ಸದನದಲ್ಲಿ ಚರ್ಚಿಸಿ ವಿಶೇಷ ಅನುದಾನ ನೀಡುವ ಬಗ್ಗೆ ಕೃಷ್ಣೇಭೈರೇಗೌಡ ಭರವಸೆ- Krishnabhairegowda promises to discuss and provide special grants in the House

 SUDDILIVE || SHIVAMOGGA

ಸದನದಲ್ಲಿ ಚರ್ಚಿಸಿ ವಿಶೇಷ ಅನುದಾನ ನೀಡುವ ಬಗ್ಗೆ ಕೃಷ್ಣೇಭೈರೇಗೌಡ ಭರವಸೆ- Krishnabhairegowda promises to discuss and provide special grants in the House    

Krishna, bairegowda


ಹೊಳೆ ಹೊನ್ನೂರು ಭಾಗದಲ್ಲಿ ಮೊನ್ನೆ ಬೀಸಿದ ಬಿರುಗಾಳಿ ಮತ್ತು ಮಳೆಗೆ 33 ಗ್ರಾಮದಲ್ಲಿ ಮನೆ ಮತ್ತು ಬೆಳೆ ಹಾನಿಯಾಗಿದೆ. ಸಂಪೂರ್ಣವಾಗಿ ಬಿದ್ದ ಮನೆಗಳಿಗೆ ಪರಿಹಾರ ಮತ್ತು ಮನೆಗಳನ್ನ ಹಂಚಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.  

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷೆಗೆ ಮತ್ತು ಪರಿಹಾರಕ್ಕೆ ಸಿಎಂ ಸೂಚನೆ ನೀಡಿದ್ದಾರೆ.  ನಿರಂತರವಾಗಿ ಡಿಸಿ ಜೊತೆ ಸಂಪರ್ಕದಲ್ಲಿದ್ದೇನೆ. ಡಿಸಿಗೆ ಸಮೀಕ್ಷೆಗೆ ಸೂಚಿಸಲಾಗಿದೆ.  20 ಮನೆ ಸಂಪೂರ್ಣವಾಗಿ ಬಿದ್ದರೆ, 600 ಮನೆ ಭಾಗಶಃ ಉರುಳಿದೆ. ನಿಯಮಾವಳಿ ಪ್ರಕಾರ ಸಂಪೂರ್ಣ ಮನೆಗಳನ್ನ ಕಳೆದು ಕೊಂಡವರಿಗೆ ಪರಿಹಾರ ಜೊತೆಗೆ ಪ್ರತ್ಯೇಕ ಮನೆ ನೋಡಲು ಸೂಚಿಸಲಾಗಿದೆ. ಬೆಳೆ ಪರಿಹಾರಕ್ಕೆ ಜಂಟಿ ಸಮೀಕ್ಷೆಗೆ ಸೂಚಿಸಲಾಗಿದೆ ಎಂದರು. 

ಸಂಪೂರ್ಣ ಮನೆ ಹಾನಿಗೆ ಪರಿಹಾರ ನೀಡಲಾಗುತ್ತಿದೆ. ಇಲ್ಲಿನ ಸ್ಥಳೀಯ ರೈತ ಮುಖಂಡರು ವಿಶೇಷ ಪರಿಹಾರ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಉಸ್ತುವರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಂತಿಮ ತೀರ್ಮಾನವನ್ನ ಸದನದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಕ್ಯಾಬಿನೆಟ್ ಹೆಚ್ಚುವರಿ ಪರಿಹರಿ ನೀಡುವ ಬಗ್ಗೆ ತೀರ್ಮಾನಿಸಲಿದೆ.  350 ವಿದ್ಯುತ್ ಕಂಬ ಬಿದ್ದಿವೆ.  ಅದನ್ನ ಮೆಸ್ಕಾಂ ನೋಡಿಕೊಳ್ಳಲಿದೆ ಎಂದರು. 

