ನಿದ್ರಾವಸ್ಥೆಯಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರನ್ನ ಎಬ್ಬಿಸುವವರು ಯಾರು? Who will wake up the slumbering Department of Mines and Geology?

 SUDDILIVE || SHIVAMOGGA

ನಿದ್ರಾವಸ್ಥೆಯಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರನ್ನ ಎಬ್ಬಿಸುವವರು ಯಾರು?  Who will wake up the slumbering Department of Mines and Geology?   

Mines, geology

ಶಿವಮೊಗ್ಗದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಉಪವಿಭಾಗಾಧಿಕಾರಿಗಳು ಸಾರ್ವಜನಿಕರ ದೂರಿಗೆ ಸ್ಪಂಧಿಸದೆ ಮರಳುಗಾರಿಕೆ ಜೊತೆ ಕೈಜೋಡಿಸಿದ್ರಾ ಎಂಬ ಅನಮಾನಕ್ಕೆ ಈ ಘಟನೆ ಎಡೆ ಮಾಡಿಕೊಟ್ಟಿದೆ. 

ಎಸಿ ಅವರು ಕೆಲವೊಮ್ಮೆ ಮರಳುಗಾರಿಕೆ ನಡೆಯುತ್ತಿದ್ದ ಜಾಗದಲ್ಲಿ ಬೆಳಗಿನಿಂದ ಸಂಜೆಯ ವರೆಗೆ ಮಕ್ಕಳು ರಚ್ಚಿಗಿಡಿದು ಕುಳಿತ ರೀತಿಯಲ್ಲಿಯೇ ದಾಳಿ ನಡೆಸಿದ ಉದಾಹರಣೆಗಳಿವೆ. ಕಳೆದ ತಿಂಗಳು  ಮರಳುಗಾರಿಕೆ ಅವರ ಎದೆಯನ್ನೇ ನಡುಗಿಸಿದ್ದ ಉಪವಿಭಾಗಾಧಿಕಾರಿಗಳು ಮರಳುಗಾರಿಯನ್ನ‌ ಪೂರ್ಣವಾಗಿ ಗುಡಿಸಿ ಹಾಕುವಲ್ಲಿ ವಿಫಲರಾಗಿದ್ದಾರೆ.  ಈ ರೀತಿ ನಡುಕ ಹುಟ್ಟಿಸಿದ ದಾಳಿ ನಡೆದರೂ ಸಹ ಮರಳುಗಾರಿಕೆ ಏನೂ ಸ್ಥಗಿತವಾಗಿಲ್ಲ. ಇಂತಹ ರಚ್ಚಿಗಿಡಿದು ದಾಳಿ ನಡೆಸುತ್ತಿರುವ ಹಿನ್ನಲೆಯೂ ಈ ದಂಧೆಯಲ್ಲಿದ್ದವರಿಗೆ ತಿಳಿದಿದೆ.

ಇನ್ನೂ ನಮ್ಮ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಿಲ್ಲೆಯಲ್ಲಿ ಜೀವಂತವಾಗಿ ಇದೆಯೋ ಅಥವಾ ಸತ್ತಿದೆಯೋ ಎಂಬುದನ್ನ ಜಿಲ್ಲಾಡಳಿತ ಸ್ಪಷ್ಟಪಡಿಸಬೇಕಿದೆ. ಕಾರಣ ದಾಳಿ ಮಾಡುತ್ತಿರುವ ಬಗ್ಗೆ ಎಲ್ಲೂ ದಾಖಲೆಗಳು ಸಿಗುತ್ತಿಲ್ಲ. ತಮಗೆ ಬೇಕಾದಾಗ ದಾಳಿ ನಡೆಸಿ ಮೈಕೊಡವಿಕೊಳ್ಳುವ ಇಲಾಖೆ 2021 ರ ಹುಣಸೋಡು ಸ್ಪೋಟದಲ್ಲಿ ಹೇಗೆ ಕಾರ್ಯ ನಿರ್ವಹಿಸಿತ್ತು ಎಂಬುದನ್ನ ಶಿವಮೊಗ್ಗದ ಜನತೆ ನೋಡಿದ್ದಾರೆ. 

ರೇಟು ಹೆಚ್ಚಿಸಿಕೊಳ್ಳಲು ದಾಳಿ ನಡೆಯುತ್ತದೆ ಎಂಬ ಸಾರ್ವಜನಿಕರ ಆರೋಪಗಳು ಸುಳ್ಳು ಎಂದು ಹೇಳಲಾಗದು. ಇಷ್ಟೆಲ್ಲಾ ಪೀಠಿಕೆ ಹಿಂದೆ ಒಂದು ಘಟನೆಯಿದೆ. ಭದ್ರಾವತಿ ತಾಲೂಕು ಸನ್ಯಾಸಿ ಕೋಡುಮಗ್ಗೆಯ ಮಾರುತಿ ಬಡಾವಣೆಯಲ್ಲಿ ‌ಮರಳುಕೋರರು 50 ಕ್ಕೂ ಹೆಚ್ಚು ಲೋಡನ್ನ ತಂದು ಡಂಪ್ ಮಾಡಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಲು ಸಾರ್ವಜನಿಕರು ಕರೆ ಮಾಡಿದರೂ ಕರೆ ಸ್ವೀಕರಿಸದೆ ಇರುವ ಸ್ಥಿತಿಯಲ್ಲಿ ಇಲಾಖೆ ನಿದ್ರಾವ್ಯವಸ್ಥೆಯಲ್ಲಿ ಮುಳುಗಿದೆ. ಕುಂಭಕರ್ಣನ ನಿದ್ರೆಯಲ್ಲಿ ಇದ್ದವರನ್ನ ಏಳಿಸಬಹುದು ಆದರೆ ನಾಟಕದ ಸ್ಥಿತಿಯಲ್ಲಿರುವವರನ್ನ ಏಳಿಸುವವರು ಯಾರು? ಸಾರ್ವಜನಿಕರ ಕುಂದುಕೊರತೆಗೆ ಇಲಾಖೆಗಳು ಇದ್ದರೆಷ್ಟು ಬಂದ್ ಮಾಡುದ್ರೆ ಎಷ್ಟು? ಎಂಬು ಸಾರ್ವಜನಿಜರ ಆಕ್ರೋಶಕ್ಕೆ ಗುರಿಯಾಗಿದೆ. 

Who will wake up the slumbering Department of Mines and Geology?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close