SUDDILIVE || SHIVAMOGGA
ಹೈಕೋರ್ಟ್ ಸ್ಥಾಪನೆಗೆ ಕರವೇ ಸ್ವಾಭಿಮಾನಿ ಬಣ ಬೆಂಬಲ, ಬೈಕ್ ರ್ಯಾಲಿ-Karave Swabhimani faction supports establishment of High Court, holds bike rally
ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಶಿವಮೊಗ್ಗ ಜಿಲ್ಲೆ ಮಧ್ಯ ಕರ್ನಾಟಕ ಭಾಗವಾಗಿದ್ದು, ಇಲ್ಲಿ ನಾಗರಿಕರ ನ್ಯಾಯಕ್ಕಾಗಿ ಹೈಕೋರ್ಟ್ ಪೀಠ ಸ್ಥಾಪನೆಗೆ ವಕೀಲರ ಸಂಘದಿಂದ ಪ್ರತಿಭಟನೆ ನಡೆಯುತ್ತಿದೆ. ಇದಕ್ಕೆ ನಮ್ಮ ಸ್ವಾಭಿಮಾನಿ ಬಳಗವು ಕೂಡ ಬೆಂಬಲ ನೀಡುತ್ತದೆ. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗುವುದಾಗಿ ತಿಳಿದು ಬಂದಿದೆ.
ಇದು ಶಿವಮೊಗ್ಗ ಸೇರಿದಂತೆ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಜನರಿಗೆ ಕಷ್ಟವಾಗುತ್ತದೆ. ಭೌಗೋಳಿಕವಾಗಿಯೂ ಮಂಗಳೂರು ನಮಗೆ ತೊಂದರೆಯಾಗುತ್ತದೆ. ಆದ್ದರಿಂದ ಶಿವಮೊಗ್ಗದಲ್ಲಿಯೇ ಹೈಕೋರ್ಟ್ ಪೀಠ ಆಗಬೇಕು. ಒಂದು ಪಕ್ಷ ಇದು ಸಾಧ್ಯವಾಗದೇ ಇದ್ದರೆ ಮಂಗಳೂರಿನಲ್ಲಿ ಆಗುವ ಹೈಕೋರ್ಟ್ ಪೀಠದಿಂದ ನಮ್ಮನ್ನು ದೂರವಿಟ್ಟು ಬೆಂಗಳೂರು ಹೈಕೋರ್ಟ್ನಲ್ಲಿಯೇ ಮುಂದುವರೆಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಹೆಚ್.ಎಸ್., ಮುಜೀಬ್, ಅರವಿಂದ್, ಅನ್ವರ್ ಅಹಮ್ಮದ್, ನಾಗರಾಜ್ ಕೆ.ಬಿ., ಸತೀಶ್, ವಿಜಯಕುಮಾರ್, ಆರತಿ ತಿವಾರಿ, ಅನುಪಮಾ, ಕೇಶವ, ಗಣೇಶ್, ಮೊಹಮ್ಮದ್ ಶಫಿ, ಮೊದಲಾದವರು ಇದ್ದರು.
Karave Swabhimani faction supports establishment of High Court, holds bike rally

