ಶಿವಮೊಗ್ಗ Dysp ಆಗಿ ಶೀಲವಂತ ಹೊಸ್ಮನಿ-ಹೆಚ್ಚಿಸಿದ ಕುತೂಹಲ-Shivamogga Dysp as Shilvanta Hosamani-increased curiosity

SUDDILIVE || SHIVAMOGGA

ಶಿವಮೊಗ್ಗ Dysp ಆಗಿ ಶೀಲವಂತ ಹೊಸ್ಮನಿ-ಹೆಚ್ಚಿಸಿದ ಕುತೂಹಲ-Shivamogga Dysp as Shilvanta Hosamani-increased curiosity   

Sheelavantha, Gunamani

 

ದಿಡೀರ್ ಬೆಳವಣಿಗೆ ಹಿನ್ನೆಲೆಯಲ್ಲಿ ಶಿವಮೊಗ್ಗದ ಡಿ ವೈ ಎಸ್ ಪಿ(ಎ) ಯಾಗಿ ಶೀಲವಂತ ಹೊಸ್ಮನಿ ಅಧಿಕಾರ ಸ್ವೀಕರಿಸಿದ್ದಾರೆ. ಬಾಬು ಅಂಜನಪ್ಪನವರ ಸ್ಥಾನಕ್ಕೆ ಶೀಲವಂತ ಗುಣಮಣಿ ಅವರನ್ನು ಸರ್ಕಾರ ವರ್ಗಾಯಿಸಿರುವುದು ಹಲವು ನಿರೀಕ್ಷೆಯನ್ನು ಮೂಡಿಸಿದೆ. ಇನ್ನಾದರೂ ಸ್ಪಾಗಳನ್ನ ಬಂದ್ ಅಗಲಿವೆಯಾ ಎಂಬ ಕುತೂಹಲ ಹೆಚ್ಚಿಸಿದೆ.

ಬಳ್ಳಾರಿಯಲ್ಲಿ ಡಿವೈಎಸ್ಪಿ ಆಗಿದ್ದ ಶೀಲವಂತ ಹೊಸ್ಮನೆ ಅವರು ಶಿವಮೊಗ್ಗಕ್ಕೆ ಬಾಬು ಅಂಜನಪ್ಪನವರ ಸ್ಥಾನಕ್ಕೆ ಆಗಮಿಸಿದ್ದಾರೆ ಈ ಹಿಂದೆ ಬಾಬು ಅಂಜನಪ್ಪನವರ ಸ್ಥಾನಕ್ಕೆ ಸಾಗರದ ಡಿವೈಸ್ಪಿ ಆಗಿದ್ದ ಬೆನಕ ಪ್ರಸಾದ್ ಅವರನ್ನು ವರ್ಗಾಯಿಸಿತ್ತು ವರ್ಗಾಯಿಸಿ 24 ಗಂಟೆ ಒಳಗೆ ಅವರ ವರ್ಗ ರದ್ದಾಗಿ ಸಾಗರದಲ್ಲಿಯೇ ಬೆನಕ ಪ್ರಸಾದ್ ಡಿವೈಎಸ್ಪಿ ಯಾಗಿ ಮುಂದುವರೆದಿದ್ದರು.

ಆದರೆ ಬಾಬು ಅಂಜನಪ್ಪ ನವರಿಗೆ ಯಾವ ಸ್ಥಳ ತೋರಿಸದೆ ವರ್ಗ ಮಾಡಿದ್ದ ಸರ್ಕಾರ ಈಗ ಬೆಂಗಳೂರು ಎ ಎನ್ ಟಿ ಎಫ್ ವಿಭಾಗಕ್ಕೆ ವರ್ಗಾಯಿಸಿದೆ. ಕಳೆದ ಮೂರು ವರ್ಷದಿಂದ ಬಾಬು ಅಂಜನಪ್ಪನವರು ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇವರ ಆಳ್ವಿಕೆಯಲ್ಲಿ ಸ್ಪಾ ಹಾಗು ಇತರೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಹಳ ಅವಕಾಶ ನೀಡಲಾಗಿತ್ತು ಎಂಬ ಸಾರ್ವಜನಿಕರ ಆರೋಪವು ಕೇಳಿ ಬಂದಿತ್ತು.

ನೂತನವಾಗಿ ಡಿವೈಸ್ಪಿ ಆಗಿ ಬಂದಿರುವ ಶೀಲವಂತ ಹೊಸ್ಮನಿ ಅವರಿಗೆ ಇದೊಂದು ಸವಾಲಾಗಿಯೇ ಉಳಿದುಕೊಂಡಿದೆ ಇವರು ಹೇಗೆ ಕಾರ್ಯನಿರ್ವಹಿಸಲಿದ್ದಾರೆ ಎಂಬುದು ಕಾದು ನೋಡಬೇಕಿದೆ. ಈಗಾಗಲೇ ಸ್ಪಾಗಳು ಸಲೂನ್ ಆಗಿ ಬದಲಾಗಿವೆ.‌ ನಾಮಪಲಕ ಬದಲಾಗಿದೆ ಆದರೆ ಕಸಬು ಮುಂದು ವರೆಸಿದೆ. ಈ ಕಸಬಿಗೆ ಬ್ರೇಕ್ ಬೀಳುತ್ತಾ ಎಂಬ ಕುತೂಹಲ ಹೆಚ್ಚಿಸಿದೆ. 

Shivamogga Dysp as Shilvanta Gunamani-increased curiosity  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close