ಶ್ರೀಗಳ ಆಶೀರ್ವಾದಿಂದ ರಾಜ್ಯದಲ್ಲಿ ಪ್ರಾಮಾಣಿಕ ಸರ್ಕಾರ ತರುವೆ, ಬಿಎಸ್ ವೈ ಹೃದಯ ಸ್ಪರ್ಶಿ ಮಾತು- With the blessings of the Sree's, I will bring an honest government to the state, BSY's heart-touching words!

SUDDILIVE || SHIVAMOGGA

ಶ್ರೀಗಳ ಆಶೀರ್ವಾದಿಂದ ರಾಜ್ಯದಲ್ಲಿ ಪ್ರಾಮಾಣಿಕ ಸರ್ಕಾರ ತರುವೆ, ಬಿಎಸ್ ವೈ ಹೃದಯ ಸ್ಪರ್ಶಿ ಮಾತು- With the blessings of the sree's I will bring an honest government to the state, BSY's heart-touching words! 

Bsy, words
  

ಮತ್ತೊಮ್ಮೆ ರಾಜ್ಯದಲ್ಲಿ ಸ್ವಚ್ಛ ಮತ್ತು ಪ್ರಾಮಾಣಿಕತೆಯ ಸರ್ಕಾರವನ್ನ ಶ್ರೀಗಳ ಆಶೀರ್ವಾದದಿಂದ ತರುತ್ತೇನೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಪುನರುಚ್ಚರಿಸಿದ್ದಾರೆ. 

ಅವರು ನಗರದ ಫ್ರೀಡಂ ಪಾರ್ಕ್ ನಲ್ಲಿ ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಉತ್ಸವದ ಧಾರ್ಮಿಸಭೆ, ಕೃತಜ್ಞತಾ ಸಾಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂತಹ ಸ್ವಚ್ಛ ಸರ್ಕಾರವನ್ನ ಅಧಿಕಾರಕ್ಕೆ ತರಲು ನಾನು ರಾಜ್ಯಾದ್ಯಂತ ಓಡಾಡುವೆ ಎಂದು ಗುಡುಗಿದ್ದಾರೆ. 

ನಂತರ ಭಾವನಾತ್ಮಕವಾಗಿ ಮಾತನಾಡಿದ ಬಿಎಸ್ ವೈ ಪಂಚಪೀಠಾಧ್ಯಕ್ಷರ ಸಮಾಕ್ಷಮದಲ್ಲಿ ನನನ್ನ ಸನ್ಮಾನಿಸಿದ್ದೀರಿ. ಅದಕ್ಕೆ ನಾನು ಜೀವನದ ಕೊನೆಯ ವರೆಗೂ ಎಲ್ಲರನ್ನೂ ಒಂದೇ ಬೇಧ ಭಾವ ಮಾಡದೆ, ಒಂದೇ ತಾಯಿಯ ಮಕ್ಕಳಂತೆ ಬಾಳಿ ಬದಕುವ ವಾತಾವರಣವನ್ನ ನಿರ್ಮಿಸುತ್ತೇನೆ. ನನಗೆಪ್ರೀತಿ ವಾತ್ಸಲ್ಯ ತೋರಿದ್ದೀರಿ ಅದಕ್ಕೆ ಅಭಾರಿಯಾಗಿರುವೆ. ಶ್ರೀಗಳನ್ನ ನೋಡಿ ಮಳೆ ಸುರಿದಿದೆ. ಈ ಕ್ಷಣ ನನಗೆ  ಮರೆಯದಾಗದ ಸುದಿನವಾಗಿದೆ ಎಂದರು. 

ಹುಟ್ಟಿದ್ದು ಬೂಕನಕೆರೆ ಬೆಳೆದಿದ್ದು ಮಂಡ್ಯ ಶಿಕಾರಿಪುರದಲ್ಲಿ ರಾಜಕಾರಣ ನಡೆಸಿದ್ದೇನೆ. ಶಿಕಾರಿಪುರದ ಜನರಿಗೆ ಈ ವೇದಿಕೆಯಿಂದಲೇ ಅಭಿನಂದಿಸುವೆ ಎಂದ ಅವರು ಎಲ್ಲರೂ ನನನ್ನ ಹಾಡಿ ಹೊಗಳಿದ್ದೀರಿ, ಆಯನೂರು ಮಂಜುನಾಥ್ ತಮ್ಮದೇ ಭಾಷಣದಲ್ಲಿ ನನ್ನ ಹಾಡಿದ್ದಾರೆ ಎಂದು ಹೃದಯಸ್ಪರ್ಶಿ ಮಾತುಗಳನ್ನಾಡಿದರು. 

With the blessings of the sree's I will bring an honest government to the state, BSY's heart-touching words! 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close