SUDDILIVE || SHIVAMOGGA
ಜಿಲ್ಲೆಯಲ್ಲಿ ಗೋಹತ್ಯೆ ತಡೆಗಟ್ಟಲು ವಿಹೆಚ್ ಪಿ ಮನವಿ-VHP appeals to prevent cow slaughter in the district
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವಂಶಗಳ ಅಕ್ರಮ ಸಾಗಾಣಿಕೆ ಮತ್ತು ಗೋವಂಶ ಹತ್ಯೆ ತಡೆಗಟ್ಟಲು ಕಟ್ಟು ನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಇಲ್ಲ ಬೃಹತ್ ಪ್ರತಿಭಟನೆ ನಡೆಸುವುದಾಗಿ ಬಜರಂಗ ದಳದ ಪ್ರಾಂತ್ಯ ಸುರಕ್ಷಾ ಪ್ರಮುಖ್ ರಾಜೇಶ್ ಗೌಡ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬರಲಿರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕಾನೂನುಬಾಹಿರವಾಗಿ ಗೋವಂಶದ ಸಾಗಾಣಿಕೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗೋವಂಶ ಬಲಿ(ಕುರ್ಬಾನಿ) ನಡೆಯುವ ಸಾಧ್ಯತೆಯಿದೆ. ಇದನ್ನು ತಡೆಗಟ್ಟಲು ಈ ಕೆಳಗಿನ ಕಾನೂನು ಕ್ರಮಗಳನ್ನು ಜರುಗಿಸಬೇಕೆಂದು ವಿನಂತಿಸಿದ್ದಾರೆ.
ಪೊಲೀಸರು ತಮ್ಮ ಠಾಣೆಯ ಬೀಟ್ ಪೋಲೀಸರನ್ನು ಉಪಯೋಗಿಸಿ ಅವರವರ ವ್ಯಾಪ್ತಿಯಲ್ಲಿರುವ ಅಕ್ರಮ ಕಸಾಯಿಖಾನೆಗಳನ್ನು ಗುರುತಿಸಿ ದಾಳಿ ಮಾಡಿ ಶಾಶ್ವತವಾಗಿ ನಿಲ್ಲಿಸಬೇಕು. ಜಾನುವಾರು ಹತ್ಯೆ ನಡೆದ ಮನೆ, ಕಟ್ಟಡ, ಖಾಲಿ ಜಮೀನುಗಳನ್ನು ಜಪ್ತಿ ಮಾಡಿ ಸರಕಾರಕ್ಕೆ ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳಬೇಕು. ಆರೋಪಿಗಲಿಗೆ 7 ವರ್ಷ ಶಿಕ್ಷೆ ಹಾಗೂ ಜಾನುವಾರು ವಧೆ ಅಥವಾ ವಧೆ ಪ್ರಯತ್ನಕ್ಕೆ ಪ್ರತಿಯೊಂದು ಜಾನುವಾರಿಗೆ ಒಂದು ಲಕ್ಷ ದಂಡ ವಿಧಿಸಬೇಕು. ಹಾಗೂ ಅನಧಿಕೃತ ಸ್ಥಳ, ಕಟ್ಟಡಗಳಲ್ಲಿ ಕಟ್ಟಿ ಹಾಕಿದ ಜಾನುವಾರುಗಳನ್ನು ವಧೆಗಾಗಿ ತಯಾರಿ ಎಂದು ಪರಿಗಣಿಸಿ ಸ್ವಾಧೀನ ಪಡಿಸಬೇಕು. ಮತ್ತು ಅದನ್ನು ಯಾರಿಗೂ ವಾಪಸ್ ಕೊಡದೆ ಸರಕಾರಿ ಗೋಶಾಲೆಗೆ ಹಸ್ತಾಂತರಿಸಬೇಕು ಎಂದಿದ್ದಾರೆ.
