SUDDILIVE || SHIVAMOGGA
10 ದಿನಗಳಲ್ಲಿ ನಾಲ್ಕನೇ ಬಾರಿ ಪೆಟ್ರೋಲ್ ಡಿಸೇಲ್ ದರ ಏರಿಕೆ-Petrol, diesel prices hiked for the fourth time in 10 days
ಜನ ಸಾಮಾನ್ಯರಿಗೆ ಶಾಕ್ ಮೇಲೆ ಶಾಕ್. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತೆ ಏರಿಕೆಯಾಗಿವೆ. 2 ವಾರಗಳಲ್ಲೇ 4ನೇ ಬಾರಿಗೆ ತೈಲ ಬೆಲೆ ಏರಿಕೆ ಕಂಡಿದ್ದು, ಪೆಟ್ರೋಲ್ ಬೆಲೆ ₹2.84 ರಷ್ಟು ಏರಿಕೆಯಾಗಿದ್ದು, ಡೀಸೆಲ್ ₹2.81 ರಷ್ಟು ದುಬಾರಿಯಾಗಿದೆ.
ಕೇವಲ 2 ವಾರಗಳಲ್ಲೇ ಪೆಟ್ರೋಲ್ ಡೀಸೆಲ್ ದರ ನಾಲ್ಕನೇ ಬಾರಿಗೆ ಏರಿಕೆ ಆಗಿದ್ದು, ಮೇ.14 ರಿಂದ ಇಲ್ಲಿಯ ವರೆಗೆ ಶಿವಮೊಗ್ಗದಲ್ಲಿ 7.87 ರೂ. ಪೆಟ್ರೋಲ್ ಗೆ ಏರಿಕೆಯಾಗಿದ್ದರೆ, ಶಿವಮೊಗ್ಗದಲ್ಲಿ ₹92.07 ಪೈಸೆ ಇದ್ದ ಡೀಸೆಲ್ ದರ ₹99.88ಪೈಸೆಗೆ ಏರಿಕೆ ಆಗಿದೆ.
ಅಮೆರಿಕ-ಇರಾನ್ ಯುದ್ಧ ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ಬಿಕ್ಕಟ್ಟಿನಿಂದ ಭಾರತದಲ್ಲಿ ಇಂಧನ ಬೆಲೆಗಳು 10 ದಿನಗಳಲ್ಲಿ 4 ನೇ ಬಾರಿಗೆ ಏರಿಕೆ ಕಂಡಿದೆ.
ತೈಲ ಕಂಪನಿಗಳು ಮೇ 23 ರ ಶನಿವಾರವಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿತ್ತು. ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 92 ಪೈಸೆ ಮತ್ತು ಡೀಸೆಲ್‌ಗೆ 91 ಪೈಸೆ ಹೆಚ್ಚಿಸಲಾಗಿತ್ತು. ಇದಕ್ಕೂ ಮೊದಲು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಎರಡು ಬಾರಿ ಹೆಚ್ಚಿಸಲಾಗಿತ್ತು. ಮೇ 15 ರಂದು ಪೆಟ್ರೋಲ್ ₹3 ರಷ್ಟು ಮತ್ತು ನಂತರ ಮೇ 19 ರಂದು ಮತ್ತೆ ಲೀಟರ್‌ಗೆ 90 ಪೈಸೆ ಏರಿಕೆಯಾಗಿದ್ದು, ಇದೀಗ ಮತ್ತೆ ಗಾಯದ ಮೇಲೆ ಬರೆ ಎಳೆದಂತೆ ತೈಲ ಕಂಪನಿಗಳು ಬೆಲೆ ಏರಿಕೆ ಮಾಡ್ತಿವೆ.
ಇಂದು ಶಿವಮೊಗ್ಗದಲ್ಲಿ ಪೆಟ್ರೋಲ್ 111.83 ರೂ.(ಹಿಂದಿನ ದರ 108.99) ಡಿಸೇಲ್ 99.88(97.07) ಪವರ್ ಪೆಟ್ರೋಲ್ 121.76 ರೂ (118.93) ಟರ್ಬೋ ಡಿಸೇಲ್ 103.45 ರೂ.(100.64) ದರಗಳಿಗೆ ಸಿಗುತ್ತಿವೆ.
Petrol, diesel prices hiked for the fourth time in 10 days

