ನಾಳೆಯಿಂದ ತೀರ್ಥಹಳ್ಳಿ - ಕೈಮರ -ಯಡೂರು- ಮಾಸ್ತಿಕಟ್ಟೆಗೆ KSRTC ಬಸ್ ಓಡಾಟ-KSRTC bus plying from tomorrow to Tirthahalli - Kaimara - Yadur - Mastikkatte

SUDDILIVE || SHIVAMOGGA

ನಾಳೆಯಿಂದ ತೀರ್ಥಹಳ್ಳಿ - ಕೈಮರ -ಯಡೂರು- ಮಾಸ್ತಿಕಟ್ಟೆಗೆ KSRTC ಬಸ್ ಓಡಾಟ-KSRTC bus plying from tomorrow to Tirthahalli - Kaimara - Yadur - Mastikkatte       

Hulikal, KSRTC



ಮಣ್ಣು ಕುಸಿದು ಬಲಿಪಡೆದುಕೊಂಡಿದ್ದ ಹುಲಿಕಲ್ ಘಾಟ್ ಮತ್ತು ಈ ಮಾರ್ಗ ವಾಹನಗಳ ಸಂಪರ್ಕವಿಲ್ಲದೆ ಸ್ಮಶಾನ ಮೌನ ಆವರಿಸಿಕೊಂಡಿದೆ. ಪರ್ಯಾಯ ವಾಹನ ವ್ಯವಸ್ಥೆ ಕಲ್ಪಿಸಲಾದರೂ ಪ್ರಯಾಣಿಕರು ಪರದಾಡುವಂತಾಗಿದೆ. 

ಈ ಹಿನ್ನಲೆಯಲ್ಲಿ ಸ್ಥಳೀಯರೆ ಹುಲಿಕಲ್ ಗೆ ಭೇಟಿ‌ ನೀಡಿದ ಜಿಲ್ಲಾ ಮಂತ್ರಿ ಮಧು‌ ಬಂಗಾರಪ್ಪನವರಿಗೆ KSRTC ಬಸ್ ವ್ಯವಸ್ಥೆಯ ಬಗ್ಗೆ ಮನವಿ ಸಲ್ಲಿಸಿದ್ದರು. ಅವರ ಮನವಿಗೆ ಸ್ಪಂಧಿಸಿದ ಜಿಲ್ಲಾ ಮಂತ್ರಿಗಳು ತೀರ್ಥಹಳ್ಳಿಯಿಂದ ಹುಲಿಕಲ್ ಘಟ್ ಗೆ ವಾಹನಗಳ ಸಂಪರ್ಕಿಸಲು ಸೂಚಿಸಿದ ಹಿನ್ನಲೆಯಲ್ಲಿ ವಾಹನ ಸಂಪರ್ಕವನ್ನ ಶಿವಮೊಗ್ಗ KSRTC ವಿಭಾಗ ಒಪ್ಪಿಗೆ ನೀಡಿದೆ. 

ಸಚಿವರ ಮತ್ತು KSRTC  ಆದೇಶದಂತೆ ನಾಳೆಯಿಂದ ತೀರ್ಥಹಳ್ಳಿ - ಕೈಮರ -ಯಡೂರು- ಮಾಸ್ತಿಕಟ್ಟೆ ಮಾರ್ಗವಾಗಿ ಹುಲಿಕಲ್ ದೇವಸ್ತಾನದವರೆಗೆ ದಿನಕ್ಕೆ ಮೂರು ಬಾರಿ ಕೆಎಸ್ಅರ್ಟಿಸಿ  ಬಸ್ ಸೇವೆ ಲಭ್ಯವಾಗಲಿದೆ. 

ಇದಕ್ಕೆ ಸಹಕರಿಸಿದ ನಮ್ಮ ನಾಯಕರಾದ ಶ್ರೀಯುತ ಮಧು ಬಂಗಾರಪ್ಪನವರಿಗೂ ,ಮಾಜಿ ಸಚಿವರಾದ ಶ್ರೀಯುತ ಕಿಮ್ಮನೆ ರತ್ನಾಕರ್ ರವರಿಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ  ಶ್ರೀಯುತ ಅರ್ ಎಮ್ ಮಂಜುನಾಥಗೌಡರಿಗೂ ಸಹಕರಿಸಿದ ಸರ್ವರಿಗೂ ಸ್ಥಳೀಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹೃದಯಪೂರ್ವಕ ಧನ್ಯವಾದಗಳನ್ನ ತಿಳಿಸಿದ್ದಾರೆ. 

KSRTC bus plying from tomorrow to Tirthahalli - Kaimara - Yadur - Mastikkatte

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close