ಗ್ಲೋಬಲ್ ವಾರ್ನಿಂಗ್ ಬಗ್ಗೆ ಎಚ್ಚರವಾಗಬೇಕಿದೆ

ಹವಮಾನ ಬದಲಾವಣೆ ಆಗ್ತಾಯಿದೆ. ಸರ್ಕಾರ ನಿರ್ಲಕ್ಷದಿಂದ ಅನಹುತ ಮುಂದುವರೆದಿದೆ. ಜಾಗತಿಕ ಹವಮಾನ ಬದಲಾವಣೆ ಬಗ್ಗೆ ನಮಗೆ ಎಚ್ಚರಿಕೆಯಿಲ್ಲ. ಪ್ರಪಂಚದ ಎಲ್ಲೆಡೆ ಆಗ್ತಿದೆ. ಧರವಾಡ, ಬೆಂಗಳೂರು ಶಿವಮೊಗ್ಗದಲ್ಲಿ ಆಗಿವೆ. ಇವು ಹೆಚ್ಚಾಗಿದೆ. ಹವಮಾನ ಬದಲಾವಣೆಯನ್ನ ಗಂಭೀರವಾಗಿ ಪರಿಗಣಿಸದಿದ್ದರೆ ಇವುಗಳ ತೀವ್ರತೆಯಾಗಲಿದೆ. ಗ್ಲೋಬಲ್ ವಾರ್ನಿಂಗ್ ಮಾನವನಿಂದ ಆಗ್ತಾಯಿದೆ. ಬರ ಬರಲು ಮತ್ತು ಅತಿವೃಷ್ಠಿಗೆ ಗ್ಲೋಬಲ್ ವಾರ್ಮಿಂಗ್ ಕಾರಣವಾಗಿದೆ. 

ಮಳೆ ಮಾಪನ ಕೇಂದ್ರಗಳು

ಇದಕ್ಕೆ ಸರ್ಕಾರ ಮತ್ತು ಸಮಾಜ ಚಿಂತಿಸಬೇಕು. ಜನ ಇದಕ್ಕೆ ಜಾಗೃತವಾಗಬೇಕು. 6000 ಮಳೆ ಮಾಪನ ಕೇಂದ್ರಗಳು ರಾಜ್ಯದಲ್ಲಿವೆ 1950 ಕೇಂದ್ರ ಉತ್ತಮ ಸ್ಥಿತಿಯಲ್ಲಿ ಇಲ್ಲ. ಇವುಗಳನ್ನ ಸರಿಪಡಿಸಬೇಕಿದೆ. ಮೂರು ಬಾರಿ ಟೆಂಡರ್ ಕರೆಯಲಾಗಿದೆ. ಎರಡು ಬಾರಿ ಬರಲಿಲ್ಲ. ಇನ್ನು 2000 ಕೆಲಸ ಮಾಡ್ತಾ ಇವೆ. ಇವಕ್ಕೆ ವಯಸ್ಸಾಗಿದೆ. ಸ್ಥಗಿತ ಗೊಂಡವುಗಳನ್ನ ಮೊದಲು ರಿಪೇರಿಯಾಗಲಿದೆ ನಂತರ ಇದನ್ನ ಸರಿಪಡಿಸಲಾಗುವುದು ಎಂದರು. 

ಗ್ರಾಪಂ ಮೇಲೆ ರೇನ್ ಗೇಜ್ ಹಾಕಲು ಸೂಚನೆವಿದೆ. ಇದನ್ನ ರಾಜ್ಯ ಸರ್ಕಾರವೇ ನಮ್ಮ ಅವಧಿಯಲ್ಲಿ 2014 ರಲ್ಲಿ ರೈನ್ ಗೇಜ್ ಅಳವಡಿಸಿ ದೇಶಕ್ಕೆ ಮಾದರಿಯಾಗಿದ್ದೆವು.  ಅವೈಜ್ಞಾನಿಕವಾಗಿ ಅವುಗಳ ಅಳವಡಿಕೆ  ಸಣ್ಣಪ್ರಮಾಣದಲ್ಲಿವೆ. ಹಾಗೇನಾದರೂ ಇದ್ದರೆ ಅವುಗಳನ್ನ ರೀಪ್ಲೇಸ್ ಮಾಡಲಾಗುವುದು. ನಮ್ಮ ಬಳಿ ಅನುದಾನವಿದೆ. ಮೊದಲು ಹಾಳಾಗಿರುವುದನ್ನ ಸರಿಡಿಸುತ್ತೇವೆ. 6-7 ವರ್ಷದಿಂದ ಇವುಗಳನ್ನ ಸರಿಪಡಿಸಿಲ್ಲ. 1½ ವರ್ಷದಿಂದ ಸರಿಪಡಿಸಲಾಗುತ್ತಿದೆ. ಗುತ್ತಿಗೆದಾರ ಸರಿಯಾಗಿ ಸಿಕ್ಕಿದ್ದರೆ ಇಷ್ಟು ಹೊತ್ತಿಗೆ ರೈನ್ ಗೇಜ್ ಸರಿಯಾಗುತ್ತಿದೆ ಎಂದರು. 

Krishnabhairegowda promises to discuss and provide special grants in the House

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close