ಕ್ರಿಕೆಟ್ ಆಡುವಾಗಲೆ ಇಹಲೋಕ ತ್ಯಜಿಸಿದ ಕ್ರೀಕೆಟಿಗ-Cricketer who passed away while playing cricket

 SUDDILIVE || SHIVAMOGGA

ಕ್ರಿಕೆಟ್ ಆಡುವಾಗಲೆ ಇಹಲೋಕ ತ್ಯಜಿಸಿದ ಕ್ರೀಕೆಟಿಗ-Cricketer who passed away while playing cricket     

Cricket, cricketer


ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಟ ಆಡುವಾಗಲೇ ಕ್ರೀಡಾಪಟುವೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರ ಸಾವಿಗೆ ಶಿವಮೊಗ್ಗ ದುರ್ಗಿಗುಡಿ ಕ್ರಿಕೆಟ್ ಅಸೋಸಿಯೇಷನ್ ಅತೀವ ಸಂತಾಪ ವ್ಯಕ್ತಡಿಸಿದೆ. 

ಟಿ.ಎಲ್ ಅಕ್ಷಯ್ ಎಂಬುವರು ಮೂಲತಃ ಶಿವಮೊಗ್ಗದವರಾಗಿದ್ದಾರೆ. ಇವರಿಗೆ 38 ವರ್ಷವಾಗಿದ್ದು ಇವರ ತಂದೆ ದಿ.ಲೋಕೆಶ್ ಅವರು ಶಿವಮೊಗ್ಗ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಾಗೂ ಎಸ್ಪಿ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. 

ಅಕ್ಷಯ್ ಬೆಂಗಳೂರಿನಲ್ಲಿ ಬ್ಯಾಂಜ್ ಆಫ್ ಬರೋಡಾದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇಂದು ಕ್ರಿಕೆಟ್ ಟೂರ್ನಿ ಆಡುವಾಗ ಮೂರು ಓವರ್ ಬೌಲಿಂಗ್ ಎಸೆದಿದ್ದಾರೆ. ನಂತರ ಸುಸ್ತಾಗ್ತಿದೆ ಎಂದು ಫೆವೆಲಿಯನ್ ಗೆ ತೆರಳಿ ಮತ್ತೆ ಬೌಲಿಂಗ್ ಗೆ ಮುಂದಾಗಿದ್ದಾಗ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದ್ದು ಮಾರ್ಗ ಮಧ್ಯದಲ್ಲಿ ಕೊನೆ ಉಸಿರು ಎಳೆದಿದ್ದಾರೆ. 

ಇವರ ಅಗಲಿಕೆಗೆ ಶಿವಮೊಗ್ಗದ ದುರ್ಗಿಗುಡಿ ಕ್ರಿಕೆಟ್ ಅಸೋಸಿಯೇಷನ್ ಅತೀವ ಸಂತಾಪ ವ್ಯಕ್ತಪಡಿಸಿದೆ ಯಾವ ಚಟವೂ ಅಂಟಿಸಿಕೊಳ್ಳದ ಅಕ್ಷಯ್ ದುರ್ಗಿಗುಡಿ ಕ್ರಿಕೆಟ್ ಅಸೋಸಿಯೇಷನ್ ನಲ್ಲಿಯೇ ತರಬೇತಿ ಪಡೆದಿದ್ದರು. ಇವರು, ಕೆಪಿಪಿ ಮತ್ತು 19 ವರ್ಷದ ಒಳಗಿನ ಕ್ರಿಕೆಟಿಗೆ ಬೌಲಿಂಗ್ ತರಬೇತುದಾರಾಗಿದ್ದರು. 

ಅಕ್ಷಯ್ ಏ.30 ಕ್ಕೆ ವಿವಾಹ ಮಹೋತ್ಸವ ಮತ್ತು ಹುಟ್ಟುಹಬ್ಬವನ್ನ ಎರಡನ್ನೂ ಆಚರಿಸಿಕೊಂಡಿದ್ದರು. ಇದಾದ 25 ದಿನಗಳಲ್ಲಿಯೇ ಇವರು ಇಹಲೋಕ ತ್ಯಜಿಸಿರುವುದು ಆಪ್ತವಲಯದಲ್ಲಿ ಸೂತಕದ ಛಾಯೆ ಮೂಡಿದೆ. 

Cricketer who passed away while playing cricket 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close