ಸಹಕಾರಿ ಧುರೀಣ ವಿಜಯ ದೇವು ವಿರುದ್ಧ ಸಂತ್ರಸ್ತರ ಗಂಭೀರ ಆರೋಪ, ಆಡಳಿತಾಧಿಕಾರಿಗಳ ನೇಮಕಕ್ಕೆ ಆಗ್ರಹ-Victims make serious allegations against cooperative leader Vijay Devu, demand appointment of administrative officers

 SUDDILIVE || SHIVAMOGGA

ಸಹಕಾರಿ ಧುರೀಣ ವಿಜಯ ದೇವು ವಿರುದ್ಧ ಸಂತ್ರಸ್ತರ ಗಂಭೀರ ಆರೋಪ, ಆಡಳಿತಾಧಿಕಾರಿಗಳ ನೇಮಕಕ್ಕೆ ಆಗ್ರಹ-Victims make serious allegations against cooperative leader Vijay Devu, demand appointment of administrative officers    

Victim, allegation


ಮೂರು ಸಹಕಾರಿ ಬ್ಯಾಂಕ್ ಗಳಿಂದ ಮೋಸಹೋಗಿದ್ದು, ಇದರ ಬೆನ್ನ ಹಿಂದೆ ಇರುವ ಸಹಕಾರಿ ಕ್ಷೇತ್ರದ ಧುರೀಣ ವಿಜಯ ದೇವು ಅವರ ಕೈವಾಡದ ಶಂಕೆ ಇದೆ. ಹಾಗಾಗಿ  ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಕಾಲಂ 64 ರ ವಿಚಾರಣೆ ಜರುಗಿಸುವಂತೆ ಸಂತ್ರಸ್ತರಲ್ಲಿ ಒಬ್ಬರಾದ ತೀರ್ಥಹಳ್ಳಿಯ ವಿಹಂಗಮ ರೆಸಾರ್ಟ್ ನ ಮಾಲೀಕ  ಕಾನೀನ ಕಡಿದಾಳ ಆರೋಪಿಸಿದರು. 

ಸುದ್ದಿಗೋಷ್ಠಿ ನಡೆಸಿದ ಅವರು, ಸಹ್ಯಾದ್ರಿ, ಸಂಮೃದ್ಧಿ ಪ್ಲಾಂಟೆಷನ್ ಸೊಸೈಟಿ, ಶರಾವತಿ ಪತ್ತಿನ ಸಹಕಾರ ಸಂಘ ಮೂರು ಸಹಕಾರ ಸಂಸ್ಥೆಯಲ್ಲಿ ಅವ್ಯವಹಾರ ನಡೆದಿದೆ. ಸಾಲಪಡೆಯುವ ವೇಳೆ ಖಾಲಿ ಹಾಳೆಯಲ್ಲಿ ಸಹಿ ಪಡೆದು ದುರುಪಯೋಗ ಪಡಿಸಲಾಗುತ್ತಿದೆ. ಇದಕ್ಕೆ ಅಧ್ಯಕ್ಷರಾದ ವಿಜಯ ದೇವು ಅವರಿದ್ದು, ಅಮಾಯಕರ ಸಾಲಪಡೆದಾಗ ಅದಕ್ಕೆ ಬೇಕಾದ ಲೆಕ್ಕ ಕೊಡದೆ ಕಳ್ಳಾಟವಾಡಿಸಿ ಸುಪ್ರೀಂ ಕೋರ್ಟ್ ಗೆ ಬೇಕಾದರೂ ಹೋದರೂ ನಾನು ಲೆಕ್ಕ ಕೊಡೆನು ಎಂದು ಸವಾಲು ಹಾಕುತ್ತಾರೆ. ಕಾರಣ ಹಣದ ಮದ ಇವರಲ್ಲಿದೆ ಎಂದು ದೂರಿದರು. 