ಸಣ್ಣ ಸಣ್ಣ ವಸ್ತುಗಳಾದ ಚಿನ್ನ ಕಳ್ಳತನ ಮಾಡುವವರನ್ನು ಬಂಧಿಸಲು ಸಾಧ್ಯ ಇರುವ ಠಾಣಾ ಪೋಲಿಸರಿಗೆ ಇಷ್ಟು ದೊಡ್ಡ ಗಾತ್ರದ ಜಾನುವಾರುಗಳ ಕಳ್ಳತನ, ಅಕ್ರಮ ಕಸಾಯಿಖಾನೆಗಳಲ್ಲಿ ವಧೆ ಮಾಡುವುದನ್ನು ತಡೆಯಲು ಖಂಡಿತ ಸಾಧ್ಯವಿದೆ. ಅಕ್ರಮ ಕಸಾಯಿಖಾನೆ ಜಾನುವಾರು ವಧೆಯ ಪ್ರತಿ ಪ್ರಕರಣಗಳ ಸಂಧರ್ಭದಲ್ಲಿ 'ಯಾವ ಕಾರಣಕ್ಕೆ ಬೀಟ್ ಪೋಲಿಕಸರಿಗೆ ಮಾಹಿತಿ ಸಿಗಲಿಲ್ಲ. ಪೊಲೀಸ್ ಇಲಾಖೆಗೆ ಮೊದಲೇ ತಡೆಯಲು ಸಾಧ್ಯವಾಗಲಿಲ್ಲ ಯಾಕೆ " ಎಂದು ಇಲಾಖಾ ತನಿಖೆ ನಡೆಸಿ ವ್ಯವಸ್ಥೆ ಯೊಳಗಿನ ದೋಷಗಳನ್ನು ಗುರುತಿಸಿ ಸರಿಪಡಿಸಬೇಕು ಹಾಗೂ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಅಕ್ರಮ ಕಸಾಯಿಖಾನೆಗಳಲ್ಲಿ ಮಾಂಸ ಖರೀದಿಸುವವರನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷಿಸಬೇಕು. ಪ್ರತಿಯೊಂದು ಬೀಫ್ ಸ್ಟಾಲ್ ಗಳಲ್ಲಿ ಬೀಫ್ ಮಾರಾಟ ಆದಾಗ ತನಿಖೆ ನಡೆಸಬೇಕು. ಪರ ರಾಜ್ಯಗಳಿಂದ ಬೀಫ್ ತಂದಿರುವೆನೆಂದು ಹೇಳಿದರೆ ತನಿಖೆ ನಡೆಸಿ ಅದು FSSAI ಮತ್ತು ಅದರ ಮಾರಾಟ ಸಾಗಾಟ ನಿಯಮಾವಳಿ ತಪ್ಪಿದಲ್ಲಿ ಮಾಂಸ ವಶ ಪಡಿಸಬೇಕು. ಹಾಗೂ ಅದರ ಬಗ್ಗೆ ತೀವ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಹಲವಾರು ಕಡೆ ರಾಜ್ಯದ ಅಕ್ರಮ ಕಸಾಯಿಖಾನೆಗಳಲ್ಲಿ ವಧೆ ನಡೆಸಿ ಹೊರ ರಾಜ್ಯದಿಂದ ತಂದಿದ್ದು ಎಂದು ಸುಳ್ಳು ಹೇಳಿ ಮಾರಾಟ ಮಾಡುತ್ತಿರುವ ಬಗ್ಗೆ ಆಗಾಗ್ಗೆ ವರ್ತಮಾನ ಕೇಳಿ ಬರುತ್ತಿದ್ದು ಅದರ ಬಗ್ಗೆಯೂ ತೀವ್ರ ತನಿಖೆ ನಡೆಸಿ ತಪ್ಪಿತಸ್ತರಿಗೆ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕು.
ಅಕ್ರಮ ಜಾನುವಾರು ಸಾಗಾಟ ಠಾಣಾ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಿ ಯಾವುದೇ ವಾಹನದಲ್ಲಿ ಕಾನೂನು ನಿಯಮಾವಳಿ ಮೀರಿ ಜಾನುವಾರು ಸಾಗಾಟ ಆಗದಂತೆ ತಡೆಯಲು ಈಗಿನಿಂದಲೇ 24 ಗಂಟೆ ಗಸ್ತು ಸ್ಮಾಡ್ ನಿಯೋಜಿಸಬೇಕು. ಎಲ್ಲ ರೀತಿಯ ಕಾರುಗಳು ಮತ್ತು ಖಾಸಗಿ ವಾಹನ ಗಳಲ್ಲಿ ಅಕ್ರಮ ಜಾನುವಾರು ಸಾಗಾಟ ನಡೆದ ಪ್ರಕರಣಗಳು ಇರುವುದರಿಂದ ಖಾಸಗಿ ವಾಹನಗಳನ್ನು ಕಾರುಗಳನ್ನು ಹಾಲಿನ ಟ್ಯಾಂಕರ್ ಕ್ಲೋಜ್ ಕಂಟೈನರ್ ಗಳನ್ನು ತೀವ್ರ ತಪಾಸಣೆ ನಡೆಸಬೇಕು ಎಂದರು.
