SUDDILIVE || SHIVAMOGGA
ಕರ್ತವ್ಯ ಹಾಗೂ ಮಾನವೀಯತೆ ಮೆರೆದ ಪೊಲೀಸರು-Policemen who demonstrated duty and humanity
ಶಿವಮೊಗ್ಗ ಜಿಲ್ಲಾ ಪೊಲೀಸರಿಂದ ಮಾನವೀಯತೆ ಹಾಗೂ ಕರ್ತವ್ಯ ಮೆರೆದಿರುವ ಘಟನೆಗಳು ವರದಿಯಾಗಿದೆ. ಒಂದು ನಗರ ಠಾಣೆಯಲ್ಲಿ ನಿರಾಶ್ರಿತರಾಗಿದ್ದ ಮಹಿಳೆಯನ್ನ ಅವರ ಚಿಕ್ಕಮ್ಮನವರ ಜೊತೆ ಸೇರಿಸುವ ಮೂಲಕ ಹಾಗೂ ರಸ್ತೆಯ ಬದಿಯಲ್ಲಿ ಬಿದ್ದ ಬ್ಯಾಗ್ ವಾರಸುದಾರರಿಗೆ ಸುರಕ್ಷಿತವಾಗಿ ತಲುಪಿಸುವ ಮೂಲಕ ಪೊಲೀಸರು ಕರ್ತವ್ಯ ಮತ್ತು ಮಾನವೀಯತೆ ಮೆರದಿದ್ದಾರೆ.
ನಗರ ಪೊಲೀಸ್ ಠಾಣೆಯ ಬೀಟ್ ಸಿಬ್ಬಂಧಿಗಳು ಗ್ರಾಮ ಗಸ್ತು ಕರ್ತವ್ಯ ನಿರ್ವಹಿಸುವಾಗ, ಪೊಲೀಸ್ ಠಾಣಾ ವ್ಯಾಪ್ತಿಯ ಮಾಸ್ತಿಕಟ್ಟೆ ಗ್ರಾಮದಲ್ಲಿ, ಅಸ್ವಸ್ಥ ಮಹಿಳೆಯೊಬ್ಬರು ವಾರಸುದಾರರಿಲ್ಲದೆ, ಪೋಷಣೆ ಇಲ್ಲದೇ ನಿರಾಶ್ರಿತರಾಗಿ ತಿರುಗುತ್ತಿರುವುದು ಕಂಡು ಬಂದಿರುತ್ತದೆ.
ನಂತರ ನಗರ ಪೊಲೀಸ್ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಹಾಗೂ ಸ್ಥಳೀಯ ಗ್ರಾಮಾಡಳಿತವು ಸೇರಿ, ಸದರಿ ಮಹಿಳೆಯ ಸಂಬಂಧಿಕರನ್ನು ಪತ್ತೆ ಮಾಡಿ ಸಂಪರ್ಕಿಸಿದ್ದು, ಮಹಿಳೆಯ ಚಿಕ್ಕಮ್ಮನವರು ಸದರಿ ಮಹಿಳೆಯ ಪೋಷಣೆಗೆ ಮುಂದೆ ಬಂದಿರುತ್ತಾರೆ. ನಂತರ ಮಹಿಳೆಯನ್ನು ಅವರ ಜೊತೆಗೆ ಕಳುಹಿಸಿ, ಆಶ್ರಯ ಕಲ್ಪಿಸಿಕೊಡಲಾಗಿರುತ್ತದೆ.
ಮತ್ತೊಂದು ಪ್ರಕರಣ
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ರಾತ್ರಿ ಗಸ್ತು ಸಿಬ್ಬಂಧಿಗಳಾದ ಶಿವರಾಜ್ ಸಿಪಿಸಿ ಮತ್ತು ಸುನಿಲ್ ಕುಮಾರ್ ಹೆಚ್.ಜಿ ರವರು ತ್ರಿಮೂರ್ತಿ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ರಸ್ತೆಯಲ್ಲಿ ಬಿದ್ದಿದ್ದ ಬ್ಯಾಗ್ ವೊಂದು ಸಿಕ್ಕಿರುತ್ತದೆ.
ಬ್ಯಾಗ್ ನಲ್ಲಿ ಮುಖ್ಯವಾದ ದಾಖಲೆಗಳು ಹಾಗೂ ನಗದು ಹಣವಿದ್ದು, ನಂತರ ಗಸ್ತು ಸಿಬ್ಬಂಧಿಗಳು ಸದರಿ ಬ್ಯಾಗ್ ನ ಮಾಲೀಕರನ್ನು ಪತ್ತೆ ಮಾಡಿ, ಅವರನ್ನು ಕರೆಸಿ, ಬ್ಯಾಗನ್ನು ಸುರಕ್ಷಿತವಾಗಿ ವಾರಸುದಾರರಿಗೆ ಹಿಂದಿರುಗಿಸಿದ್ದಾರೆ. ಬೀಟ್ ಸಿಬ್ಬಂಧಿಗಳ ಉತ್ತಮವಾದ ಕಾರ್ಯವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸಿಸಿದೆ.
Policemen who demonstrated duty and humanity