2008 ರಿಂದ ಸಾಲದ ಸೌಲಭ್ಯ ಪಡೆದಿದ್ದೇನೆ ಇದಕ್ಕೆ ಲೆಕ್ಕ‌ಕೊಡಿ ಎಂದಾಗ ಕೊಡಲಿಲ್ಲ. ಆಡಿಟ್ ಆಕ್ಷೇಪಣೆಯಿದೆ ಎಂಬ ಸೂಬಬನ್ನ ಈ ಮೂರು ಸೌಹಾರ್ಧ ಸೊಸೈಟಿಗಳು ನೀಡಿವೆ. ಡೆಪ್ಯೂಟಿ ಡೈರೆಕ್ಟರ್ ಗಳು ಅಚ್ಚರಿ ಪಟ್ಟು ಪತ್ರ ಬರೆದಿದ್ದಾರೆ. ಅಡಿಷನಲ್ ರಿಜಿಸ್ಟ್ರಾರ್,  ಪ್ರಿನ್ಸಿಪಲ್ ಸೊಸೈಟಿ, ಕೋಆಪರೇಟರ್ ಸೊಸೈಟಿ ಮತ್ತು ಸಿಎಂ ಬಳಿ ಹೋಗಿ ಮಾತನಾಡಿದ್ದೇವೆ. ಕೆಲಸ ಆಗದೆ ಇದ್ದಾರೆ ಡೆಪ್ಯೂಟಿ ಡೈರೆಕ್ಟರ್ ಸಹಕಾರ ಇಲಾಖೆ 64 ಅಡಿಯಲ್ಲಿ ತನಿಖೆ ಆರಂಭಿಸಲು ಸೂಚಿಸಿದ್ದಾರೆ. ಇದನ್ನ ಸ್ವಾಗತಿಸಿದ್ದೇವೆ.

ಸಹ್ಯಾದ್ರಿ ವಿವಿದ್ದೋದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಘಕ್ಕೆ ಬೆಂಗಳೂರಿನ ಜಂಟಿ ನಿಬಂಧಕರನ್ನ, ಶರಾವತಿ ಪತ್ತಿನ ಸಹಕಾರಸಂಘಕ್ಕೆ ಚಿತ್ರದುರ್ಗದ ಉಪನಿಬಂಧಕರನ್ನ, ಸಂವೃದ್ಧಿ ಪ್ಲಾಂಟೇಷನ್ ಉತ್ಪನ್ನ ಮತ್ತು ಮಾರಾಟ ಸಂಘಕ್ಕೆ ಮಂಗಳೂರಿನ ಉಪನಿಬಂಧಕರನ್ನ ನೇಮಿಸಲಾಗಿದೆ. ಆದಷ್ಟು ಬೇಗ ಈ ವಿಜಯ ದೇವು ಅವರ ಕಪಿಮುಷ್ಠಿಯಿಂದ ಈ ಮೂರು ಸಹಕಾರಿ ಬ್ಯಾಂಕ್ ಗಳನ್ನ ಮುಕ್ತಗೊಳಿಸಿ ಆಡಳಿತಾಧಿಕಾರಿಗಳನ್ನ ನೇಮಿಸಬೇಕೆಂದು ಆಗ್ರಹಿಸಿದರು.  

ಈ ಬ್ಯಾಂಕಿನಲ್ಲಿ 40 ಜನ ಮೋಸಹೋಗಿದ್ದಾರೆ. ವಂಚನೆ ಪ್ರಕರಣವಾಗಿದ್ದರಿಂದ ಪೊಲೀಸ್ ಇಲಾಖೆಗೆ ಮುಂದಿನ ದಿನಗಳಲ್ಲಿ ದೂರಲಾಗುವುದು. 3.10 ಕೋಟಿ ಹಣ ಸಾಲವನ್ನ ಪಡೆದಾಗ ನನ್ನ ಆಸ್ತಿ ಹೊಡೆಯುವ ಹುನ್ನಾರವನ್ನ ಸೊಸೈಟಿ ಮಾಡಿವೆ. ವಿಜಯ ದೇವು ಅವರ ನಿರ್ದೇಶನದಲ್ಲಿ ನಮ್ಮ‌ಆಸ್ತಿ ಹೊಡೆಯುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು. 

ಅನ್ನಪೂರ್ಣ ಆರ್ ಜವಳಿ ಅವರು ಸಹ ಸಹ್ಯಾದ್ರಿ ವಿವಿಧ್ದೋದೇಶ ಸಹಕಾರ ಬ್ಯಾಂಕ್ ನಲ್ಲಿ ಚೀಟಿ ಹಾಕಿ ಸುಮಾರು 10 ಲಕ್ಷ ರೂ. ವಂಚನೆ ಮಾಡಲಾಗಿದೆ ಎಂದು ದೂರಿದರು. 

Victims make serious allegations against cooperative leader Vijay Devu, demand appointment of administrative officers

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close