THIRTHAHALLI- ಎಪಿಎಂಸಿ ಎದುರು ಅಂಗಡಿಗೆ ಬೆಂಕಿ - ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ- THIRTHAHALLI- Fire breaks out at shop opposite APMC - Fire brigade on duty
ಪಟ್ಟಣದ ಬಾಳೆಬೈಲು ಸಮೀಪದ ಎಪಿಎಂಸಿ ಎದುರಿನ ಫುಡ್ ಪಾಯಿಂಟ್ ಹಾಗೂ ಪಕ್ಕದ ಕಟಿಂಗ್ ಶಾಪ್ ನಲ್ಲಿ ಬೆಳಗಿನ ಜಾವ ಏಕಾಏಕಿ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಎರಡು ಅಂಗಡಿಗಳಿಗೆ ಬೆಳಗಿನ ಜಾವ 3 ಗಂಟೆಗೆ ಬೆಂಕಿ ಹತ್ತಿಕೊಂಡಿದ್ದು ಬೆಂಕಿಯ ಕೆನ್ನಾಲಿಗೆ ವಿಪರೀತ ಇತ್ತು ಎಂದು ಹೇಳಲಾಗಿದೆ. ನಂತರ ಅಗ್ನಿಶಾಮಾಕದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಬೆಳಗಿನ ಜಾವಾ 3 ಗಂಟೆಯಾಗಿದ್ದ ಕಾರಣ ಯಾರು ಇರಲಿಲ್ಲ ಹಾಗಾಗಿ ಯಾವುದೇ ಅವಘಡ ಸಂಭವಿಸಿಲ್ಲ.
ಆದರೆ ಅಂಗಡಿಯೊಳಗೆ ಇದ್ದಂತಹ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಎಷ್ಟರ ಮಟ್ಟಿಗೆ ಹಾನಿಯಾಗಿದೆ ಎಂಬ ಮಾಹಿತಿ ತಿಳಿಯಬೇಕಿದೆ..
THIRTHAHALLI- Fire breaks out at shop opposite APMC - Fire brigade on duty
