SUDDILIVE || SHIVAMOGGA
ಸಂಭ್ರಮದಿಂದ ಸಾಗಿ ಬಂದ ಅಡ್ಡಪಲ್ಲಕ್ಕಿ ಉತ್ಸವ-The Addapallakki festival was celebrated with great enthusiasm
ಶಿವಮೊಗ್ಗದಲ್ಲಿ ವೀರಶೈವ ಮಹಾಸ್ವಾಮಿಗಳ ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಆರಂಭಗೊಂಡಿದೆ. ಗಾಂಧಿಬಜಾರಿನ ಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ಅಡ್ಡ ಪಲ್ಲಕ್ಕಿ ಉತ್ಸವ ಈಗ ಗೋಪಿ ವೃತ್ತ ದಾಟಿ ಜೈಲುವೃತ್ತದ ಬಳಿ ಸಾಗುತ್ತಿದೆ.
ತೆರೆದ ವಾಹನದಲ್ಲಿ ಮುಂದುಗಡೆ ಡೊಳ್ಳುವುದಕ್ಕೆ ವಾದ್ಯಗಳಿಂದ ಮುಂದುವರೆದ ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರು ತೆರೆದ ವಾಹನದಲ್ಲಿ ನಮಸ್ಕರಿಸುತ್ತಾ ಮುಂದೆ ಸಾಗಿದರೆ ಉತ್ಸವದಲ್ಲಿ ಸಂಸದ ರಾಘವೇಂದ್ರ ಅವರು ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು
ಮೊದಲಿಗೆ ಬಾಳೆಹೊನ್ನೂರು ಪೀಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರನ್ನ ಹೊತ್ತ ಅಡ್ಡಪಲ್ಲಕ್ಲಿ ಮುಂದಿನ ಸಾಲಿನಲ್ಲಿದ್ದರೆ ಅದರ ಹಿಂದೆ ಕಾಶಿಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಎಡೆಯೂರ ಬಾಳೆಹೊನ್ನೂರು ಖಾಸಾ ಶಾಖಾ ಮಠದ ರೇಣುಕ ಶಿವಾಚಾರ್ಯ ಅವರು ಸೇರಿದಂತೆ ಐದು ಜನ ಮಹಾಸ್ವಾಮಿಗಳನ್ನ ಭಕ್ತರು ಬೆಳ್ಳಿ ಲೇಪಿತ ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಅಡ್ಡಪಲ್ಲಕ್ಕಿಯ ಉತ್ಸವ ಫ್ರೀಡಂ ಪಾರ್ಕ್ ತಲುಪಲಿದ್ದು ಅಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ದಾರಿಯುದ್ದಕ್ಕೂ ಸ್ವಾಮಿಗಳು ಕುಳಿತ ಅಡ್ಡಪಲ್ಲಕ್ಕಿ ಕೆಳಗೆ ಸಾರ್ವಜನಿಕರು ನುಸುಳಿ ಸ್ವಾಮೀಜಿಗಳ ಆಶೀರ್ವಾದ ಪಡೆದಿರುವುದು ಉತ್ಸವದ ಮತ್ತೊಂದು ವಿಶೇಷವಾಗಿದೆ.
The Addapallakki festival was celebrated with great enthusiasm


