SUDDILIVE || SHIVAMOGGA
ಬಸ್-ಬೈಕ್ ನಡುವೆ ಮುಖಾಮುಖಿ ಡಿಕ್ಕಿ-ಬೈಕ್ ಸವಾರ ಸ್ಥಳದಲ್ಲಿಯೇ ಸಾವು-Head-on collision between bus and bike - biker dies on the spot
ಶಿವಮೊಗ್ಗ-ಸವಳಂಗ ರಸ್ತೆಯಲ್ಲಿ ಬರುವ ಕೊಮ್ಮನಾಳು ತಿರುವಿನ ಬಳಿ ಖಾಸಗಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವುಕಂಡಿದ್ದಾನೆ.
ನಿನ್ನೆ ರಾತ್ರಿ ಸುಮಾರು 9-30 ಕ್ಕೆ ಶಿವಮೊಗ್ಗದಿಂದ ಹಳೇ ಜೋಗದಲ್ಲಿರುವ ಮನೆಗೆ ಬೈಕ್ ಸವಾರ ತೆರಳುವಾಗ ಈ ಘಟನೆ ಸಂಭವಿಸಿದೆ. ಸ್ಥಳದಲ್ಲಿಯೇ ಸಾವುಕಂಡ ಯುವಕನನ್ನ ಶಿವಕುಮಾರ್ (32) ಎಂದು ಗುರುತಿಸಲಾಗಿದೆ. ಮೃತನು ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಹಳೇ ಜೋಗದ ನಿವಾಸಿಯಾಗಿದ್ದಾನೆ.
ಹೊನ್ನಾಳಿಯಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಖಾಸಗಿ ಬಸ್ ಮತ್ತು ಶಿವಕುಮಾರ್ ಅವರ ಬೈಕು ಕೊಮ್ಮನಾಳು ತಿರುವಿನ ಬಳಿ ಮುಖಾಮುಖಿ ಡಿಕ್ಕಿಯಾಗಿದೆ. ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ರಾಘವೇಂದ್ರ ಕಾಂಡಿಕೆ ಭೇಟಿ ನೀಡಿದ್ದಾರೆ.
Head-on collision between bus and bike - biker dies on the spot

