಾ ಜ್ಯೂನಿಯರ್ ವೈದ್ಯರು ನೇಮಿಸಿಕೊಳ್ಳಲಾಗಿದೆ ಎಂದರು. ಸಚಿವರು ಮಾತನಾಡಿ, 15 ದಿನಗಳಲ್ಲಿ ಕಮಿಟಿ ಮಾಡಲಾಗುವುದು ಎಂದರು.
ಇಷ್ಟು ದೊಡ್ಡ ಮೆಡಿಕಲ್ ಕಾಲೇಜು ಇಟ್ಟುಕೊಂಡು ಮಂಗಳೂರಿನ ವೆನ್ ಲಾಕ್ ಗೆ ಹೋಗಲು ಹೇಳುತ್ತಾರೆ. ಸಿಮ್ಸ್ ನಿರ್ದೇಶಕರು ಸಭೆಗೆ ಬರೊಲ್ಲ. ಹಾವು ಕಚ್ಚಿದವನು ಮೆಗ್ಗಾನ್ ನಲ್ಪಿ ಸೂಕ್ತ ಚಿಕಿತ್ಸೆ ಇಲ್ಲದೆ ಸತ್ತು ಹೋಗಿದ್ದಾನೆ ಎಂದು ಶಾಸಕ ಚೆನ್ನಿ ಹೇಳಿದರು. ಮೆಗ್ಗಾನ್ ಮುಖ್ಯ ಸರ್ಜನ್ ಗೀತಾ ಅವರು ಮಾತನಾಡಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಶಾಸಕ ಗೋಪಾಲ ಕೃಷ್ಣ ಮಾತನಾಡಿ, ತುಮರಿ ಬ್ಯಾಕ್ ವರ್ಡ್ ನಲ್ಪಿ ವೈದ್ಯರಿಲ್ಲ ಹಾಕಿಕೊಳ್ಳಿ ಎಂದರೆ ಡಿಹೆಚ್ ಒ ಹಾಕಿಕೊಳ್ಳಲ್ಲ. ನಾವು ಹೇಳೇದೆ ಕೇಳಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೆಗ್ಗಾನ್ ನಲ್ಲಿ ರೋಗಿ ಸಂಬಂಧಿಕರೊಂದಿಗೆ ಬರುವವರಿಗೆ ವಿಶ್ರಾಂತಿ ಕೊಠಡಿ ಎರಡು ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಪ್ರಗತಿಯಾಗಿಲ್ಲ ಎಂದು ಡಾ.ಸರ್ಜಿ ಪ್ರಸ್ತಾಪಿಸಿದರು. ಸಚಿವರು ಮಾತನಾಡಿ ಮೆಗ್ಗಾನ್ ನಲ್ಪಿ 27 ತಾಲೂಕಿನಲೋಡ್ ಇಲ್ಲಿದೆ. ವೈದ್ಯರು ವರ್ಕ್ ಮಾಡಿದ್ದಾರೆ. ಸ್ಥಳದಲ್ಲಿಯೇ ಗೀತಾರಿಗೆ ನಿರ್ದೇಶಕರಿಗೆ ಕರೆ ಮಾಡಲು ಸೂಚಿಸಿದರು. ಗೀತಾರವರಿಗೆ ನಿರ್ದೇಶಕರು ಜಿಪಂ ಸಭೆಗೆ ಬರುವುದಾಗಿ ತಿಳಿಸಿದರು.
ಅರಣ್ಯ ಡಿಫಾರೆಸ್ಟ್ ಬಗ್ಗೆ ಸಭೆ ನಡೆದಿದೆ. ಜನಪ್ರತಿನಿಧಿ ಗಮನಕ್ಕೆ ಬಾರದೆ ಗ್ರಾಮಸಮಿತಿ ಗಮನಕ್ಕಿಲ್ಲದೆ ಸಭೆ ನಡೆದಿದೆ ಎಂದು ಶಾಸಕ ಬೇಳೂರು ಆಗ್ರಹಿಸಿದರು. ಶರಾವತಿ ಮುಳುಗಡೆ ಬಗ್ಗೆ ಜನ ಗಾಬರಿಯಾಗಿದ್ದಾರೆ. ಮತ್ತೊಂದು ಆತಂಕ ತರಬೇಡಿ ಎಂದರು.
ಜಿಲ್ಲಾಉಸ್ತುವರಿ ಸಚಿವರ ಜೊತೆ ನಮ್ಮ ಜೊತೆ ಸಭೆ ನಡೆಸಿ ಕ್ರಮಕೈಗೊಳ್ಳಿ ಎಂದರು ಸಚಿವರು ಮಾತನಾಡಿ, ಸುಪ್ರೀಂ ಸರ್ವೆ ಮಾಡಲು ಸೂಚಿಸಿದೆ. ಹಾಗಾಗಿ ಅರಣ್ಯದವರು ಹೋಗಿ ಹೆದರಿಸುತ್ತಿದ್ದಾರೆ. ಸಾಗರ, ಸೊರಬ, ತೀರ್ಥಹಳ್ಳಿಯಲ್ಲಿ ಗಮನಕ್ಕೆ ತಂದು ಕಂದಾಯ ಮತ್ತು ಅರಣ್ಯ ಇಲಾಖೆ ಕ್ರಮಜರುಗಿಸಬೇಕು. ಶಾಸಕ ಆರಗ ಮಾತನಾಡಿ ಡೀಮ್ಡ್ ಫಸರೆಸ್ಟ್ ಜಾಗವನ್ನ ಕೈಬಿಡಬೇಕು ಎಂದು ಇದೆ. ಇದನ್ನಗಾಬರಿ ಪಡಿಸದೆ ಜನಜಾಗೃತಿ ಮೂಲಕ ಜಾಗೃತಿ ಮೂಡಿಸುವಂತೆ ಕೋರಿದರು.
ಜಿಲ್ಲಾಪಂಚಾಯತ್ ಸಭೆಗೂ ಮುನ್ನ ಹುಲಿಕಲ್ ಘಾಟಿಯಲ್ಲಿ ಮೃತರಾದ ರಾಜು ಮತ್ತು ಶಬ್ಬೀರ್ ಅವರ ಕುಟುಂಬಕ್ಕೆ ಸರ್ಕಾರದ 5ಲಕ್ಷ ರೂ. ಸರ್ಕಾರದ ಪರಿಹಾರ ಧನ ನೀಡಲಾಯಿತು.
Committee to be formed within 15 days to address Meggan Kundu shortage - Minister Madhu Bangarappa

