ಮಹಿಷಿ ಉತ್ತರಾಧಿ ಮಠ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ₹1.01 ಕೋಟಿ ಮೌಲ್ಯದ ಚಿನ್ನಾಭರಣ ವಶ- Police crack Mahishi Uttaradhi Mutt theft case: Gold ornaments worth ₹1.01 crore seized

 SUDDILIVE || SHIVAMOGGA

ಮಹಿಷಿ ಉತ್ತರಾಧಿ ಮಠ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ₹1.01 ಕೋಟಿ ಮೌಲ್ಯದ ಚಿನ್ನಾಭರಣ ವಶ- Police crack Mahishi Uttaradhi Mutt theft case: Gold ornaments worth ₹1.01 crore seized   

Police, crack

ಶಿವಮೊಗ್ಗ, ಜೂ.18: ತೀರ್ಥಹಳ್ಳಿ ತಾಲೂಕಿನ ಮಹಿಷಿ ಗ್ರಾಮದ ಶ್ರೀ ಸತ್ಯಸಂಧಗುರು ಉತ್ತರಾಧಿ ಮಠದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಮಾಳೂರು ಪೊಲೀಸರು ಕ್ಷಿಪ್ರವಾಗಿ ಭೇದಿಸಿದ್ದು, ಸುಮಾರು ₹1.01 ಕೋಟಿ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಜೂನ್ 17 ರಂದು ಮಠದಲ್ಲಿ ಕಳ್ಳತನ ನಡೆದ ಕುರಿತು ಮಾಳೂರು ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 085/2026ರಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ, ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್‌ಪಿ ಅರವಿಂದ ಕಲಗುಂಜಿ ಅವರ ಸೂಚನೆಯಂತೆ ವಿಶೇಷ ತಂಡವನ್ನು ರಚಿಸಲಾಗಿತ್ತು.

ತೀರ್ಥಹಳ್ಳಿ ಪೊಲೀಸ್ ನಿರೀಕ್ಷಕ ಇಮ್ರಾನ್ ಬೇಗ್, ಮಾಳೂರು ವೃತ್ತ ನಿರೀಕ್ಷಕ ರಾಜಶೇಖರ, ಸಬ್ ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಲಿಂಗೇಗೌಡ, ಸುರಕ್ಷಿತ್, ಕುಮಾರ್, ರವಿ, ಸುರೇಶ್ ನಾಯ್ಕ್, ಸಂತೋಷ್ ಮತ್ತು ವಿನಯ್ ಕುಮಾರ್ ಅವರನ್ನೊಳಗೊಂಡ ತಂಡವು ವಿಶೇಷ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿತು.

ಕಾರ್ಯಾಚರಣೆಯ ವೇಳೆ ಶಿವಮೊಗ್ಗದ ಗಾಂಧಿನಗರ ನಿವಾಸಿ ರಾಘವೇಂದ್ರ ಆಚಾರ್ಯ (25) ಎಂಬಾತನನ್ನು ಜೂನ್ 17 ರಂದು ರಾತ್ರಿ 10 ಗಂಟೆ ಸುಮಾರಿಗೆ ವಶಕ್ಕೆ ಪಡೆಯಲಾಗಿದೆ. ಆರೋಪಿಯಿಂದ ಕಳ್ಳತನ ಮಾಡಲಾಗಿದ್ದ ಸುಮಾರು 780 ಗ್ರಾಂ ತೂಕದ 16 ಬಂಗಾರದ ಹಲಗಾರತಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಅಂದಾಜು ಮೌಲ್ಯ ₹1,01,40,000 ಎಂದು ತಿಳಿದುಬಂದಿದೆ.

ಇದು ಮಹಿಷಿ ಮಠದಲ್ಲಿ ನಡೆದ ಘಟನೆ ಅಲ್ಲ

ನಿನ್ನೆ ಮಹಿಷಿ ಮಠದಲ್ಲಿ ಕಳುವಾಗಿದೆ ಎಂಬ ಪ್ರಾಥಮಿಕ ಮಾಹಿತಿಯ ಆಧಾರದ ಮೇರೆಗೆ ಸುದ್ದಿ ಮಾಡಲಾಗಿತ್ತು. ಆದರೆ ಮಠದ ವತಿಯಿಂದ ಸ್ಪಷ್ಟನೆ ಸಿಕ್ಕಿದೆ. ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಮೂಲ ಮಹಾ ಸಂಸ್ಥಾನದ ಪೀಠಾದಿಪತಿಗಳಾದ, ಶ್ರೀ ರಘುವಿಜಯತೀರ್ಥರು, ಮಹಿಷಿ ಉತ್ತರಾಧಿ ಮಠದ ಶ್ರೀ ಸತ್ಯಸಂಧರತೀರ್ಥರ ಆರದನೆ ಪ್ರಯುಕ್ತ ೩ ದಿನಗಳ ಕಾಲ ಅತಿಥಿಗಳಾಗಿ ಬಂದಿದ್ದ ಸಂದರ್ಭದಲ್ಲಿ. ಅವರ ಮಠದವರೇ, ತಮ್ಮ ಸಂಚಾರದ ಸಿಬ್ಬಂದಿಗಳಲ್ಲಿ ಒಬ್ಬರು ಈ ಕೃತ್ಯವನ್ನು ಎಸಗಿ, ನಂತರ ಪೊಲೀಸ್ ವಿಚಾರಣೆಯ ಸಂದರ್ಭದಲ್ಲಿ ಸಿಕ್ಕಿ ಬಿದ್ದಿದ್ದು, ಎಲ್ಲಾ ಚಿನ್ನದ ವಸ್ತುವನ್ನು ವಾಪಸ್ ಪಡೆಯಲಾಗಿದೆ. ನಂತರ ಕೂಡಲಿ ಮಠದ ಸ್ವಾಮಿಗಳು ತಮ್ಮ ಸಂಚಾರವನ್ನು ಮುಂದು ವರೆಸಿದ್ದಾರೆ ಎಂದು ಸ್ಪಷ್ಟನೆ ನೀಡಲಾಗಿದೆ. 

ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಕಳ್ಳತನ ಪ್ರಕರಣವನ್ನು ತ್ವರಿತವಾಗಿ ಭೇದಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ.

Police crack Mahishi Uttaradhi Mutt theft case: Gold ornaments worth ₹1.01 crore seized

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close