SUDDILIVE || SHIVAMOGGA
ರೇಪ್ ಆರೋಪಿ ವಕೀಲ ಭರತ್ ಬಂಧನ-Rape accused lawyer Bharat arrested
ಭದ್ರಾವತಿಯಲ್ಲಿ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್ ಮಾಡಿದ್ದ ಆರೋಪದಲ್ಲಿ ವಕೀಲ ಭರತ್ ನನ್ನ ಪೇಪರ್ ಟೌನ್ ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿ ತಾಲೂಕು ಬಾರಂದೂರಿನಲ್ಲಿ ಮೇ.15 ರಂದು ರೇಪ್ ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ವಕೀಲ ಭರತ್ ಬಂಧನವಾಗಿದೆ.
ಬೆಂಗಳೂರಿನ ಮನೆಯೊಂದರಲ್ಲಿ ಬಿಜೆಪಿ ಮುಖಂಡ ಭರತ್ ನನ್ನ ಬಂಧಿಸಿ, ಪಿಎಸ್ ಐ ಕುಮಾರ್ ನೇತೃತ್ವದ ತಂಡದಿಂದ ಕಾರ್ಯಚರಣೆ ನಡೆಸಲಾಗಿದೆ. ಬೆಂಗಳೂರಿನಿಂದ ಆರೋಪಿಯನ್ನ ತಡರಾತ್ರಿ ಕರೆತರಲಾಗಿದೆ.
ಪಿಎಸ್ ಐ ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ನಾಗರಾಜ್, ಬಸವರಾಜ್ ರಿಂದ ಕಾರ್ಯಚರಣೆ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ. ಮಹಿಳೆಯ ಅತ್ಯಾಚಾರ ಮಾಡಿ ಬೆದರಿಕೆ ಹಾಕಿದ ಆರೋಪದಡಿ ಭರತ್ ನ ಬಂಧನವಾಗಿದೆ.
ಭರತ್ ಭದ್ರಾವತಿ ಬಿಜೆಪಿ ಯುವ ಮೋರ್ಚಾದ ಗ್ರಾಮಾಂತರ ಅಧ್ಯಕ್ಷನಾಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಪತಿಯ ಸ್ನೇಹಿತನೆಂದು ಪರಿಚಯಿಸಿಕೊಂಡು ವಿವಾಹಿತ ಮಹಿಳೆಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ಎಸಗಿ ರೇಪ್ ಮಾಡಲಾಗಿದೆ ಎಂದು ದೂರು ದಾಖಲಾಗಿತ್ತು. ಒಂದು ತಿಂಗಳ ಹಿಂದೆ ನಡೆದಿದ್ದ ಪ್ರಕರಣ ಮೇ. 15 ರಂದು ದೂರು ದಾಖಲಾಗಿತ್ತು.
ಇನ್ಸ್ಟಾಗ್ರಾಮ್ ನಲ್ಲಿ 23 ವರ್ಷದ ಮಹಿಳೆ ಪರಿಚಯ ಮಾಡಿಕೊಂಡಿದ್ದ ಆರೋಪಿ ಭರತ್ ಪತಿಯ ಸ್ನೇಹಿತನೆಂದು ನಂಬಿಸಿ ದಿನಸಿ ಅಂಗಡಿಗೆ ಪದೇ ಪದೇ ಬರುತ್ತಿದ್ದನು. ಅಲ್ಲಿಯೂ ಮಹಿಳೆಯ ಮೈ, ಕೈ ಮುಟ್ಟಿ ಕಿರುಕುಳ ನೀಡುತ್ತಿದ್ದ ಎಂಬ ಆರೋಪವಿತ್ತು. ಸ್ನೇಹಿತ ಭರತ್ ಮನೆಗೆ ಬರ್ತಾನೆ ಹಣ ನೀಡು ಎಂದು ಸಂತ್ರಸ್ತೆ ಪತಿ ಹೇಳಿದ್ದ. ಕಳೆದ ಏಪ್ರಿಲ್ 11 ರಂದು ಪತಿ ಸೂಚನೆಯಂತೆ ಹಣ ನೀಡಲು ಮುಂದಾಗಿದ್ದ ಮಹಿಳೆ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು.
ಒಂಟಿಯಾಗಿದ್ದ ಮಹಿಳೆ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿರುವ ಆರೋಪ ಮಾಡಲಾಗಿತ್ತು. ಯಾರಿಗಾದ್ರೂ ಹೇಳಿದ್ರೇ ಮಾನ ಹಾನಿ ಮಾಡುವುದಾಗಿ ಪ್ರಾಣ ಬೆದರಿಕೆಯನ್ನ ಆರೋಪಿ ಭರತ್ ಮಾಡಿದ್ನು. ಅತ್ಯಾಚಾರದ ಬಳಿಕ ಹಣದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದನು.
ಭರತ್ ನ ಇನ್‌ಸ್ಟಾಗ್ರಾಮ್ ನ್ನ ಪತ್ನಿ ಬ್ಲಾಕ್ ಆಗಿದ್ದನ್ನು ನೋಡಿ ಪತಿ ಪ್ರಶ್ನಿಸಿದಾಗ ಪತ್ನಿ ಸತ್ಯ ಬಿಚ್ಚಿಟ್ಟಿದ್ದಾಳೆ. ಪತ್ನಿಯ ಹೆಸರಿನಲ್ಲಿ ವಾಟ್ಸಾಪ್ ಚಾಟ್ ಮಾಡಿ ಪತಿ ಆರೋಪಿಯ ಅಸಲಿ ಬುದ್ಧಿ ಪತ್ತೆ ಹಚ್ಚಿದ್ದಾನೆ. ಅತ್ಯಾಚಾರ ಎಸಗಿದ ಆರೋಪಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ದಂಪತಿಗಳು ಭದ್ರಾವತಿಯ ಪೇಪರ್ ಟೌನ್ ಠಾಣೆಯಲ್ಲಿ ಭರತ್ ವಿರುದ್ಧ ರೇಪ್ ಪ್ರಕರಣ ದಾಖಲಿಸಿದ್ದರು.
ದೂರ ದಾಖಲಾದ ಬೆನ್ನಲ್ಲೇ ತಲೆ ಮರೆಸಿಕೊಂಡಿದ್ದ ಆರೋಪಿ ಭರತ್ ನನ್ನ ಬಂಧಿಸಿ, ಪೊಲೀಸರು ವಿಚಾರಣೆ ನಡೆಸಿದ್ದಾರೆ.
Rape accused lawyer Bharat arrested

