SUDDILIVE || SHIVAMOGGA
ಬಿಡದಿ ಟೌನ್ ಶಿಪ್ ಕೈಬಿಡಿ-ಸಂಯುಕ್ತ ಹೋರಾಟ ಆಗ್ರಹ-Give up Bidadi Township - Joint struggle demanded
ಬಿಡದಿ ಟೌನ್ ಶಿಪ್ ಯೋಜನೆಗೆ ನೀಡಿರುವ ಸಂಪುದ ಅನುಮೋದನೆ ವಾಪಾಸ್ ಪಡೆಯಲು ಮತ್ತು ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಹೆಚ್ ಆರ್ ಬಸವರಾಜಪ್ಪ, ರಾಮನಗರವನ್ನ ಡಿಸಿಎಂ ಡಿಜೆಶಿ ಟೌನ್ ಶಿಪ್ ಮಾಡಲು ಹಠ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಡಿಸಿಎಂ ಹಠಕ್ಕೆ ಬೆಂಬಲಿಸಿದರೆ ಅವರಿಗೆ ಇರುವ ಅಲ್ಪಸ್ವಲ್ಪ ಮರ್ಯಾದೆಯನ್ನ ಕಳೆದುಕೊಳ್ಳುತ್ತೀರಿ ಎಂದಿ ದೂರಿದರು.
ಕುಮಾರ ಸ್ವಾಮಿ ಸಿಎಂ ಆಗಿದ್ಸಾಗ 5 ಟೌನ್ ಶಿಪ್ ಮಾಡಲು ಹೊರಟಿತ್ತು. ಇದರಲ್ಲಿ ರಾಮನಗರವೂ ಸೇರಿತ್ತು. ವಿರೋಧ ವ್ಯಕ್ತಪಡಿಸಿದ ಕಾರಣ ಕೈಬಿಟ್ಟಿದ್ದರು. ಈಗ ಡಿಕೆಶಿ ಮತ್ತೆ ಕೈಗೆ ಎತ್ತಿಕೊಂಡಿದ್ದರೆ. ರೈತರ ಪ್ರತಿಭಟನೆ ಮುಂದುವರೆಯಲಿದೆ ಎಂದರು.
ಕುಡುತಿನಿರೈತರ ಮೇಲೆ ಪೊಲೀಸ್ ದೌರ್ಜನ್ಯ ನಿಲ್ಲದಿದ್ದರೆ, 2012 ರಲ್ಲಿ ಕೆಐಡಿಬಿ ಮೂಲಕ ಕೈಗಾರಿಕೆ ಸ್ಥಾಪನೆಗಾಗಿ ಅರ್ಸೆಲರ್ ಮಿತ್ಥಲ್ ಮೊದಲಾದ ಕಂಪನಿಗಳಿಗಾಗಿ ಅಂದಿನ ಬಿಜೆಪಿ ಸರ್ಜಾರ ಮೋಸ ವಂಚನೆಯಿಂದ ಅನ್ಯಾಯದ ಬೆಲೆ ನಿಗದಿಪಡಸಿ ಬಲವಂತವಾಗಿ 12500 ಎಕರೆ ರೈತರ ಭೂಮಿಯನ್ನ ವಶಪಡಿಸಿಕೊಂಡು ಸುಮಾರು 15 ವರ್ಷ ಕಳೆದರೂ ಯಾವುದೇ ಕೈಗಾರಿಕೆ ಸ್ಥಾಪನೆಯಾಗಿಲ್ಲ.
ಆದರೆ ಈ ಭೂಮಿಯನ್ನ ಅನ್ಯ ಉದ್ದೇಶಕ್ಕಾಗಿ ಜಿಂದಾಲ್ ಕಂಪನಿಗೆ ಮಾರಾಟ ಮಾಡಲಾಗಿದೆ. ಇದನ್ನ ಒಕ್ಕೂಟ ಖಂಡಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ಭೂಬೆಲೆ ನಿಗದಿಪಡಿಸಿ ಉದ್ದೇಶಿತ ಕೈಗಾರಿಕೆ ಸ್ಥಾಪಿಸಬೇಕು. ಇಲ್ಲ ಭೂಮಿಯನ್ನು ರೈತರಿಗೆ ವಾಪಾಸ್ ನೀಡಬೇಕು. ಇದಕ್ಕಾಗಿ ಹೋರಾಟ ಮಾಡುತ್ತಿರುವ ರೈತರ ಮೇಲೆ ಪೊಲೀಸ್ ದಬ್ಬಾಳಕೆ ಹೆಚ್ಚಾಗಿದೆ ಇದು ನಿಲ್ಲದಿದ್ದರೆ ಕುಡುತಿನಿ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಹೈಕೋರ್ಟ್ ಪೀಠವನ್ನ ಮಂಗಳೂರಿನಲ್ಲಿ ಸ್ಥಾಪನೆಯಾಗುತ್ತಿದೆ. ಮಂಗಳೂರು ಆದರೆ ಬಡವರಿಗೆ ಸಂಪರ್ಕ ಸಾಧನೆ ಮಾಡಲು ಸಾಧ್ಯವಿಲ್ಲ. ಈ ಮಂಗಳೂರಿಗೆ ಶಿವಮೊಗ್ಗವನ್ನ ಸೇರಿಸಲಾಗಿದೆ. ಹಾಗಾಗಿ ಇದನ್ನ ವಿರೋಧಿಸುತ್ತೇವೆ. ಶಿವಮೊಗ್ಗದಲ್ಲಿಯೇ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಸ್ಥಾಪನೆಗೆ ವಕೀಲರು ನಡೆಸುತ್ತಿರುವ ಪ್ರತಿಭಟನೆಗೆ ಸಂಯುಕ್ತ ಹೋರಾಟ ಕರ್ನಾಟಕ ಬೆಂಬಲಿಸಿದೆ ಎಂದರು.
Give up Bidadi Township - Joint struggle demanded

