ಅಭಿಮಾನಿಯೊಂದಿಗೆ ನಟಯಶ್ ಅಮೇರಿಕಾದಿಂದ ಮಾತನಾಡಿ ಆರೋಗ್ಯ ವಿಚಾರಣೆ- Actor Yash talks to fan from America, inquires about health

 SUDDILIVE || SHIVAMOGGA

ಅಭಿಮಾನಿಯೊಂದಿಗೆ ನಟಯಶ್ ಅಮೇರಿಕಾದಿಂದ ಮಾತನಾಡಿ ಆರೋಗ್ಯ ವಿಚಾರಣೆ- Actor Yash talks to fan from America, inquires about health     

Actor, yash

ಜೀವನವೇ ಹಾಗೆ, ನಾವು ಅಂದುಕೊಂಡಿದ್ದು ಯಾವುದೂ ನಡೆಯುವುದಿಲ್ಲ. ಅಂದುಕೊಳ್ಳದೇ ಇರುವುದು ಆಕಸ್ಮಿಕವಾಗಿ ನಡೆದುಬಿಡುತ್ತದೆ. ಕೆಲವೊಮ್ಮೆ ಕೆಲವೊಂದು ಆಕಸ್ಮಿಕಗಳು ಲಾಟರಿಯ ಮೂಲಕ ಜೀವನವನ್ನೇ ಬದಲಿಸಿದರೆ, ಇನ್ನು ಕೆಲವು ಆಕಸ್ಮಿಕಗಳು ಆರೋಗ್ಯಕ್ಕೆ ಪೆಟ್ಟು ಕೊಡುವ ಮೂಲಕ ವ್ಯಕ್ತಿಯ ಜೀವನ, ಸೌಂದರ್ಯ ಅಷ್ಟೇ ಅಲ್ಲದೆ ಆತನ ಬದುಕಿನ ಭರವಸೆಯನ್ನೇ ಕಳೆದುಕೊಳ್ಳುವಂತೆ ಮಾಡುತ್ತವೆ.

ಇದೇ ರೀತಿಯ ಒಂದು ಕರುಣಾಜನಕ ಪ್ರಸಂಗ ಶಿವಮೊಗ್ಗದಲ್ಲಿ ನಡೆದಿದೆ. ಸದಾ ಉತ್ಸಾಹದಿಂದ ಎಲ್ಲರೊಡನೆ ಬೆರೆತು, ಎಲ್ಲರನ್ನೂ ಪ್ರೀತಿಸುತ್ತಾ ಜೀವನ ನಡೆಸಬೇಕೆಂದುಕೊಂಡಿದ್ದ ಯುವಕನ ಬದುಕಿನಲ್ಲಿ ನಡೆದ ಆಕಸ್ಮಿಕ ಅನಾರೋಗ್ಯ ಆತನ ನೆಮ್ಮದಿಯನ್ನೇ ಕಸಿದುಕೊಂಡುಬಿಟ್ಟಿದೆ.  ಶಿವಮೊಗ್ಗದ ಸುನೀಲ್ ಎಂಬಾತನ ಬಗ್ಗೆ. ಶಿವಮೊಗ್ಗ ಮೂಲದ 32 ವರ್ಷದ ಯುವಕ ಸುನೀಲ್ ಅವರಿಗೆ ಇದೀಗ ರೆಕ್ಟಲ್ ಕ್ಯಾನ್ಸರ್ ಆವರಿಸಿಕೊಂಡಿದೆ. ಇಬ್ಬರು ಸಹೋದರರು ಹಾಗೂ ತಾಯಿಯೊಂದಿಗೆ ಸುಖವಾಗಿ ಜೀವನ ನಡೆಸುತ್ತಿದ್ದ ಈತನ ಬಾಳಿನಲ್ಲಿ ಬಂದ ಕ್ಯಾನ್ಸರ್, ಇದೀಗ ಕಣ್ಮುಚ್ಚಿ ತೆರೆಯುವುದರೊಳಗೆ 4ನೇ ಹಂತ ತಲುಪಿದೆ.


ಆತನ ಕುಟುಂಬವು ಹೇಗಾದರೂ ಮಾಡಿ ಸುನೀಲ್‌ನನ್ನು ಬದುಕಿಸಿಕೊಳ್ಳಬೇಕೆಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದೆ. ಆದರೆ, ಕುಟುಂಬ ಹಾಗೂ ಸಹೋದರರು ಎಷ್ಟೇ ಪ್ರಯತ್ನಿಸಿದರೂ ಚಿಕಿತ್ಸೆಗೆ ಬೇಕಾದ ಸಂಪೂರ್ಣ ಹಣವನ್ನು ಹೊಂದಿಸಲು ಸಾಧ್ಯವಾಗಲಿಲ್ಲ. ಆದರೂ ಸಹ ಆತನ ಸಹೋದರರು ಛಲ ಬಿಡಲಿಲ್ಲ. ಅಣ್ಣ, ನಾವು ನಿನ್ನನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುತ್ತೇವೆ. ಕ್ಯಾನ್ಸರ್‌ಗೆ ನೀನು ಸೋಲಲು ನಾವು ಬಿಡುವುದಿಲ್ಲ, ಅದನ್ನು ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಅಣ್ಣನಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳ ಮೂಲಕ ಸಹಾಯ ಹಸ್ತ ಚಾಚಿ ಹಣ ಸಂಗ್ರಹಿಸಿ, ಚಿಕಿತ್ಸೆಯನ್ನು ಮುಂದುವರಿಸಿದ್ದಾರೆ. ಅಣ್ಣನನ್ನು ಉಳಿಸಿಕೊಳ್ಳಲು ಸಹೋದರರು ಪಡುತ್ತಿರುವ ಈ ಪಾಡು, ಕಷ್ಟ ಬಂದಾಗ ಒಡಹುಟ್ಟಿದವರು ಹೇಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಾರೆ ಎಂಬುದಕ್ಕೆ ಒಂದು ಸ್ಪಷ್ಟ ಉದಾಹರಣೆಯಾಗಿದೆ.

ಸುನೀಲ್ ಅವರ ಆರೋಗ್ಯಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ವಿಚಾರ ನಟ ರಾಕಿಂಗ್ ಸ್ಟಾರ್ ಅವರ ಗಮನಕ್ಕೆ ಬಂದಿದೆ. ಆ ಸಮಯದಲ್ಲಿ ಶೂಟಿಂಗ್‌ಗಾಗಿ ಅಮೆರಿಕದಲ್ಲಿದ್ದ ಯಶ್, ವಿಷಯ ತಿಳಿಯುತ್ತಿದ್ದಂತೆ ಅಲ್ಲಿಂದಲೇ ಸುನೀಲ್ ಅವರಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ಸುನೀಲ್ ಅವರ ಆರೋಗ್ಯ ವಿಚಾರಿಸಿದ ನಟ, ಅವರ ಕುಟುಂಬದ ಸದಸ್ಯರೊಂದಿಗೂ ಮಾತನಾಡಿ ಸಾಂತ್ವನ ಹೇಳಿದ್ದಾರೆ.

Actor Yash talks to fan from America, inquires about health

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close