ಸಿಡಿಲು ಬಡಿದು ಕುರಿಗಳು ಸಾವು?Sheep killed by lightning?

 SUDDILIVE || BHADRAVATHI

ಸಿಡಿಲು ಬಡಿದು ಕುರಿಗಳು ಸಾವು? Sheep killed by lightning?     

Sheep, lightning

ಅಡಿಕೆ ತೋಟದಲ್ಲಿದ್ದ ಕುರಿಗಳ ಹಿಂಡು ದಿಡೀರನೇ ಸಾವು ಕಂಡಿವೆ.  ಭದ್ರಾವತಿಯ ಸಿರಿಯೂರಿನಲ್ಲಿ ತೋಟದಲ್ಲಿದ್ದ 50 ಕುರಿಗಳು ದಿಡೀರ್ ಸಾವು ಕಂಡಿದ್ದು  ಸಿಡಿಲು ಬಡಿದು ಕುರಿಗಳು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. 

ಉತ್ತರ ಕರ್ನಾಟಕದಿಂದ 300 ಕ್ಕೂ ಹೆಚ್ಚು ಕುರಿಯನ್ನ ಹೊಡೆದುಕೊಂಡು ಬರಲಾಗಿತ್ತು. ಸಿರಿಯೂರಿನಲ್ಲಿ ರವಿ ಎಂಬುವರ ಅಡಿಕೆ ತೋಟದಲ್ಲಿ ಕುರಿಗಳನ್ನ ಬಿಡಲಾಗಿತ್ತು. ಆದರೆ ಸಂಜೆ 7 ಗಂಟೆಯ ನಂತರ ಸಿಡಲು ಗುಡುಗು ಸಮೇತ ಮಳೆ ಬಿದ್ದಾಗ 50 ಕುರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ.‌

ನಾಳೆ ಸತ್ತ ಕುರಿಗಳ ಮರಣತ್ತೊರ ಪರೀಕ್ಷೆ ನಡೆಯಲಿದೆ. ಪಶುವೈದ್ಯರ ಸಮ್ಮುಖದಲ್ಲಿ ನಡೆಯಲಿದೆ. ಪರೀಕ್ಷೆಯ ನಂತರ  ಕುರಿ ಸತ್ತಿರುವ ಬಗ್ಗೆ ನಿಖರತೆ ತಿಳಿಯಲಿದೆ.  ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 

Sheep killed by lightning?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close