SUDDILIVE || BHADRAVATHI
ನಿಷ್ಕ್ರಿಯ ಇಲಾಖೆಯಿಂದ ಮತ್ತೊಂದು ದಾಳಿ- sand raid by Mines and Geology Deportment
ಅಕ್ರಮ ಮರಳುಗಾರಿಕೆ ಮೇಲೆ ನಿಷ್ಕ್ರಿಯ ಇಲಾಖೆ ಎಂದೇ ಖ್ಯಾತಿ ಪಡೆದಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತೊಂದು ಕಾಟಾಚಾರದ ದಾಳಿಗೆ ಇಳಿದಿದೆ. ಹೊಳೆಹೊನ್ನೂರಿನ ಭಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಕಣ್ಣುವರೆಸುವ ದಾಳಿಗೆ ಇಲಾಖೆ ಮತ್ತೊಮ್ಮೆ ಇಳಿದಿರುವುದು ಇಲಾಖೆಯ ಜೀವಂತಿಕೆಯನ್ನ ಪ್ರದರ್ಶಿಸಿದೆ.
ಚಿಕ್ಕಕೂಡಲಿ ಗ್ರಾಮದಲ್ಲಿ ಕೃಪಾನಂದರ ಜಮೀನಿಂದ ಭದ್ರಾನದಿಗೆ ಹೋಗುವ ಜಾಗದಲ್ಲಿ 8-10 ಲಾರಿಲೋಡಿನಷ್ಟು ಮರಳನ್ನ ಸಂಗ್ರಹಿಸಿದ್ದಿದ್ದನ್ನ ಇಲಾಖೆ ದಾಳಿ ನಡೆಸಿ ಪಿಡಬ್ಲೂಡಿ ಇಲಾಖೆಗೆ ಹಸ್ತಂತರಿಸಿದೆ. ಅಚ್ಚರಿ ಎಂದರೆ ಎಷ್ಟು ಬಾರಿ ಇಲಾಖೆ ಈ ಭಾಗದಲ್ಲಿ ದಾಳಿ ನಡೆಸಿದೆಯೋ ಅಷ್ಟು ಬಾರಿಗಿಂತಲೂ ದುಪ್ಪಟ್ಟು ಅಕ್ರಮ ಮರಳುಗಾರಿಕೆ ನಡೆದಿರುವುದು ಈ ದಾಳಿಯ ಬಗ್ಗೆ ಅನುಮಾನವನ್ನ ಹೆಚ್ಚಿಸಿವೆ.
ಇಲಾಖೆಗಳ ಈ ಕಳ್ಳತನದಿಂದಲೇ ನೈಸರ್ಗಿಕವಾಗಿ ಸಿಗುವ ಮರಳಿಗೆ ಕನ್ನ ಹಾಕಲಾಗುತ್ತಿದೆ. ಸಂಪತ್ತುಗಳ ಲೂಟಿ ಇಲಾಖೆಯ ಅಧಿಕಾರಿಗಳ ಲಂಚಬಾಕತನದಿಂದಲೇ ನಡೆಯತ್ತಿದೆ ಎಂಬ ಸಾರ್ವಜನಿಕರ ಆರೋಪಗಳಲ್ಲಿ ಸತ್ಯವಿದೆ ಎಂಬುದಕ್ಕೆ ಈ ದಾಳಿಗಳು ಸಾಕ್ಷಿಯಾಗುತ್ತಿವೆ.
ದಾಳಿಗಳು ನಡೆದಿದ್ದ ಜಾಗದಲ್ಲಿಯೇ ಪದೇ ಪದೇ ನಡೆಯುತ್ತಿರುವುದು ಈ ಅನುಮಾನಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಎಲ್ಲವೂ ಮರಳು ವಾಶ್ ಮಾಡಿಯೇ ತೆಗೆಯುವುದರಿಂದ ನದಿಗೆ ಇಳಿದರೆ ಸಾಕು ಅಕ್ರಮ ಮರಳುಗಾರಿಕೆ ನದಿಯ ಒಡಲನ್ನ ಹೇಗೆ ಬಗೆದಿದಿದೆ ಎಂಬುದನ್ನ ತೋರಿಸುತ್ತದೆ. ಆದರೆ ದಾಳಿ ಮಾತ್ರ ಇಲಾಖೆ "ಅಗತ್ಯ" ಇರುವಾಗ ಮಾತ್ರ ದಾಳಿ ನಡೆಸುತ್ತದೆ.
ಇದರ ಜೊತೆಗೆ ಅಕ್ರಮ ಮರಳು ಗಣಿಗಾರಿಕೆ ತಡೆ ಪಡೆ ರಚನೆಯಾಗಿದ್ದು ಹಾಗಲುಕಾಯಿಗೆ ಬೇವಿನಕಾಯಿ ಸಾಕ್ಷಿ ಎಂಬಂತಾಗಿದೆ. ದಾಳಿ ವೇಳೆ ಮರಳು ಬಿಟ್ಟರೆ ಯಾರೂ ಬಂಧನವಾಗದೆ ಇರುವುದು ದಾಳಿಯ ಮುಖ್ಯ ಅಂಶವಾಗಿದೆ.
sand raid by Mines and Geology Deportment


