ಜಿಪಂ ಗೇಟಿನ ಮುಂಭಾಗದಲ್ಲಿ ಬಿಜೆಪಿ ರೈತ ಮೋರ್ಚ ಹಾಗೂ ಬಜರಂಗದಳದವರನ್ನ ತಡೆದ ಪೊಲೀಸರು- Police stopped BJP Ryta Morcha and Bajrang Dal members in front of the ZP gate.

 SUDDILIVE || SHIVSMOGGA

ಜಿಪಂ ಗೇಟಿನ ಮುಂಭಾಗದಲ್ಲಿ ಬಿಜೆಪಿ ರೈತ ಮೋರ್ಚ ಹಾಗೂ ಬಜರಂಗದಳದವರನ್ನ  ತಡೆದ ಪೊಲೀಸರು- Police stopped BJP Ryta Morcha and Bajrang Dal members in front of the ZP gate.    



ಶಿವಮೊಗ್ಗದ ಜಿಲ್ಲಾ ಪಂಚಾಯತ್ ನಲ್ಲಿ ಕೆಡಿಪಿ ಸಭೆ ನಡೆಯುವ ಮುನ್ನ ಪೊಲೀಸರಿಗೂ ಮತ್ತು ರೈತರ ನಡುವೆ ತಳ್ಳಾಟ, ನೂಕಾಟ ನಡೆದಿರುವ ಘಟನೆ ಇಂದು ನಡೆಯಿತು. 

ಕೆಡಿಪಿ ಸಭೆಯು ಸಚಿವ ಮಧು ಬಂಗಾರಪ್ಪನವರ ಅಧ್ಯಕ್ಷತೆಯಲ್ಲಿ ನಡೆಯಬೇಕಿತ್ತು. ಸಭೆಗೆ ಸಚಿವರು ಇನ್ನೂ ಆಗಮಿಸಬೇಕಿದೆ. ಸಭೆಗೆ ಬರುವ ಸಚಿವರಿಗೆ ಜಿಪಂ ಗೇಟಿನ ಬಳಿ ಬಿಜೆಪಿ ರೈತ ಮೋರ್ಚಾದವರು ಮನವಿ ನೀಡಲು ಬಂದಿದ್ದು ಅವರನ್ನ ಪೊಲೀಸರು ತಡೆದಿದ್ದಾರೆ.  ಆದರೆ ಪೊಲೀಸರು ಸಭೆಯ ಬಳಿಕ ಮನವಿ ನೀಡಲು ಸೂಚಿಸಿದರು. ಇಷ್ಟಕ್ಕೆ ಪೊಲೀಸರು ಮತ್ತು ರೈತರ ನಡುವೆ ತಳ್ಳಾಟ ಮತ್ತು ನೂಕಾಟ ನಡೆದಿದೆ. ಈ ವೇಳೆ ಬಿಜೆಪಿ ಶಾಸಕ ಚೆನ್ನಬಸಪ್ಪನವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. 

ಹೊಳೆಹೊನ್ನೂರು ಭಾಗದಲ್ಲಿ ಇತ್ತೀಚೆಗೆ ಬಿದ್ದ ಅಕಾಲಿಕ ಮಳೆಯಿಂದ ಅಪಾರ ಹಾನಿಯಾಗಿವೆ. ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚ ಇಂದು ಸಚಿವರ ಸಭೆ ನಡೆಯುವ ಜಿಪಂಗೆ ಬಂದಿದ್ದರು. ಜಿಪಂನಲ್ಲಿ ಪೊಲೀಸರು ತಡೆದ ಹಿನ್ನಲೆಯಲ್ಲಿ ಈ ತಿಕ್ಕಾಟ ನಡೆದಿದೆ. ಪೊಲೀಸರು ಜಿಪಂ ಗೇಟಿಗೆ ಎಡಿಷನಲ್ ಎಸ್ಪಿ ಅವರ ಕಾರನ್ನ ಅಡ್ಡ ನಿಲ್ಲಿಸಿ ರೈತರನ್ನ ತಡೆದಿದ್ದಾರೆ.


 

ಇದಾದ ಬಳಿಕ ಬಜರಂಗ ದಳದ ಕಾರ್ಯಕರ್ತರನ್ನ ಪೊಲೀಸರು ಗೇಟಿನ ಮುಂಭಾಗದಲ್ಲಿ ತಡೆದಿದ್ದಾರೆ. ಹಿಜಾಬ್ ಗೆ ಶಾಲಾ ಕಾಲೇಜಿನಲ್ಲಿ ಹಿಜಾಬ್ ಗೆ ಅವಕಾಶ ನೀಡಿ ಕೋಮುದ್ವೇಷ ಹುಟ್ಟುಹಾಕಲಾಗಿದೆ.  ಕೇಸರಿ ಶಾಲಿಗೆ ಅವಕಾಶ ನೀಡೆದೆ ಇರುವುದನ್ನ ಖಂಡಿಸಿ ಸಚಿವರಿಗೆ ಮನವಿ ನೀಡಲು ಬಂದಿದ್ದರು. ಇವರನ್ನೂ ಪೊಲೀಸರು ತಡೆದಿದ್ದಾರೆ.

ಇದರಿಂದಾಗಿ ಜಿಪಂ ಸುತ್ತಮುತ್ತ ಪೊಲೀಸರ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಜಿಪಂ ಮುಂಭಾಗದ ರಸ್ತೆಯಲ್ಲಿ ಜನರನ್ನ ಪೊಲೀಸರು ತಡೆದ ಪರಿಣಾಮ ಟ್ರಾಫಿಕ್ ಜ್ಯಾಮ್ ಆಗಿದೆ. 

Police stopped BJP Ryta Morcha and Bajrang Dal members in front of the ZP gate

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close