SUDDILIVE || SHIVAMOGGA
ಜಿಲ್ಲಾ ಕ್ರೀಡಾ ಸಂಕೀರ್ಣದಲ್ಲಿ ಸದಸ್ಯತ್ವ ನವೀಕರಣದ ವಿಷಯದಲ್ಲಿ ಸೆಕ್ಯೂರಿಟಿ ಮತ್ತು ಕೇರ್ ಟೇಕರ್ ಮೇಲೆ ಹಲ್ಲೆ- Security and caretaker attacked over membership renewal issue at district sports complex
ಗೋಪಾಳದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸೇರಿದ ಜಿಲ್ಲಾ ಕ್ರೀಡಾ ಸಂಕೀರ್ಣದಲ್ಲಿ ಸದಸ್ಯತ್ವ ನವೀಕರಣ ವಿಷಯದಲ್ಲಿ ಅಲ್ಲಿನ ಕೇರ್ ಟೇಕರ್ ಮತ್ತು ಸೆಕ್ಯೂರಿಟಿಗೆ ಅವ್ಯಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ ಮೂವರ ವಿರುದ್ಧ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಿಲ್ಲಾ ಕ್ರೀಡಾ ಸಂಕೀರ್ಣದಲ್ಲಿ ಸ್ಕೇಟಿಂಗ್, ಸ್ವಿಮ್ಮಿಂಗ್, ಟೆನ್ನಿಸ್, ತೆರದ ವ್ಯಾಯಾಮ ಮುಂತಾದ ಕ್ರೀಡಾ ಚಟುವಟಿಕೆಯಿದ್ದು, ಇಲ್ಲಿ ಹಣ ಪಾವತಿಸಿ ಸದಸ್ಯತ್ವದ ಮೂಲಕ ಕ್ರೀಡೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಸದಸ್ಯತ್ವ ಅವಧಿ ಮುಗಿದರೆ ಸದಸ್ಯತ್ವ ಪಡೆದುಕೊಳ್ಳಬೇಕಾಗಿರುತ್ತದೆ. ಆದರೆ ಸದಸ್ಯತ್ವ ನವೀಕರಣ ಮಾಡಿಕೊಳ್ಳದೆ ಐದು ತಿಂಗಳು ಮುಗಿದಿದ್ದರೂ ಮಲೆನಾಡು ಸ್ವಿಮ್ಮಿಂಗ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಜಿಲ್ಲಾ ಕ್ರೀಡಾ ಸಂಕೀರ್ಣದಲ್ಲಿ ಅವರು ಮತ್ತು ಅವರ ಮಕ್ಕಳು ಬಂದು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದರ ಬಗ್ಗೆ ಕ್ರೀಡಾ ಇಲಾಖೆ ಅಧಿಕಾರಿಗಳು ಸದಸ್ಯತ್ವ ಮುಗಿದು ಐದು ತಿಂಗಳಾದರೂ ನವೀಕರಣಗೊಳಿಸಿಕೊಳ್ಳದವರಿಗೆ ಜಿಲ್ಲಾ ಕ್ರೀಡಾ ಸಂಕೀರ್ಣ ಬಳಸಿಕೊಳ್ಳದಂತೆ ಎಚ್ಚರಿಕೆ ನೀಡಲು ಅಲ್ಲಿನ ಸೆಕ್ಯೂರಿಟಿ ಮತ್ತು ಕೇರ್ ಟೇಕರ್ ಗೆ ಸೂಚಿಸಿದ್ದರು. ಈ ಎಚ್ಚರಿಕೆ ನೀಡಿದ ವಿಚಾರದಲ್ಲಿ ಅಲ್ಲಿ ಸೆಕ್ಯೂರಿಟಿ ಮತ್ತು ಕೇರ್ ಟೇಕರ್ ಮೇಲೆ ಮಲೆನಾಡು ಸ್ವಿಮ್ಮಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಮತ್ತು ಅಧ್ಯಕ್ಷರು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ಮಲೆನಾಡು ಸ್ವಿಮ್ಮಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಮತ್ತು ಅಧ್ಯಕ್ಷರಿಗೆ ಜಗಳವಾಡುವಂತೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಹಿಂದಿನ ಸ್ವಿಮ್ಮಿಂಗ್ ಕೋಚ್ ಮೇಲೂ ಎಫ್ಐಆರ್ ದಾಖಲಾಗಿದೆ.
Security and caretaker attacked over membership renewal issue at district sports complex
