SUDDILIVE || SHIVAMOGGA
ಹೈಕೋರ್ಟ್ ಸಂಚಾರಿ ಪೀಠಕ್ಕೆ ಜೆಡಿಎಸ್ ಒತ್ತಾಯ- JDS demands High Court mobile bench
ಹೈಕೋರ್ಟ್ ಸಂಚಾರಿ ಪೀಠ ಶಿವಮೊಗ್ಗ ನಗರ ಯೋಗ್ಯವಾದ ಸ್ಥಳವಾಗಿದೆ. ಹಾಗಾಗಿ ಸಂಚಾರಿ ಪೀಠದ ಸ್ಥಾಪನೆಗೆ ಜಾತ್ಯಾತೀತ ಜನತಾದಳ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ನ ರಾಜ್ಯ ಉಪಾಧ್ಯಕ್ಷ ಕೆಬಿ ಪ್ರಸನ್ನ ಕುಮಾರ್, ವಕೀಲರ ಸಂಘ ಇತ್ತೀಚೆಗೆ ಹೈಕೋರ್ಟ್ ಸೆರ್ಕೂಟ್ ಬೆಂಚ್ ಸ್ಥಾಪನೆಗೆ ಒತ್ತಾಯಿಸಿತ್ತು. ಆದರೆ ಪ್ರಸನ್ನ ಕುಮಾರ್ ಸಂಚಾರಿ ಪೀಠವೇ ಬೆಕೆಂದಿದ್ದಾರೆ. ಸಂಚಾರಿ ಪೀಠದಿಂದ ಎಲ್ಲರಿಗೂ ಅನುಕೂಲವಾಗಲಿದೆ. ಪಕ್ಷದಿಂದ ವಕೀಲರ ಹೋರಾಟಕ್ಕೆ ಬೆಂಬಲವಿದೆ ಎಂದಿದ್ದಾರೆ.
ಜಿಲ್ಲಾ ಮಂತ್ರಿಗಳು ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಒತ್ತಡ ತರಬೇಕು. ಸಿಎಂ ಮೇಲೆ ಒತ್ತಡ ತರಬೇಕು, ನಿಯೋಗ ಕರೆದುಕೊಂಡು ಹೋಗಬೇಕು. ಬಂಗಾರಪ್ಪ ಬಡಾವಣೆಗೆ ಬಂಗಾರಪ್ಪ ಹೆಸರು ಇಟ್ಟಿರುವುದಕ್ಕೆ ಸ್ವಾಗತ ಎಂದರು.
ಆದರೆ ಹೆಸರಿಟ್ಟರೆ ಸಾಲದು ಬಂಗಾರಪ್ಪನವರ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಬಂಗಾರಪ್ಪ ಕನಸನ್ನು ನನಸು ಮಾಡಬೇಕು. ಗೋವಿಂದಾಪುರದ ಫಲಾನುಭವಿಗಳಿಗೆ ಮನೆ ಕೊಡಿಸಬೇಕು. ಜಿಲ್ಲಾ ಮಂತ್ರಿಗಳು ಇತ್ತ ಗಮನಹರಿಸಬೇಕು ಎಂದರು.
ಪಾಲಿಕೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಲಕ್ಷ ಇಲ್ಲದೇ ಮಾತೇ ಇಲ್ಲದಂತಾಗಿದೆ. ಬೀದಿ ದೀಪಗಳ ವ್ಯವಸ್ಥೆ ಸರಿಯಿಲ್ಲ. ಜಿಲ್ಲಾ ಮಂತ್ರಿ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದರು.
JDS demands High Court mobile bench
