ಗಾಂಜಾ ಆರೋಪಿಗಳ ಬಂಧನ-Arrest of marijuana accused

SUDDILIVE || SHIVAMOGGA

ಗಾಂಜಾ ಆರೋಪಿಗಳ ಬಂಧನ-Arrest of marijuana accused    

Arrest, marijuana

ರಾಜೀವ್ ಗಾಂಧಿ ಬಡಾವಣೆಯಲ್ಲಿ ಗಾಂಜಾ ಮಾರುತ್ತಿದ್ದ ಅಡ್ಡದ ಮೇಕೆ ಕೋಟೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನ ಬಂಧಿಸಿಸಿದ್ದಾರೆ. 

ದಿನಾಂಕ:02-05-2026 ರಂದು ಕೋಟೆ ಪೊಲೀಸ್ ಠಾಣಾವ್ಯಾಪ್ತಿಯಲ್ಲಿನ ರಾಜೀವ್ ಗಾಂಧಿ ಬಡಾವಣೆ ಕಂಟ್ರಿ ಕ್ಲಬ್ ರಸ್ತೆಯ ಬಳಿ ಯಾರೋ ಇಬ್ಬರು ಕಾನೂನುಬಾಹಿರವಾಗಿ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಬಾಬು ಆಂಜನಪ್ಪ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಎ ಉಪವಿಭಾಗರವರು ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಆರೋಪಿತರಾದ 1.ಅಶೋಕ ಪಿ 28 ವರ್ಷ 2. ರಾಕೇಶ್ 20 ವರ್ಷ ಇವರುಗಳನ್ನು ದಸ್ತಗಿರಿ ಮಾಡಿ ಸುಮಾರು 

1,00,000 ರೂ ಮೌಲ್ಯದ 1ಕೆಜಿ 67ಗ್ರಾಂ ತೂಕದ ಗಾಂಜಾವನ್ನು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ಹಾಗೂ ಕೃತ್ಯದಿಂದ ಬಂದ 3290/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಸದರಿ ಆರೋಪಿತರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.

Arrest of marijuana accused 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close