SUDDILIVE || SHIKARIPURA
ಗಾಳಿ ಮಳೆಗೆ ಮನೆಯ ಸಜ್ಜ ಮುರಿದು ಬಿದ್ದು ಶಿಕಾರಿಪುರದ ವ್ಯಕ್ತಿ ಸಾವು- Man from Shikaripura dies after house roof collapses due to wind and rain
ಮನೆಯ ಸಜ್ಜ ಮುರಿದು ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ನಿನ್ನೆ ಶಿಕಾರಿಪುರ ತಾಲೂಕಿನಲ್ಲಿ ನಿನ್ನೆ ನಡೆದಿದೆ.
ಶಿಕಾರಿಪುರ ತಾಲೂಕಿನ ಅರಿಷಿಣಗೆರೆ ಗ್ರಾಮದ ನಿವಾಸಿಗಳಾದ ಶ್ರೀ ನಿಸಾರ್ ಅಹ್ಮದ್ (52 ವರ್ಷ) ಎಂಬುವರು ನಿನ್ನೆ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ತಮ್ಮ ಮನೆಯ ಮುಂಭಾಗದ ಕಟ್ಟೆಯ ಮೇಲೆ ಕುಳಿತಿದ್ದ ಸಂದರ್ಭದಲ್ಲಿ, ಮನೆಯ ಸಜ್ಜ ಕುಸಿದು ಬಿದ್ದಿದೆ.
ಏಕಾಏಕಿ ಬೀಸಿದ ಗಾಳಿ-ಮಳೆಗೆ ಮನೆಯ ಮುಂಭಾಗದ ಸಜ್ಜೆ ಕುಸಿದು ಬಿದ್ದಿದೆ. ಈ ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲಾ ಮರಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಕೊನೆಉಸಿರೆಳೆದಿದ್ದಾರೆ.
ಈ ವೇಳೆ ಕಾಂಗ್ರೆಸ್ ಮುಖಂಡ ಇಂದು ಅರಿಶಿನಗೆರೆ ಗ್ರಾಮದ ಮೃತರ ನಿವಾಸಕ್ಕೆ ಭೇಟಿ ನೀಡಿ, ತೀವ್ರ ದುಃಖದಲ್ಲಿರುವ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ಪ್ರಕೃತಿ ವಿಕೋಪದಿಂದ ಸಂಭವಿಸಿದ ಈ ಅಕಾಲಿಕ ಸಾವಿಗೆ ಸರ್ಕಾರದಿಂದ ಸಿಗಬೇಕಾದ ಸೂಕ್ತ ಪರಿಹಾರವನ್ನು ಶೀಘ್ರವಾಗಿ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಲಾಗುವುದು ಎಂದು ಕುಟುಂಬದವರಿಗೆ ಭರವಸೆ ನೀಡಿದ್ದಾರೆ.
Man from Shikaripura dies after house roof collapses due to wind and rain


