SUDDILIVE || SHIVAMOGGA
ವಿಶಾಲ್ ಮಾರ್ಟ್ ನಲ್ಲಿ ಕೆಟ್ಟು ನಿಂತ ಲಿಫ್ಟ್, 9 ಜನರ ರಕ್ಷಣೆ- 9 people rescued after lift breaks down at Vishal Mart
ವಿಶಾಲ್ ಮಾರ್ಟ್ ನಲ್ಲಿ ಲಿಫ್ಟ್ ನಲ್ಲಿ ತಾಂತ್ರಿಕದೋಷ ಕಾಣಿಸಿಕೊಂಡು ಕೆಟ್ಟು ನಿಂತಿತ್ತು. ಕೆಟ್ಟನಿಂತ ಲಿಫ್ಟ್ ನಲ್ಲಿ 9 ಜನರು ಸಿಲುಕಿಕೊಂಡಿದ್ದು ಅವರನ್ನ ರಕ್ಷಣೆಯನ್ನ ಅಗ್ಮಿಶಾಮಕದಳದವರು ಮಾಡಿದ್ದಾರೆ.
ಗೋಪಾಳದ ವಿಶಾಲ್ ಮಾರ್ಟ್ ನಲ್ಲಿ ಸೋಮವಾರ ಸಂಜೆ ಸುಮಾರು 8-15 ಗಂಟೆಯ ಹೊತ್ತಿಗೆ ಲಿಫ್ಟ್ ಚಲಿಸದೆ ಕೆಟ್ಟು ನಿಂತಿದೆ. ವಿದ್ಯುತ್ ಇದ್ದರೂ ಸಹ ತಾಂತ್ರಿಕ ದೋಷದ ಹಿನ್ನಲೆಯಲ್ಲಿ ಕೆಟ್ಟು ನಿಂತಿದೆ. ಲಿಫ್ಟ್ ನಲ್ಲಿದ್ದ ಸುಮಾರು 9 ಜನ ಕಂಗಾಲಾಗಿದ್ದಾರೆ.
8-55 ರ ಹೊತ್ತಿಗೆ ಅಗ್ನಿಶಾಮಕ ದಳಕ್ಕೆ ಕರೆ ಹೋಗಿದೆ ತಕ್ಷಣವೇ ಸ್ಥಳಕ್ಕೆ ಬಂದ ಇಲಾಖೆಯವರು ಲಿಫ್ಟ್ ನಲ್ಲಿದ್ದ 9 ಜನರನ್ನೂ ರಕ್ಷಿಸಿದ್ದಾರೆ. ಇವರಲ್ಲಿ ಓರ್ವ ಮಹಿಳೆಗೆ ಸುಸ್ತು ಕಾಣಿಸಿಕೊಂಡರೂ ನಂತರ ಚೇತರಿಕೆ ಪಡೆದುಕೊಂಡು ಮನೆಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲಿಫ್ಟ್ ನಲ್ಲಿದ್ದ ಇಬ್ಬರು ಮಕ್ಕಳು 7 ಜನ ದೊಡ್ಡವರನ್ನ ರಕ್ಷಿಸಲಾಗಿದೆ.
ಲಿಫ್ಟ್ ನಲ್ಲಿ ಸಿಲುಕಿದ್ದವರ ವಿವರ.
ಹೆಸರು -ವಯಸ್ಸು
1)ಭರತ್ -37
2)ಅನುಷಾ -35
3)ಅನಿಸ್ ಫಾತಿಮಾ -44
4)ಮುಸರತ್ -39
5)ಸೂಬಿಯಾ -31
6)ಪ್ರಶಾಂತ್ -28
7)ಪ್ರವೀಣ್ ಕುಮಾರ್ -47 ಹಾಗೂ ಇಬ್ಬರು ಮಕ್ಕಳನ್ನ ರಕ್ಷಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಆರ್ ಎಫ್ ಒ ರಾಜು, ಡಿಎಫ್ ಒ ಅಶೋಕ್ ಕುಮಾರ್, FSTO ಮುಕ್ತುಮ್ ಹುಸೇನ್, LF ಸುನೀಲ್, FD ಸತೀಶ್, FM ಸಂತೋಷ್ ಹಾಗೂ ಮನೋಜ್ ಭಾಗಿಯಾಗಿದ್ದರು.
9 people rescued after lift breaks down at Vishal Mart