ನಿಗಾ ಇಡಲಿಪ್ರಚಾರ ಮಾಡಲಿ
ಬಕ್ರೀದ್ ಸಂಧರ್ಬದಲ್ಲಿ ದನ ಕರು, ಹೋರಿ ಹದಿಮೂರು ವರ್ಷದ ಒಳಗಿನ ಎಮ್ಮೆ ಕೋಣ ಇವುಗಳ ವಧೆ. ಬಲಿ (ಕುರ್ಬಾನಿ) ನಿಷೇಧ ಇರುವ ಬಗ್ಗೆ ಪೊಲೀಸ್ ಮತ್ತು ಇತರ ಇಲಾಖಾ ವತಿಯಿಂದ ವ್ಯಾಪಕ ಪ್ರಚಾರ ಮಾಡಬೇಕು.
ಈಗಾಗಲೇ ಅಕ್ರಮ ಗೋಸಾಗಾಟ ಹಾಗೂ ವಧೆ ಮಾಡಿದ ಆರೋಪದ ಪ್ರಕರಣಗಳಲ್ಲಿ ಜಾಮೀನು ಪಡೆದು ಹೊರಗಿರುವ ಆರೋಪಿಗಳನ್ನು ಕರೆಸಿ ಎಚ್ಚರಿಕೆ ಕೊಡಬೇಕು ಹಾಗೂ ಅವರಮೇಲೆ ತೀವ್ರ ನಿಗಾ ಇಡಬೇಕು.ಈಗಾಗಲೇ ಬಾಂಡ್ ಮೇಲೆ ಬಿಡುಗಡೆಗೊಂಡ ವಾಹನಗಳ ಮೇಲೂ ತೀವ್ರ ನಿಗಾ ಇರಿಸಬೇಕು
ಈ ಕೆಳಗಿನ ಕಾಯ್ದೆಗಳ ಅನುಷ್ಠಾನಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು:
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಜಾನುವಾರು ಸಾಗಾಟ ನಿಯಮಾವಳಿ 2021 ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, ೧೯೬೦ (PCA Act 1960): ಮತ್ತು ಅದರ ಪ್ರಾಣಿಗಳ ಸಾಗಾಟ ನಿಯಮಾವಳಿ 1978 ಕಸಾಯಿಖಾನೆ ನಿಯಮಾವಳಿ 2001,Central Motor Vehicle act and rules
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ (FSSAI)ವಾಯು ಮತ್ತು ಜಲ ಮಾಲಿನ್ಯ ನಿಯಂತ್ರಣ ಕಾಯಿದೆ ಹಾಗೂ ನಿಯಮಾವಳಿಗಳು.ಹಿಂದುಗಳಿಗೆ ಪೂಜನೀಯವಾಗಿರುವ ಗೋವಂಶವನ್ನು ಸಂವಿಧಾನದ ಚೌಕಟ್ಟಿನಲ್ಲಿ ರಕ್ಷಿಸಲು ವಿಶ್ವ ಹಿಂದೂ ಪರಿಷದ ಮತ್ತು ಭಜರಂಗದಳ ಕಟಿ ಬದ್ಧವಾಗಿದೆ ತಿಳಿಸುತ್ತೇವೆ.ಈ ಬಾರಿ ಯಾವುದೇ ಅಕ್ರಮ ಗೋಸಾಗಾಟ ಗೋವಂಶ ಹತ್ಯೆ ನಡೆಯದಂತೆ ಸರ್ವ ಕ್ರಮ ಕೈಗೊಳ್ಳುವ ಜವಾಬ್ದಾರಿ ನಿಭಾಯಿಸುವಲ್ಲಿ ನಮ್ಮಿಂದಾಗುವ ಸಹಕಾರ ನಾವು ನೀಡಲು ತಯಾರಿದ್ದೇವೆ ಎಂದು ತಿಳಿಸಿದರು.
VHP appeals to prevent cow slaughter in the district

