SUDDILIVE || SHIVAMOGGA
ಪೆಟ್ರೋಲ್ ಡಿಸೇಲ್ ದರ ನಾಲ್ಕೇ ದಿನಗಳಲ್ಲಿ ಮತ್ತೆ ಏರಿಕೆ- Petrol, diesel prices rise again in four days
ಮತ್ತೆ ಪೆಟ್ರೋಲ್ ಡಿಸೇಲ್ ದರ ಏರಿಕೆಯಾಗಿದೆ. ಮೇ.15 ರಂದು 3.30 ರೂ ಏರಿಕೆಗೊಂಡಿದ್ದ ಪೆಟ್ರೋಲ್ ಮತ್ತು ಡಿಸೇಲ್ ದರ ಈಗ ಮತ್ತೆ ಸರಿ ಸುಮಾರು 91 ಪೈಸೆ ಏರಿಕೆಗೊಂಡಿದೆ. ಇದರಿಂದ ಜನ ಸಾಮಾನ್ಯನ ಜೇಬಿಗೆ ಐದೇ ದಿನಗಳಲ್ಲಿ ಕತ್ತರಿ ಬಿದ್ದಿದೆ.
ಪೆಟ್ರೋಲ್ ದರ: ಮೇ 14ರವರೆಗೆ ಪ್ರತಿ ಲೀಟರ್‌ಗೆ ₹103.92 ಇತ್ತು. ಮೇ 15ರಿಂದ ₹107.11ಕ್ಕೆ ಹೆಚ್ಚಳವಾಗಿತ್ತು. ಡೀಸೆಲ್ ದರ: ಮೇ 14ರವರೆಗೆ ಪ್ರತಿ ಲೀಟರ್‌ಗೆ ₹92.07 ಇತ್ತು. ಇಂದಿನಿಂದ ₹95.12ಕ್ಕೆ ಹೆಚ್ಚಳ ಆಗಿತ್ತು. ಈಗ ಈ ದರ ಮತ್ತೆ ಏರಿಕೆಯಾಗಿದೆ.
ಶಿವಮೊಗ್ಗದಲ್ಲಿ ಭರತ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ದರ 108.13 ರೂ. ಇದ್ದರೆ ಡಿಸೇಲ್ ದರ 96.17, ಹಾಗೂ ಪ್ರೀಮಿಯಂ ಪೆಟ್ರೊಲ್ 117.16 ರೂ. ಏರಿಕೆಯಾಗಿದೆ. ಅದರಂತೆ ಹೆಚ್ ಪಿ ಪೆಟ್ರೋಲ್ ಬಂಕ್ ಗಳಲ್ಲಿ 108.06 ರೂ. ಡಿಸೇಲ್ ದರ 95.12ರೂ. ಪವರ್ ಪೆಟ್ರೊಲ್ 117.99 ರೂ. ಟರ್ಬೋಜೆಟ್ ಡಿಸೇಲ್ 99.69 ರೂ.ಏರಿಕೆಯಾಗಿದೆ.
Petrol, diesel prices rise again in four days

