SUDDILIVE || SHIVAMOGGA
ಲಗೇಜ್ ಆಟೋ ಚಾಲಕರೆ ಈತನ ಟಾರ್ಗೆಟ್-His target is luggage auto drivers.
![]() |
| ಸಂತ್ರಸ್ತ ಮಧುವಿಗೆ ವಂಚಕ ಕಳುಹಿಸಿದ್ದ ಡಾಕ್ಟರ್ ಫೋಟೊ |
ಶಿಕಾರಿಪುರ ಸಾರ್ವಜನಿಕಆಸ್ಪತ್ರೆಗೆ ಮೆಡಿಸಿನ್ ಬಾಕ್ಸ್ ನ್ನ ಸಾಗಿಸ ಬೇಕಿದೆ. ಬಾಡಿಗೆ ಹೊಡೆಯಬೇಕು ಮೆಗ್ಗಾನ್ ಬಳಿ ಬನ್ನಿ ಎಂದು ನಂಬಿಸಿ ನಾಲ್ವರು ಆಟೋ ಚಾಲಕರಿಗೆ ವಂಚಿಸಿರುವ ಘಟನೆ ಸೆನ್ ಪೊಲೀಸ್ ಠಾಣೆಯಲ್ಲಿ ಆನ್ ಲೈನ್ ದೂರು ದಾಖಲಿಸಲಾಗಿದೆ.
ವೈದ್ಯರೊಬ್ಬರ ಫೊಟೊ ಹಾಕಿ ಲಗೇಜ್ ಆಟೋ ಬೇಕಿದೆ. ಮೆಗ್ಗಾನ್ ಆಸ್ಪತ್ರೆಯ ವೈದ್ಯ ನಾನು ಶಿವಮೊಗ್ಗದ ಮೆಗ್ಗಾನ್ ನಿಂದ ಶಿಕಾರಿಪುರದ ಸಾರ್ವಜನಿಕರ ಆಸ್ಪತ್ರೆಗೆ ಹೋಗಬೇಕು ಬೇಗ ಬನ್ನಿ ಎಂದು ಹೇಳುವ ಈತ ಮತ್ತೆ ಮೊಬೈಲ್ ಕರೆ ಮಾಡಿ ಮೊಬೈಲ್ ಹಾಳಾಗಿದೆ ಎರಡು ಸಾವಿರ ರೂ. ಹಣಹಾಕಿ ಮೆಗ್ಗಾನ್ ಬಳಿ ಬರುತ್ತಿದ್ದಂತೆ ಕೊಡುವೆ ಎಂದು ಸ್ಕ್ಯಾನರ್ ಹಾಕ್ತಾನೆ. ಹೀಗೆ ಈತ ನಾಲ್ವರು ಆಟೋ ಚಾಲಕರಿಗೆ ವಂಚಿಸಿದ್ದಾನೆ.
ಹಣಹಾಕಿದ ಮೇಲೆ ಮೊಬೈಲ್ ಸ್ವಿಚ್ ಆಫ್ ಬರಲಿದೆ. ಆದರೆ ಲಗೇಜ್ ಆಟೋ ಚಾಲಕರನ್ನೇ ಹುಡುಕಿ ವಂಚಿಸಿರುವುದು ಅಚ್ಚರಿ ಮೂಡಿಸಿದೆ ಈ ನಾಲ್ವರಲ್ಲಿ ಮಧು ಎಂಬುವರು ಸೆನ್ ಠಾಣೆಗೆ ಆನ್ ಲೈನ್ ದೂರು ದಾಖಲಿಸಿದ್ದಾರೆ. ಉತ್ತರ ಭಾರತದ ಕಡೆಯವರು ಕನ್ನಡಮಾತನಾಡೊಲ್ಲ ಅವರಿಗೆ ಒಟಿಪಿ ನೀಡಬೇಡಿ. ಅನುಮಾನಗಳಿದ್ದರೆ ಹತ್ತಿರದ ಠಾಣೆಗೆ ಕರೆ ಮಾಡಲು ಪೊಲೀಸರು ತಿಳಿಸಿದ್ದಾರೆ.
ವಂಚನೆಯಿಂದ ಸುರಕ್ಷಿತವಾಗಲು ಪೊಲೀಸರು ಜನರ ಬಳಿ ಹೀಗೆ ಜಾಗೃತಿ ಮೂಡಿಸಿದ್ದಾರೆ. ಆದರೆ ಸ್ಥಳೀಯವಾಗಿ ಆಟೋ ಚಾಲಕರನ್ನ ವಂಚಿಸುವ ಬಗ್ಗೆ ಮತ್ತೊಂದು ದಿಕ್ಕಿಗೆ ವಂಚನೆ ಪ್ರಕರಣ ಎಳೆದೊಯ್ದಿದೆ.
His target is luggage auto drivers.

