ಕುರಿ ತರಲು ಹೊರಟವರಿಗೆ ಶಿವಮೊಗ್ಗದಲ್ಲಿ ಅಪಘಾತ-Accident in Shivamogga for those who were going to bring sheep

SUDDILIVE || SHIVAMOGGA

ಕುರಿ ತರಲು ಹೊರಟವರಿಗೆ ಶಿವಮೊಗ್ಗದಲ್ಲಿ ಅಪಘಾತ-Accident in Shivamogga for those who were going to bring sheep


 

ಶಿವಮೊಗ್ಗದ ವಿದ್ಯಾನಗರ ರೈಲ್ವೆ ಮೇಲ್ಸೇತುವೆಯ ಮೇಲೆ ಓಮಿನಿ ಮತ್ತು ಸೀಮೆಂಟ್ ಹೊತ್ತ ಲಾರಿ ಮುಖಾಮುಖಿ ಡಿಕ್ಕಿ ಆಗಿದ್ದು, ಮುಖಾಮುಖಿ ಡಿಕ್ಕಿಯಲ್ಲಿ ಓಮಿನಿಯಲ್ಲಿದ್ದ 8 ಜನರಿಗೆ  ಗಾಯವಾಗಿದೆ.

8 ಜನರಲ್ಲಿ 4 ಜನರ ಸ್ಥಿತಿ ಗಂಭೀರವಾಗಿದೆ. ತೀವ್ರ ಗಾಯವಾಗಿದ್ದು ತೀರ್ವ ಗಾಯಗೊಂಡ ವ್ಯಕ್ತಿತನ್ನ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಘಟನೆ ಗುರುವಾರ ಬೆಳಗ್ಗಿನ ಜಾವ 1ಗಂಟೆಗೆ ಸಂಭವಿಸಿದೆ.

ಸೀಮೆಂಟ್ ಹೊತ್ತ ಲಾರಿಯನ್ನ ಹೊಳೆಹೊನ್ನೂರು ಮೂಲಕ ಶಿವಮೊಗ್ಗಕ್ಕೆ ಬರುತ್ತಿದ್ದು ಶಿವಮೊಗ್ಗದ ಮೂಲಕ ಸಾಗರಕ್ಕೆ ಹೊತ್ತೊಗುತ್ತಿತ್ತು. ಈ ವೇಳೆ ವಾಹನವೊಂದನ್ನ ಹಿಂದಕ್ಕೆ ಹಾಕಲು ಹೋದ ವೇಳೆ ಎದುರಿನಿಂದ ಬಂದ ಲಾರಿಗೆ ಗುದ್ದಿದ್ದಾರೆ. ಈ ವೇಳೆ ಓಮಿನಿ ವಾಹನದಲ್ಲಿ 8 ಜನ ಪ್ರಯಾಣಿಸುತ್ತಿದ್ದರು.

ಸ್ಥಳೀಯ ಮಾಹಿತಿ ಪ್ರಕಾರ, ಆದ್ರಿಮಳೆ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಆಚರಿಸುವ ಹಬ್ಬಕ್ಕೆ ಕುರಿ ತರಲು ಶಿರಸಿ- ಸಿದ್ದಾಪುರದ ನಿವಾಸಿಗಳು ಓಮ್ನಿಯಲ್ಲಿ ಚಿತ್ರದುರ್ಗಕ್ಕೆ ತೆರಳುತ್ತಿದ್ದರು. ಈ ವೇಳೆ ವಿದ್ಯಾನಗರ ಮೇಲ್ಸೇತುವೆಯಲ್ಲಿ ಈ ಘಟನೆ ನಡೆದಿದೆ.

ಕೃಷ್ಣ ಕೊಲ್ಲೂರು 63 ವರ್ಷ ಇವರಿಗೆ ಅಪಘಾತದಲ್ಲಿ ಕಾಲು ಮುರಿದಿದೆ. ದಿವಾಕರ್ 50ವರ್ಷ ಅಣ್ಣಪ್ಪ 31 ವರ್ಷ ದೇವೇಂದ್ರ 45 ವರ್ಷ, ಸುರೇಶ್ 55 ವರ್ಷ, ಮಂಜುನಾಥ್ 45 ವರ್ಷ ಈಶ್ವರ್ 43 ವರ್ಷ ಹೇರಂಬ 41 ವರ್ಷ ಇವರುಗಳು ಓಮ್ನಿ ವಾಹನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ ಪ್ರಕರಣ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Accident in Shivamogga for those who were going to bring sheep

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close