ಡಿಕೆಶಿ ಹುಟ್ಟು ಹಬ್ಬಕ್ಕೆ 101 ನಾಟಿ ಕೋಳಿ ಪ್ರಸಾದ- 101 Nati Chicken Prasad for DKshi's Birthday

 SUDDILIVE || SHIVAMOGGA

ಡಿಕೆಶಿ ಹುಟ್ಟು ಹಬ್ಬಕ್ಕೆ 101 ನಾಟಿ ಕೋಳಿ ಪ್ರಸಾದ- 101 Nati Chicken Prasad for DKshi's Birthday   

Chicken, prasada

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ 65 ನೇ ಹುಟ್ಟುಹಬ್ಬದ ಪ್ರಯುಕ್ತ ಇಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದ ಭೂತರಾಯನ ಆವರಣದಲ್ಲಿ ವಿಶೇಷ ಪೂಜೆ ಮತ್ತು ಪ್ರಸಾದ ವ್ಯವಸ್ಥೆ ನಡೆದಿದೆ. 

ಬೆಳಿಗ್ಗೆ 9-30 ಕ್ಕೆ ಅಮ್ಮನವರಿಗೆ ಪೂಜೆ ಸಲ್ಲಿಸಲಾಯಿತು ನಂತರ 101 ನಾಟಿ ಕೋಳಿ ನೈವೇದ್ಯ ಸಲ್ಲಿಸಿ 1000 ಜನರಿಗೆ ಪ್ರಸಾದ ಹಂಚಲಾಗಿದೆ. ಈ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ, 40 ಡಿಗ್ರಿ ಸೆಲಿಷಿಯಸ್ ಬೇಸಿಗೆಯ ಬಿಸಿಲಿನಲ್ಲಿ ದೇವರಿಗೆ ಮಳೆ ಬೀಳಲಿ ಎಂದು ಈ ಹಿಂದೆ ಶೃಂಗೇರಿಯಲ್ಲಿ ಡಿಕೆಶಿ ಪೂಜೆ ಮಾಡಿದಾಗ ಒಂದು ವಾರದಲ್ಲಿ ರಾಜ್ಯದ ಎಲ್ಲೆಡೆ ಸಂಮೃದ್ಧಿಯಾಗಿ ಮಳೆಯಾಗಿದೆ ಎಂದರು. 

ಅಂತಹ ದೈವ ಭಕ್ತರಾದ ಡಿಕೆಶಿ ಅವರು ನಾಳೆ ರಾಜ್ಯದ ಮುಖ್ಯ ಮಂತ್ರಿಯಾಗಲಿ ಎಂದು ದೇವರಿಗೆ ಪ್ರಾರ್ಥಿಸಲಾಗಿದೆ ಎಂದು ಅವರು ತಿಳಿಸಿದರು. 



101 Nati Chicken Prasad for DKshi's Birthday   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close