ವಂಚನೆ ಪ್ರಕರಣ-ನೊಂದವರಿಗೆ 50 ಲಕ್ಷ ಹಿಂದಿರುಗಿಸಿದ ಸೆನ್ ಪೊಲೀಸರು- Case of refund of Rs 50 lakh to fraud victims

SUDDILIVE || SHIVAMOGGA

ವಂಚನೆ ಪ್ರಕರಣ-ನೊಂದವರಿಗೆ 50 ಲಕ್ಷ ಹಿಂದಿರುಗಿಸಿದ ಸೆನ್ ಪೊಲೀಸರು-  Case of refund of Rs 50 lakh to fraud victims  

Case, refund


ಶ್ರೀಮತಿ ನಾಜಿಯ ವಾಸ ಶಿವಮೊಗ್ಗ ರವರಿಗೆ ಅಪರಿಚಿತ ಸೈಬರ್ ವಂಚಕನೊಬ್ಬ ತಾವು Funin. com ಕಂಪನಿ ಯವರೆಂದು ಸುಳ್ಳು ಹೇಳಿ ನಂಬಿಸಿ ನಮ್ಮಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಆಮಿಷ ತೋರಿಸಿ ಒಟ್ಟು 67,78,100/- ರೂ ಗಳನ್ನು ಒಟ್ಟು 565 online Transaction ಮೂಲಕ ವರ್ಗಾಯಿಸಿಕೊಂಡಿದ್ದನು. ಈ ಪ್ರಕರಣವನ್ನ ಸೆನ್ ಪೊಲೀಸರು ಭೇಧಿಸಿದ್ದಾರೆ. 

ಪ್ರಕರಣದ ಬಗ್ಗೆ ಶಿವಮೊಗ್ಗ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಠಾಣೆಯ  ಗುನ್ನೆ ಸಂಖ್ಯೆ : 130/ 2025 ರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. 

ನಿಖಿಲ್ ಬಿ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಹಾಗೂ ಎ ಜಿ ಕಾರ್ಯಪ್ಪ, ಹೆಚ್ಚುವರಿ ಪೊಲೀಸ್ ಅಧಿಕ್ಷಕರವರ ಮಾರ್ಗದರ್ಶನದಲ್ಲಿ,  ಮಂಜುನಾಥ್ ಪಿ.ಐ. ಸೈಬರ್ ಕ್ರೈಂ ಪೊಲೀಸ್ ಠಾಣೆ  ರವರ ನೇತೃತ್ವದಲ್ಲಿ ಸಿಬ್ಬಂದಿ ಸಿಪಿಸಿ -  ಗಿರಿ ಸ್ವಾಮಿ  ರವರನ್ನೊಳಗೊಂಡ ತನಿಆಖ ತಂಡವು ಪ್ರಕರಣದ ತನಿಖೆ ಕೈಗೊಂಡು, ಪ್ರಕರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾದ ಮೂಲವನ್ನು ಪತ್ತೆ ಹಚ್ಚಿ,  ಸದರಿ ಬ್ಯಾಂಕ್ ಖಾತೆಗಳಲ್ಲಿ ನೊಂದವರಿಗೆ ಸಂಬಂಧಿಸಿದ ಒಟ್ಟು 50,00,000/- ರೂ ಹಣವನ್ನು ಫ್ರೀಜ್ ಮಾಡಿಸಿ,  ಘನ ನ್ಯಾಯಾಲಯದ ಆದೇಶದ ಮೇರೆಗೆ ಈ ದಿನ ಶ್ರೀಮತಿ ನಾಜಿಯರವರಿಗೆ ಹಿಂದಿರುಗಿಸಲಾಗಿರುತ್ತದೆ.

ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Case of refund of Rs 50 lakh to fraud victims

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close